Chikkaballapur News: ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಮೂಲಕ ತಂದೆಯ ಹೆಸರುಳಿಸಿದ ಉಪನ್ಯಾಸಕ
ನಮ್ಮ ತಂದೆ ತಾಯಿ ಶಾಲೆಯ ಮುಖ ನೋಡಿದವರಲ್ಲ. ಅವರಿವರ ಮನೆಯಲ್ಲಿ ಜೀತ ಗಾರಿಕೆ ಕೆಲಸ ಮಾಡಿಕೊಂಡು, ನಂತರದಲ್ಲಿ ಕೂಲಿ ನಾಲಿ ಮಾಡಿದರೂ ನಾನು ನನ್ನ ತಂಗಿ ತಮ್ಮ ಮೂರು ಮಕ್ಕಳನ್ನು ಉನ್ನತ ಶಿಕ್ಷಣದವರೆಗೆ ಓದಿಸಿ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ. ಇವರ ಋಣವನ್ನು ತೀರಿಸುವ ಸಣ್ಣ ಪ್ರಯತ್ನವೇ ಈ ಪ್ರತಿಭಾ ಪುರಸ್ಕಾರ

ಶಿಡ್ಲಘಟ್ಟ ತಾಲೂಕು ಚೀಮಂಗಲ ಪ್ರೌಢಶಾಲೆಯಲ್ಲಿ ನಡೆದ ಶಾರದ ಪೂಜೆಯಲ್ಲಿ ಅತಿಥಿ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ಅವರು ತಮ್ಮ ತಂದೆಯ ಹೆಸರಿನಲ್ಲಿ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಶಿಡ್ಲಘಟ್ಟ: ಮಕ್ಕಳ ಪಾಲಿಗೆ ಅಪ್ಪ ಅಮ್ಮನೇ ನಿಜವಾದ ದೇವರು ಎಂಬುದು ಸುಳ್ಳಲ್ಲ. ಮೋಟಪ್ಪ ಹೆಸರಿನ ನನ್ನಪ್ಪ ನಾವು 5 ಮಂದಿ ಮಕ್ಕಳ ಬದುಕಿನ ಶಕ್ತಿಯಾದರೆ, ಸಹನಾ ಮೂರ್ತಿ ತಾಯಿ ಕರಗಮ್ಮ ನಮ್ಮ ಬಾಳಿನ ಉಸಿರಾಗಿದ್ದಾರೆ ಎಂದು ಪತ್ರಕರ್ತ ಹಾಗೂ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ತಿಳಿಸಿದರು. ತಾಲೂಕಿನ ಚೀಮಂಗಲ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾ ರಂಭದಲ್ಲಿ ತಂದೆಯ ಹೆಸರಿನಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರ ಸ್ಕರಿಸಿ ಪ್ರೋತ್ಸಾಹಿಸಿದ ನಂತರ ಮಾತನಾಡಿದರು.
ಇದನ್ನೂ ಓದಿ: Chikkaballapur News: ಕೈವಾರ ತಾತಯ್ಯ ಬರೆದಿರುವ ಕಾಲಜ್ಞಾನ ಎಂದೆಂದಿಗೂ ಅಜರಾಮರ: ತಹಸೀಲ್ದಾರ್ ಮಹೇಶ್ ಪತ್ರಿ
ನಮ್ಮ ತಂದೆ ತಾಯಿ ಶಾಲೆಯ ಮುಖ ನೋಡಿದವರಲ್ಲ. ಅವರಿವರ ಮನೆಯಲ್ಲಿ ಜೀತ ಗಾರಿಕೆ ಕೆಲಸ ಮಾಡಿಕೊಂಡು, ನಂತರದಲ್ಲಿ ಕೂಲಿ ನಾಲಿ ಮಾಡಿದರೂ ನಾನು ನನ್ನ ತಂಗಿ ತಮ್ಮ ಮೂರು ಮಕ್ಕಳನ್ನು ಉನ್ನತ ಶಿಕ್ಷಣದವರೆಗೆ ಓದಿಸಿ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ. ಇವರ ಋಣವನ್ನು ತೀರಿಸುವ ಸಣ್ಣ ಪ್ರಯತ್ನವೇ ಈ ಪ್ರತಿಭಾ ಪುರಸ್ಕಾರ. 570 ಅಂಕಗಳಿಸಿದ ರೇವಂತ್, 456 ಅಂಕಗಳಿಸಿದ ನಯನ, 450 ಅಂಕಗಳಿಸಿದ ಜಯಶ್ರೀ ಇವರನ್ನು ಸನ್ಮಾನಿಸುವ ಮೂಲಕ ತಂದೆಯನ್ನೇ ಸನ್ಮಾನಿಸಿದ ಭಾವ ನನ್ನಲ್ಲಿ ಮೂಡಿದೆ ಎಂದರು.
ಚೆನ್ನಾಗಿ ಓದಿ ಒಳ್ಳೆಯ ಅಂಕಗಳಿಸಿದರೆ,ಇಲ್ಲವೇ ಉದ್ಯೋಗಕ್ಕೆ ಸೇರಿ ಕೈತುಂಬ ಸಂಬಳ ಪಡೆದಾಕ್ಷಣ ಶಿಕ್ಷಣಕ್ಕೆ ಸಾರ್ಥಕತೆ ಬರುವುದಿಲ್ಲ.ಇವೆಲ್ಲದರ ಜತೆಗೆ ಕಷ್ಟದಲ್ಲಿ ಓದುವ ವಿದ್ಯಾರ್ಥಿಗಳನ್ನು ಗುರ್ತಿಸಿ ಓದಿಗೆ ನೆರವು ನೀಡುವುದು,ತಂದೆ ತಾಯಿ,ಗುರುಹಿರಿಯರಿಗೆ ಗೌರವ ಕೊಡುವುದೇ ನಿಜವಾದ ಶಿಕ್ಷಣವಾಗಿದೆ.ನೀವೆಲ್ಲಾ ಇದನ್ನು ತಪ್ಪದೆ ಪಾಲಿಸಿ ಎಂದರು.
ಗುರುಗಳ ಮಾರ್ಗದರ್ಶನ ಮತ್ತು ಸತತ ಪರಿಶ್ರಮವೇ ಸಾಧನೆಯ ಕೀಲಿಕೈ.ಸರಕಾರಿ ಶಾಲೆ ಗಳಲ್ಲಿ ಪ್ರತಿಭಾವಂತ ಬೋಧಕವರ್ಗವಿದೆ. ಇವರ ಗರಡಿಯಲಿ ಓದಿರುವ ಸಾಕಷ್ಟು ಮಕ್ಕಳು ಇಂದು ಉನ್ನತವಾದ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ.ಹೀಗಾಗಿ ಶೈಕ್ಷಣಿಕ ಉನ್ನತಿ ಯೊಂದಿಗೆ ಬದುಕಿನಲ್ಲಿ ಮಾನವೀಯ ಮೌಲ್ಯಗಳಿಗೂ ಜೀವತುಂಬಬೇಕಿದೆ ಎಂದು ಕಿವಿ ಮಾತು ಹೇಳಿದರು.
ಮುಖ್ಯೋಪಾಧ್ಯಾಯ ಶಿವಶಂಕರ್ ಮಾತನಾಡಿ ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಗಳ ಬದುಕಿಗೆ ತಿರುವು ನೀಡುವ ಹಂತವಾಗಿದೆ. ನಿರಂತರ ಕಲಿಕೆ, ಕಲಿತಿದ್ದರ ಪುರ್ನಮನನ, ಗುಂಪು ಚರ್ಚೆ, ಮೌನ ಓದು, ಕಠಿಣ ವಿಷಯಗಳ ಬಗ್ಗೆ ಗುರುಗಳಿಂದ ಪರಿಹಾರ ಕಂಡು ಕೊಂಡು ನಿರಾಳವಾಗುವುದು, ಪರೀಕ್ಷೆಯ ದಿನ ಅಗತ್ಯ ಸಲಕರಣೆಗಳೊಂದಿಗೆ ಒಂದು ಗಂಟೆ ಮುಂಚೆಯೇ ಕೇಂದ್ರಕ್ಕೆ ತೆರಳುವುದು,ಸಾವಧಾನವಾಗಿ ಪರೀಕ್ಷೆ ಬರೆಯುವ ಬಗ್ಗೆ ತಿಳಿಸಿ ಕೊಟ್ಟರಲ್ಲದೆ ನಿಮ್ಮ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ,ಸಮಾಜ ಸೇವಕ ಜಿ.ಮುನಿರಾಜು ಮಾತನಾಡಿ, ಹುಟ್ಟಿದ ಮೇಲೆ ಸಾಯಲೇ ಬೇಕು. ಸಾಯುವ ಮೊದಲು ಸಾಧನೆ ಮಾಡಿ ಸಾಯೋಣ. ಅಂಬೇಡ್ಕರ್ ಅಬ್ದುಲ್ ಕಲಾಂ,ಲತಾಮAಗೇಶ್ಕರ್ ಬದುಕು ನಿಮಗೆ ದಾರಿದೀಪವಾಗಲಿ. ಪರೀಕ್ಷೆಗೆ ಹೆದರಿ ಸಾಯುವುದಕ್ಕಿಂತ ಇದ್ದು ಜಯಿಸುವುದೇ ನಿಜವಾದ ಸಾಧನೆಯಾಗಲಿದೆ. ನಿಮ್ಮ ಗುರುಗಳು ನಿಮ್ಮ ಮೇಲಿಟ್ಟುರುವ ವಿಶ್ವಾಸ,ಉತ್ತಮ ಫಲಿತಾಂಶಕ್ಕಾಗಿ ಹಾಕಿರುವ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಿ, ನಿಮ್ಮ ಸಾಧನೆ ನಿಮಗಷ್ಟೇ ಅಲ್ಲದೆ ಶಾಲೆಗೆ ಗೌರವ ತರುವಂತಾಗಲಿ ಎಂದು ಹಾರೈಸಿದರು.
ಗಣಿತ ಶಿಕ್ಷಕ ಶಿವಕುಮಾರ್, ಸಿಆರ್‌ಪಿ ಹೇಮಲತಾ, ಶಿಕ್ಷಕರ ಸಂಘದ ಅಧ್ಯೆಕ್ಷೆ ಸರಸ್ವತಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸುವ ಸರಳ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಿಲಯಪಾಲಕ ಮಲ್ಲಿಕಾರ್ಜುನ,ಸ್ಥಳೀಕ ಉತ್ತಮಚಂದ್ ಮಾತನಾಡಿ ದರು. ತಾಟಪರ್ತಿ ಮುನಿಯಪ್ಪ ಮಾತನಾಡಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕಗಳಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು ಬಹುಮಾತ ನೀಡುವುದಾಗಿ ಘೋಷಣೆ ಮಾಡಿದರು.
ಇದೇ ವೇಳೆ ನವೋದಯ ವಸತಿ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಶಾಲೆಗೆ ಶೇ.100 ಹಾಜರಾತಿಯುಳ್ಳ 6 ವಿದ್ಯಾರ್ಥಿಗಳು, ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ 3 ಮಂದಿ ವಿದ್ಯಾರ್ಥಿ ಗಳನ್ನು ಕೂಡ ಸನ್ಮಾನಿಸಲಾಯಿತು. ಇದೇ ವೇಳೆ ಪ್ರವೇಶ ಪತ್ರ ಹಾಗೂ ಪರೀಕ್ಷಾ ಸಲಕರಣೆ ಗಳನ್ನು ಕೂಡ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್,ದೇವಪ್ಪನಗುಡಿ ಪ್ರೌಢಶಾಲೆಯ ಶಿಕ್ಷಕಿ ಮಂಜುಳ, ಶಿಕ್ಷಕರಾದ ಶ್ರೀನಿವಾಸ್, ಪ್ರದೀಪ್ ಮತ್ತಿತರರು ಇದ್ದರು.