ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cockroach Milk: ಎಮ್ಮೆ, ಹಸುಗಿಂತ ಜಿರಳೆ ಹಾಲು ಆರೋಗ್ಯಕರ! ಇದು ಅಚ್ಚರಿಯಾದರೂ ಸತ್ಯ..!

ಜಿರಳೆ ಹಾಲು ವಿಜ್ಞಾನಿಗಳು ಮತ್ತು ಪೌಷ್ಟಿಕತಜ್ಞರ ಗಮನವನ್ನು ಸೆಳೆದಿದೆ. 2016 ರಲ್ಲಿ, ಸಂಶೋಧಕರು ಜೀರಳೆ ಮರಿಗಳನ್ನು ಪೋಷಿಸಲು ಹೆಣ್ಣು ಪೆಸಿಫಿಕ್ ಜೀರುಂಡೆ ಜಿರಳೆಗಳಿಂದ ಉತ್ಪತ್ತಿಯಾಗುವ ಹಾಲಿನಂತಹ ವಸ್ತುವನ್ನು ಅಧ್ಯಯನ ಮಾಡಿದ್ದು ಈ ಸಂಶೋಧನೆಯು, ಜರ್ನಲ್ ಆಫ್ ದಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿಯಲ್ಲಿ ಪ್ರಕಟವಾಗಿದ್ದು, ಈ ದ್ರವವು ಅತ್ಯಂತ ಪೋಷಕಾಂಶವಾದ ಪದಾರ್ಥ ಎಂಬುದು ಸಾಬೀತು ಪಡಿಸಿದ್ದಾರೆ.

ಎಮ್ಮೆ, ಹಸುಗಿಂತ ಜಿರಳೆ ಹಾಲು ಬೆಸ್ಟ್! ಅಧ್ಯಯನದಿಂದ ಬಹಿರಂಗ

Profile Pushpa Kumari Feb 15, 2025 5:00 AM

ನವದೆಹಲಿ: ಯಾರಾದರೂ ಜಿರಳೆ ಹಾಲು (Cockroach Milk) ಕುಡಿಯುವುದನ್ನು ನೀವು ಎಂದಾದರೂ ಕಲ್ಪಿಸಿಕೊಂಡಿದ್ದೀರಾ? ಪ್ರತಿ ದಿನ ಒಂದು ಲೋಟ ಎಮ್ಮೆ ಹಾಲು ಕುಡಿದ್ರೆ ಪೌಷ್ಟಿಕತೆ ಹೆಚ್ಚುತ್ತೆ ಅನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಎಮ್ಮೆ ಹಾಲು, ಆಕಳ ಹಾಲಿಗಿಂತ ಜಿರಳೆ ಹಾಲು ಸೇವನೆ ಬೆಸ್ಟ್ ! ಇದೇನಪ್ಪಾ ಜೀರಳೆ ಹಾಲು ಎಂದು ನಿಮಗೆ ಅಸಹ್ಯ ಎನಿಸಬಹುದು‌, ಆದರೆ ಇದು ಹಸು, ಎಮ್ಮೆ ಹಾಲಿಗಿಂತ ನಾಲ್ಕು ಪಟ್ಟು ಪೋಷಕಾಂಶ ಹೊಂದಿರುತ್ತೆ ಎಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಜೀರಳೆ ಹಾಲು ಸೇವನೆಯಿಂದ ಸಿಗುವ ಆರೋಗ್ಯ ಲಾಭವನ್ನು ಅಧ್ಯಯನವೊಂದು ಬಹಿರಂಗ ಪಡಿಸಿದ್ದು ಜಿರಳೆ ಹಾಲಿನಲ್ಲಿ ಸ್ಪಟಿಕದಂತ ವಸ್ತು ಇದ್ದು, ಇದರಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಅಷ್ಟೇ ಅಲ್ಲದೆ ಅಮೈನೋ ಆಮ್ಲವನ್ನು ಹೆಚ್ಚಾಗಿ ಇದು ಹೊಂದಿರುತ್ತೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಜಿರಳೆ ಹಾಲು ವಿಜ್ಞಾನಿಗಳು ಮತ್ತು ಪೌಷ್ಟಿಕತಜ್ಞರ ಗಮನವನ್ನು ಸೆಳೆದಿದೆ. 2016 ರಲ್ಲಿ, ಸಂಶೋಧಕರು ಜೀರಳೆ ಮರಿಗಳನ್ನು ಪೋಷಿಸಲು ಹೆಣ್ಣು ಪೆಸಿಫಿಕ್ ಜೀರುಂಡೆ ಜಿರಳೆಗಳಿಂದ ಉತ್ಪತ್ತಿಯಾಗುವ ಹಾಲಿನಂತಹ ವಸ್ತುವನ್ನು ಅಧ್ಯಯನ ಮಾಡಿದ್ದು ಈ ಸಂಶೋಧನೆಯು, ಜರ್ನಲ್ ಆಫ್ ದಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿಯಲ್ಲಿ ಪ್ರಕಟವಾಗಿದ್ದು, ಈ ದ್ರವವು ಅತ್ಯಂತ ಪೋಷಕಾಂಶವಾದ ಪದಾರ್ಥವಾಗಿದೆ ಎಂದು ಅಧ್ಯಯನದಲ್ಲಿ ಸಾಬೀತು ಪಡಿಸಿದ್ದಾರೆ.

ಆರೋಗ್ಯಕರ ಕೊಬ್ಬು ಮತ್ತು ಸಕ್ಕರೆ ಕೂಡ ಇದ್ರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರಲಿದ್ದು ವಿಜ್ಞಾನಿಗಳ ಪ್ರಕಾರ, ಜಿರಳೆ ಹಾಲಿನಲ್ಲಿರೋ ಸ್ಪಟಿಕ, ಕ್ಯಾಲೋರಿ ಮತ್ತು ಪೋಷಕಾಂಶಯುತ ಪ್ರೋಟಿನ್ ನೀಡಲಿದೆ. ಹಾಗಾಗಿ ಜಿರಳೆ ಹಾಲು ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಹೆಚ್ಚು ಕ್ಯಾಲೊರಿಗಳನ್ನು ಹೊಂದಿದೆ ಎಂದು ಸಂಶೋಧಕರು ಸಾಬೀತು ಪಡಿಸಿದ್ದಾರೆ.

ಏನೆಲ್ಲಾ ಆರೋಗ್ಯ ಲಾಭ ಇದೆ!

ಜೀರಳೆ ಹಾಲಿನಲ್ಲಿ ಪೌಷ್ಟಿಕ ಅಂಶ ಹೆಚ್ಚಾಗಿ ಇರಲಿದ್ದು ಉತ್ತಮ ಕ್ಯಾಲೋರಿ ಇರಲಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗಲಿದೆ. ಕ್ಯಾಲೋರಿ ಹೆಚ್ಚಿರುವ ಕಾರಣ, ತೂಕ ಹೆಚ್ಚು ಪಡಿಸಲು, ಆರೋಗ್ಯಕರ ಕೊಬ್ಬು ಒದಗಿಸಲು‌ ಜಿರಳೆ ಹಾಲು ಬೆಸ್ಟ್ ಆಯ್ಕೆಯಾಗಿದೆ.

ಇದನ್ನು ಓದಿ: Wipro GE Healthcare: ವಿಪ್ರೋ ಹೆಲ್ತ್ ಕೇರ್‌ನಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ

ಮನುಷ್ಯರು ಜಿರಳೆ ಹಾಲನ್ನು ಸೇವಿಸಬಹುದೇ?

ಜೀರಳೆ ಹಾಲಿನಲ್ಲಿ ಪೌಷ್ಟಿಕತೆ ಇದ್ದರೂ ಜೀರಳೆ ಹಾಲು ಪ್ರಸ್ತುತ ಮಾನವ ಬಳಕೆಗೆ ಲಭ್ಯವಿಲ್ಲ.ನೀವು ಜಿರಳೆ ಹಾಲು ಬೇಕು ಅಂದ್ರೆ ಅದನ್ನು ಸಾಯಿ ಸ್ಬೇಕು. ಜಿರಳೆ ಕರುಳಿನಲ್ಲಿ ಹಾಲಿನಂತ ವಸ್ತು ಉತ್ಪಾದನೆ ಆಗೋದ್ರಿಂದ ನೀವು ಅದನ್ನು ಕೊಂದು ಹಾಲು ಪಡಿಯ ಬೇಕಾಗುತ್ತದೆ. ಆದರೆ ಜಿರಳೆ ಈ ದ್ರವದ ಒಂದು ಸಣ್ಣ ಪ್ರಮಾಣವನ್ನು ಮಾತ್ರ ಉತ್ಪಾದಿಸಲಿದ್ದು ಇದು ಹಸುಗಳು ಅಥವಾ ಮೇಕೆಗಳಂತೆ, ಈ ಕೀಟಗಳನ್ನು ಕೊಂದು ಸಾಂಪ್ರ ದಾಯಿಕ ರೀತಿ ಹಾಲು ತೆಗೆಯಲು ಆಗುವುದಿಲ್ಲ. ಹಾಗಾಗಿ ಜೀರಳೆಯ ಹಾಲು ತೆಗೆಯುವ ವಿಧಾನವನ್ನು ವಿಜ್ಞಾನಿಗಳು ಕಂಡು ಹಿಡಿದಿಲ್ಲ.