ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Antaryami Movie: ಪ್ರಣವ್ ಅಭಿನಯದ ʼಅಂತರ್ಯಾಮಿʼ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದಲಿಂಗ ಶ್ರೀ

Antaryami Movie: ಅಂತರ್ಯಾಮಿ ಚಿತ್ರದಲ್ಲಿ ನಾಯಕರಾಗಿ ಪ್ರಣವ್ ನಟಿಸಿದ್ದು, ನಾಯಕಿಯಾಗಿ ಮೋಹಿರಾ ಅಚಾರ್ಯ ಅಭಿನಯಿಸಿದ್ದು, ಚಿತ್ರಕ್ಕೆ ದೇಸಿ ಮೋಹನ್ ಅವರ ಸಂಗೀತವಿದ್ದು, ವಿನಯ್ ಕಾವ್ಯಕಾಂತಿ ಸಾಹಿತ್ಯ ಬರೆದಿದ್ದಾರೆ.

Antaryami Movie: ಪ್ರಣವ್ ಅಭಿನಯದ ʼಅಂತರ್ಯಾಮಿʼ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದಲಿಂಗ ಶ್ರೀ

Profile Prabhakara R Jan 13, 2025 8:58 PM
ತುಮಕೂರು: ಗುರುರೇಣುಕಾ ಪ್ರೊಡಕ್ಷನ್ ನವೀನ್ ನಿರ್ಮಾಣದ, ಕೆ.ಧನಂಜಯ್ ನಿರ್ದೇಶನವಿರುವ, ಪ್ರಣವ್ ನಟಿಸಿರುವ ʼಅಂತರ್ಯಾಮಿʼ ((Antaryami Movie) ಎಂಬ ಚೊಚ್ಚಲ ಚಲನಚಿತ್ರದ ಪೋಸ್ಟರ್ ಅನ್ನು ಸಿದ್ದಗಂಗಾ ಮಠದ ಕಚೇರಿಯಲ್ಲಿ ಸಿದ್ದಲಿಂಗ ಶ್ರೀಗಳು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ದಲಿಂಗ ಶ್ರೀಗಳು, ಜಗತ್ತು ತಾಂತ್ರಿಕವಾಗಿ ಬೆಳವಣಿಗೆ ಹೊಂದುತ್ತಿರುವ ದಿಶೆಯಲ್ಲಿ ಅನೇಕ ಆವಿಷ್ಕಾರಗಳು ಮಾನವನಿಗೆ ಸಹಕಾರಿಯಾಗಿವೆ. ಅಂತರ್ಜಾಲದಲ್ಲಿ ಬರುವ ಕೆಲವು ವಿಚಾರಗಳು ಮನುಷ್ಯನ ಒಳಿತು ಮತ್ತು ಕೆಡುಕುಗಳಿಗೆ ಕಾರಣವಾಗಿದ್ದು, ಇಂದಿನ ಯುವ ಸಮೂಹ ಸದಾ ಮೊಬೈಲ್‌ನಲ್ಲಿ ಮುಳುಗಿ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಅನಗತ್ಯ ವಿಚಾರಗಳ ಬಳಕೆಯಿಂದ ಹಾದಿ ತಪ್ಪುತ್ತಿದ್ದಾರೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
image-3cbfdd5d-9725-4e4a-8fba-fa2d5d5b256b.jpg
ಶ್ರೀಮಠದ ತಮ್ಮ ಕಚೇರಿಯಲ್ಲಿ ಗುರುರೇಣುಕಾ ಪ್ರೊಡಕ್ಷನ್ ನವೀನ್ ಅವರ ನಿರ್ಮಾಣದ, ಕೆ.ಧನಂಜಯ್ ಅವರ ನಿರ್ದೇಶನವಿರುವ ಪ್ರಣವ್ ಅವರು ನಟಿಸಿರುವ ಅಂತರ್ಯಾಮಿ ಎಂಬ ಚೊಚ್ಚಲ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, ಸೋಶಿಯಲ್ ಮೀಡಿಯಾಗಳಲ್ಲಿ ಬರುವ ರೀಲ್ಸ್ ಮತ್ತು ರಿಯಾಲಿಟಿ ಶೋಗಳಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಸಮೂಹ ಕೆಟ್ಟ ಸಂಸ್ಕೃತಿಯತ್ತ ವಾಲುತ್ತಿದ್ದು, ಈ ಕಾರ್ಯಕ್ರಮಗಳ ವ್ಯವಸ್ಥಾಪಕರುಗಳು ತಮ್ಮ ಒಳ ಆಂತರ್ಯವನ್ನು ಸರಿಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
image-f7f44ce2-6c15-4ccd-9517-77fd4bd8a234.jpg
ಇತ್ತೀಚೆಗೆ ಚಿಕ್ಕ ಚಿಕ್ಕ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದು, ಪುಸ್ತಕ ಹಿಡಿಯುವ ಕೈಯಲ್ಲಿ ಮೊಬೈಲ್ ಹಿಡಿಯುವುದು ಇತ್ತೀಚಿನ ಟ್ರೆಂಡ್ ಆಗಿದೆ. ಪೋಷಕರು ನೆಚ್ಚಿನ ಮಕ್ಕಳಿಗೆ ಮೊಬೈಲ್‌ ಗೀಳಿಗೆ ಬೀಳದಂತೆ ಎಚ್ಚರ ವಹಿಸಬೇಕು. ಇಂತಹ ವ್ಯವಸ್ಥೆಯನ್ನು ಎಚ್ಚರಿಸುವ ಸಲುವಾಗಿ ಗುರುರೇಣುಕಾ ಪ್ರೊಡಕ್ಷನ್ ಅವರ ಅಂತರ್ಯಾಮಿ ಚಲನಚಿತ್ರ ತನ್ನ ಕಥೆಯ ಮೂಲಕ ಒಳ್ಳೆಯ ಸಂದೇಶವನ್ನು ಯುವ ಜನತೆಗೆ ನೀಡಲು ಹೊರಟಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
image-05e3a2c5-4fef-4fc6-8a07-47e6ea31973e.jpg
ಚಿಕ್ಕವರಿಂದ ದೊಡ್ಡವರವರೆಗೂ ಮೊಬೈಲ್ ಗೀಳು ಇಂದು ಹಾಸುಕ್ಕಾಗಿದ್ದು ಮೊಬೈಲ್‌ನಲ್ಲಿ ಬರುವ ಕೆಲ ಕೆಟ್ಟ ವಿಚಾರಗಳಿಂದ ಜನರು ಹೇಗೆ ಹಾದಿ ತಪ್ಪುತ್ತಾರೆ ಇದಕ್ಕೆ ಮಾರ್ಗೋಪಾಯಗಳೇನು, ಇದರಿಂದ ದೂರ ಇರುವುದು ಹೇಗೆ ಎಂಬಂತಹ ಸಂದೇಶಗಳನ್ನು ತಮ್ಮ ಚಿತ್ರದ ಕಥಾ ಹಂದರದಲ್ಲಿ ಹುಡುಗಿಸಿಟ್ಟಿದ್ದು ಜನರು ಈ ಸಂದೇಶಗಳಿಂದ ಎಚ್ಚೆತ್ತುಕೊಂಡು, ಉತ್ತಮ ಮತ್ತು ಆರೋಗ್ಯಕರವಾದ ಸಮಾಜವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಚಿತ್ರ ತಂಡಕ್ಕೆ ಹರಸಿ ಆಶೀರ್ವಚನವಿತ್ತರು.
ಅಂತರ್ಯಾಮಿ ಚಿತ್ರದಲ್ಲಿ ನಾಯಕರಾಗಿ ಪ್ರಣವ್ ನಟಿಸಿದ್ದು, ನಾಯಕಿಯಾಗಿ ಮೋಹಿರಾ ಅಚಾರ್ಯ, ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಉದಯ್, ರುದ್ರಮುನಿ ಪಂಡಿತ್, ರೇಣುಕಾಂಬ, ಶರತ್ ಘಾಟಿ, ಶ್ರೀಕೃಷ್ಣ, ಮಂಜೀವಾ, ಹೇಮಾಮಾಲಿನಿ, ಬಾಲಕೃಷ್ಣ ಬರಗೂರು, ವಸಂತ್, ಯೋಗೀಶ್, ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ದೇಸಿ ಮೋಹನ್ ಅವರ ಸಂಗೀತವಿದ್ದು, ವಿನಯ್ ಕಾವ್ಯಕಾಂತಿ ಸಾಹಿತ್ಯ ಬರೆದಿದ್ದಾರೆ, ಛಾಯಾಗ್ರಹಣ ಎಸ್‌.ಬಾಲು, ನೃತ್ಯ ಬಾಲ ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಪಿಆರ್‌ಒ ಎಂ.ಜೆ.ಎಸ್.ಪಿ.ಆರ್ ಸೇರಿ ಚಿತ್ರಕ್ಕೆ ಸಹ ನಿರ್ದೇಶನವನ್ನು ರವಿಶಂಕರ್, ಸಹಾಯಕ ನಿರ್ದೇಶಕರಾಗಿ ವಂಸತ್, ಗೌತಮ್ ಅವರು ನಿರ್ವಹಿಸಿದ್ದಾರೆ.
image-165517c4-ea57-4d28-b8c4-3593a9e04611.jpg
ಈ ಸುದ್ದಿಯನ್ನೂ ಓದಿ | Shraddha Kapoor: ಶ್ರದ್ಧಾ ಕಪೂರ್ ವಾಲ್ ಪೇಪರ್‌ನಲ್ಲಿ ಬಾಯ್ ಫ್ರೆಂಡ್ ರಾಹುಲ್ ಮೋದಿ ಫೋಟೊ; ಮದುವೆ ಯಾವಾಗ ಎಂದ ಫ್ಯಾನ್ಸ್‌