ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ರೀಲ್ಸ್‌ಗಾಗಿ ಮಗಳನ್ನು ಅಪಾಯಕ್ಕೆ ತಳ್ಳಿದ ಪೋಷಕರು; ಶಾಕಿಂಗ್‌ ವಿಡಿಯೊ ವೈರಲ್

ರಾಜಸ್ಥಾನದ ಭರತ್‌ಪುರದ ಬರೇಥಾ ಅಣೆಕಟ್ಟನ್ನು ವೀಕ್ಷಿಸಲು ಬಂದ ದಂಪತಿ ಅಲ್ಲಿ ರೀಲ್ಸ್ ಮಾಡಲು ತಮ್ಮ ಮಗಳನ್ನು ಅಣೆಕಟ್ಟಿನ ಸುರಕ್ಷತಾ ರೇಲಿಂಗ್‌ನ ಆಚೆ ಇರಿಸಲಾದ ಗೇಜ್ ಬಾಕ್ಸ್ ಮೇಲೆ ಕೂರಿಸಿದ್ದಾರೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ರೀಲ್ಸ್‌ಗಾಗಿ ಮಗಳ ಜೀವಕ್ಕೆ ಕುತ್ತು ತಂದ ಅಪ್ಪ-ಅಮ್ಮ

Profile pavithra Jul 8, 2025 10:45 PM

ಜೈಪುರ: ಇತ್ತೀಚಿನ ದಿನಗಳಲ್ಲಿ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಕ್ರೇಜ್‌ ಹೆಚ್ಚಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಜನರು ತಮ್ಮ ಜೀವವನ್ನು ಪಣಕ್ಕಿಡುವುದಲ್ಲದೇ ತಮ್ಮವರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಇತ್ತೀಚೆಗೆ ಅಂತಹದೊಂದು ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಖ್ಯಾತಿ ಗಳಿಸಲು ದಂಪತಿ ತಮ್ಮ ಏಳು ವರ್ಷದ ಮಗಳ ಪ್ರಾಣವನ್ನೇ ಪಣಕ್ಕಿಟ್ಟಿರುವ ಆಘಾತಕಾರಿ ಮತ್ತು ವಿಚಿತ್ರ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ ಪ್ರಕಾರ, ಈ ಘಟನೆ ಭರತ್‌ಪುರದ ಬರೇಥಾ ಅಣೆಕಟ್ಟಿನಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕಿಯನ್ನು ಅಣೆಕಟ್ಟಿನ ಸುರಕ್ಷತಾ ರೇಲಿಂಗ್‌ನ ಆಚೆ ಇರಿಸಲಾದ ಗೇಜ್ ಬಾಕ್ಸ್ ಮೇಲೆ ಕೂರಿಸಲಾಗಿದೆ. ಅದಕ್ಕೆ ಆಂಗಲ್ ಐರನ್ ಅನ್ನು ಆಧಾರವಾಗಿ ಬಳಸಲಾಗಿದೆ. ಆಕೆಯ ಪೋಷಕರು ಆಕೆಯನ್ನು ಕಿರಿದಾದ ರೇಲಿಂಗ್ ಮೇಲೆ ಕುಳಿತುಕೊಳ್ಳಲು ಒತ್ತಾಯಿಸಿದ್ದರಿಂದ ಆಕೆ ಭಯದಿಂದ ಇಷ್ಟವಿಲ್ಲದ್ದರೂ ಅಲ್ಲಿ ಕುಳಿತಿದ್ದಾಳೆ. ಆಕೆ ಕುಳಿತ ನಂತರ, ಆಕೆಯ ತಂದೆ ಆಕೆಯ ಕೈಗಳನ್ನು ಬಿಟ್ಟುಬಿಟ್ಟಿದ್ದಾರೆ. ಇನ್ನು ಆಕೆಯ ತಾಯಿ ಕೂಡ ಮಗಳನ್ನು ಈ ಅಪಾಯಕಾರಿ ಸಾಹಸ ಮಾಡುವಂತೆ ಪ್ರೋತ್ಸಾಹಿಸಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...



ಈ ಅಘಾತಕಾರಿ ವಿಡಿಯೊ ಸೋಶಿಯಲ್‌ ವಿಡಿಯೊದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ದಂಪತಿಯ ಬೇಜವಾಬ್ದಾರಿ ವರ್ತನೆಯನ್ನು ಟೀಕಿಸಿದ್ದಾರೆ. ಒಬ್ಬರು, “ಮಕ್ಕಳಿಗೆ ಪಾಠ ಕಲಿಸಬೇಕಾದ ಪೋಷಕರು ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಬಹುದೇ?” ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, “ಪ್ರವಾಸಿ ತಾಣಗಳಲ್ಲಿ ರೀಲ್ಸ್ ಶೂಟ್‍ ಮಾಡುವ ಹೆಸರಿನಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು” ಒತ್ತಾಯಿಸಿದ್ದಾರೆ.

ಬರೈತ್ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ಈ ವಿಡಿಯೊ ಬಂದಿದೆ. ಆದರೆ ದಂಪತಿಯನ್ನು ಇನ್ನೂ ಗುರುತಿಸಲಾಗಿಲ್ಲ. ಅದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಮತ್ತು ಭದ್ರತಾ ಉದ್ದೇಶಗಳಿಗಾಗಿ, ಅಣೆಕಟ್ಟಿನ ಸ್ಥಳದಲ್ಲಿ ಒಬ್ಬ ಕಾನ್‌ಸ್ಟೇಬಲ್‌ ಅನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಪ್ರವಾಸಿಗರು ಮತ್ತು ಸೋಶಿಯಲ್ ಮೀಡಿಯಾ ನೆಟ್ಟಿಗರ ಜನಪ್ರಿಯ ತಾಣವಾಗಿರುವ ಬರೇಥಾ ಅಣೆಕಟ್ಟಿನಲ್ಲಿ ರೀಲ್‌ಗಳನ್ನು ಶೂಟ್ ಮಾಡಲು ಹಲವರು ಪ್ರಯತ್ನಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಈ ರೀತಿಯ ಸಾಹಸಗಳು ಜೀವಗಳಿಗೆ ಅಪಾಯವನ್ನುಂಟುಮಾಡುವುದಲ್ಲದೆ, ತುರ್ತು ಸಂದರ್ಭಗಳಲ್ಲಿ ರಕ್ಷಣಾ ಸಿಬ್ಬಂದಿಯನ್ನು ಸಹ ಅಪಾಯಕ್ಕೆ ಸಿಲುಕಿಸುತ್ತವೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಮಹಿಳೆ ಹಾಡು ಹಾಡ್ತಿದ್ರೆ ಈ ಆನೆಗಳ ತುಂಟಾಟವನ್ನೊಮ್ಮೆ ನೋಡಿ- ಕ್ಯೂಟ್‌ ವಿಡಿಯೊ ಎಲ್ಲೆಡೆ ವೈರಲ್‌

ಈ ಹಿಂದೆ ತಂದೆಯೊಬ್ಬ ತನ್ನ ಚಿಕ್ಕ ಮಗನನ್ನು ಸಿಂಹದ ಮೇಲೆ ಕೂರಿಸಿ ಫೋಟೊಶೂಟ್ ಮಾಡಲು ಪ್ರಯತ್ನಿಸಿದ್ದು, ಆ ವೇಳೆ ಮಗು ಹೆದರಿ ಜೋರಾಗಿ ಕೂಗಿತ್ತು. ಇದರಿಂದ ಸಿಂಹಕ್ಕೂ ಕಿರಿಕಿರಿಯಾಗಿತ್ತು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಂದೆಯ ಕೃತ್ಯಕ್ಕಾಗಿ ಆತನನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದರು ಮತ್ತು ಪ್ರಾಣಿ ಹಿಂಸೆಯ ಬಗ್ಗೆಯೂ ಚರ್ಚೆಯನ್ನು ಹುಟ್ಟು ಹಾಕಿದ್ದರು.