Monday, 4th November 2024

ಮಲ್ಪೆ ಬೀಚ್​ನಲ್ಲಿ ಈಜು: ನಾಲ್ವರ ರಕ್ಷಣೆ

ಉಡುಪಿ: ಮಲ್ಪೆ ಬೀಚ್​ನಲ್ಲಿ ಈಜುವ ವೇಳೆ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ.

ಬಿಜಾಪುರ ಮೂಲದ ಮೋಬಿನ್, ಸೋಫಿಯಾ,ಅಹ್ಮದ್ ಮತ್ತು ಮೊಹಮ್ಮದ್ ಎಂಬುವರನ್ನು ಮಲ್ಪೆ ಜೀವ ರಕ್ಷದ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಬಿಜಾಪುರ ಮೂಲದ ಇವರು ಮಲ್ಪೆ ಬೀಚ್​​ಗೆ ಪ್ರವಾಸಕ್ಕೆಂದು ಬಂದಿದ್ದಾರೆ. ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಮೀರಿ ಈಜಲು ತೆರಳಿದ ವೇಳೆ ಸಮುದ್ರದ ಅಲೆಗಳಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ಇತರೆ ಪ್ರವಾಸಿಗರು ಮಾಹಿತಿ ನೀಡಿದ್ದರಿಂದ ಎಲ್ಲರ ಜೀವ ಉಳಿದಿದೆ.

ಕಡಲು ಪ್ರಕ್ಷುಬ್ದವಾಗಿದ್ದರಿಂದ ಈ ನಾಲ್ವರು ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಅಲೆಯ ಅಬ್ಬರ ಜೋರಾಗಿದ್ದು, ಅಲೆಯ ರಭಸಕ್ಕೆ ಸಿಲುಕಿಕೊಂಡು,ಪ್ರಾಣ ರಕ್ಷಣೆಗಾಗಿ ಕೂಗಿದ್ದಾರೆ. ಸದ್ಯ ಈ ನಾಲ್ವರನ್ನು ಜೀವ ರಕ್ಷಕ ದಳದ ಭರತ್​, ಮಧು, ರವಿ ಹಾಗೂ ವಿನೋದ್​​ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ. ಇದೇ ತಂಡ ನಿನ್ನೆ ಸಂಜೆಯೂ ನಾಲ್ವರನ್ನು ರಕ್ಷಿಸಿತ್ತು.