ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bridge Collapse: ತುಂಡಾಗಿ ಬಿದ್ದ ಸೇತುವೆ- ನದಿಗೆ ಬಿದ್ದ ವಾಹನಗಳು...9 ಬಲಿ- ಅನೇಕರು ನೀರುಪಾರು

ವಡೋದರಾದ ಪದ್ರಾ ತಾಲ್ಲೂಕಿನ ಗಂಭೀರ-ಮುಜ್‌ಪುರ ಸೇತುವೆಯ ಒಂದು ಭಾಗ ಬುಧವಾರ ಕುಸಿದು ಬಿದ್ದಿದೆ. ಪರಿಣಾಮವಾಗಿ ಹಲವಾರು ವಾಹನಗಳು ಮಹಿಸಾಗರ್ (ಮಹಿ) ನದಿಗೆ ಬಿದ್ದಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ. ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯು ಬೆಳಗ್ಗಿನ ಸಮಯದಲ್ಲಿ ಬಹಳ ವಾಹನ ದಟ್ಟನೆಯಿಂದ ಕೂಡಿರುತ್ತದೆ.

ಏಕಾಏಕಿ ಕುಸಿದ ಸೇತುವೆ; ಹತ್ತಾರು ಮಂದಿ ನೀರುಪಾರು

Profile Rakshita Karkera Jul 9, 2025 12:26 PM

ವಡೋದರಾ: ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯೊಂದು ಏಕಾಏಕಿ ಕುಸಿದು(Bridge Collapse) ಬಿದ್ದು ಸುಮಾರು 9 ಜನ ಸಾವನ್ನಪ್ಪಿರುವ ಭೀಕರ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಡೋದರಾದ ಪದ್ರಾ ತಾಲ್ಲೂಕಿನ ಗಂಭೀರ-ಮುಜ್‌ಪುರ ಸೇತುವೆಯ ಒಂದು ಭಾಗ ಬುಧವಾರ ಕುಸಿದು ಬಿದ್ದಿದೆ. ಪರಿಣಾಮವಾಗಿ ಹಲವಾರು ವಾಹನಗಳು ಮಹಿಸಾಗರ್ (ಮಹಿ) ನದಿಗೆ ಬಿದ್ದಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ. ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯು ಬೆಳಗ್ಗಿನ ಸಮಯದಲ್ಲಿ ಬಹಳ ವಾಹನ ದಟ್ಟನೆಯಿಂದ ಕೂಡಿರುತ್ತದೆ.

ದುರ್ಘಟನೆ ವಿಡಿಯೊ ಇಲ್ಲಿದೆ



ಆರಂಭಿಕ ವರದಿಗಳ ಪ್ರಕಾರ, ಎರಡು ಟ್ರಕ್‌ಗಳು, ಬೊಲೆರೊ ಎಸ್‌ಯುವಿ ಮತ್ತು ಪಿಕಪ್ ವ್ಯಾನ್ ಸೇರಿದಂತೆ ನಾಲ್ಕು ವಾಹನಗಳು ಸೇತುವೆಯನ್ನು ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ವಾಹನಗಳು ನದಿಗೆ ಬೀಳುವ ಕೆಲವೇ ಕ್ಷಣಗಳ ಮೊದಲು ದೊಡ್ಡ ಬಿರುಕು ಬಿಟ್ಟ ಶಬ್ದ ಕೇಳಿಬಂದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ತಂಡಗಳು, ಸ್ಥಳೀಯ ಪೊಲೀಸರು ಮತ್ತು ವಡೋದರಾ ಜಿಲ್ಲಾಡಳಿತದ ಸದಸ್ಯರು ಸ್ಥಳಕ್ಕೆ ಧಾವಿಸಿ ತಕ್ಷಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Building Collapses: 40 ವರ್ಷಗಳ ಹಿಂದಿನ ಕಟ್ಟಡ ಕುಸಿತ; ಇಬ್ಬರು ಕಾರ್ಮಿಕರು ಸಾವು, ಮತ್ತೊಬ್ಬ ನಾಪತ್ತೆ

ಸ್ಥಳೀಯರು ಸಹ ಸೇರಿಕೊಂಡು, ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆಯಲು ಸಹಾಯ ಮಾಡಿದರು. ಇಲ್ಲಿಯವರೆಗೆ, ಮೂವರನ್ನು ರಕ್ಷಿಸಲಾಗಿದೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಘಟನೆ ನಡೆದ ಸ್ವಲ್ಪ ಸಮಯದ ನಂತರ ಪದ್ರಾ ಶಾಸಕ ಚೈತನ್ಯಸಿಂಹ ಜಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಸುಮಾರು 45ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಸುರಕ್ಷತೆ ಬಗ್ಗೆ ಸ್ಥಳೀಯಾಡಳಿತ ನಿರ್ಲಕ್ಷ್ಯ ತೋರಿರುವುದೇ ಈ ದುರಂತ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.