Wednesday, 11th December 2024

ಕವರ್ ಸಮೇತ ಚಾಕಲೇಟ್ ನುಂಗಿದ ಬಾಲಕಿ ಸಾವು

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಬಳಿ ಬಾಲಕಿಯೊಬ್ಬಳು ಕವರ್ ಸಮೇತ ಚಾಕಲೇಟ್ ನುಂಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.

ಮೃತ ಬಾಲಕಿ 6 ವರ್ಷದ ಸಮನ್ವಿ ಎಂದು ಗುರುತಿಸಲಾಗಿದೆ. ವಿವೇಕಾನಂದ ಆಂಗ್ಲ ಮಾಧ್ಯಮ ಉಪ್ಪುಂದ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ.

ಬೆಳಿಗ್ಗೆ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದ ಬಾಲಕಿಗೆ ತಾಯಿ ಚಾಕಲೇಟ್ ನೀಡಿ ಸಮಾಧಾನ ಮಾಡಿ ಕಳುಹಿಸಿ ಕೊಟ್ಟಿದ್ದರು. ಶಾಲಾ ಬಸ್ ಗಾಗಿ ಕಾಯುತ್ತಾ ಚಾಕಲೇಟ್ ಕವರ್ ಸಮೇತವಾಗಿ ಸಮನ್ವಿ ಚಾಕಲೇಟ್ ತಿಂದಿದ್ದಾಳೆ.

ಚಾಕಲೆಟ್ ಕವರ್ ಗಂಟಲಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಮಾರ್ಗ ಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.