ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Alia Bhatt: ನಟಿ ಆಲಿಯಾ ಭಟ್‌ ಮಾಜಿ ಆಪ್ತ ಸಹಾಯಕಿ ಅರೆಸ್ಟ್‌; ಏನಿದು ಕೇಸ್‌?

ಜುಹು ಪೊಲೀಸರು ಆಲಿಯಾ ಭಟ್ ಅವರ ಮಾಜಿ ಆಪ್ತ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ. ಆಲಿಯಾ ಭಟ್ ಅವರ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ನಟಿಯ ಖಾತೆಗಳಿಂದ ಹಣ ವಂಚಿಸಿದ ಆರೋಪ ವೇದಿಕಾ ಮೇಲಿದೆ. ವರದಿಯ ಪ್ರಕಾರ, ಶೆಟ್ಟಿ ಈ ಎರಡು ಖಾತೆಗಳಿಂದ ರೂ. 76 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ್ದಾರೆ.

ನಟಿ ಆಲಿಯಾ ಭಟ್‌ ಮಾಜಿ ಆಪ್ತ ಸಹಾಯಕಿ ಅರೆಸ್ಟ್‌

Profile Rakshita Karkera Jul 9, 2025 9:15 AM

ಮುಂಬೈ: ಬಾಲಿವುಡ್‌ ಸ್ಟಾರ್‌ ನಟಿ ಆಲಿಯಾ ಭಟ್‌(Actress Alia Bhatt) ಮಾಜಿ ಆಪ್ತ ಸಹಾಯಕಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರೆಸ್ಟ್‌ ಮಾಡಲಾಗಿದೆ. ಜುಹು ಪೊಲೀಸರು ಆಲಿಯಾ ಭಟ್ ಅವರ ಮಾಜಿ ಆಪ್ತ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ. ಆಲಿಯಾ ಭಟ್ ಅವರ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ನಟಿಯ ಖಾತೆಗಳಿಂದ ಹಣ ವಂಚಿಸಿದ ಆರೋಪ ವೇದಿಕಾ ಮೇಲಿದೆ. ವರದಿಯ ಪ್ರಕಾರ, ಶೆಟ್ಟಿ ಈ ಎರಡು ಖಾತೆಗಳಿಂದ ರೂ. 76 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ್ದಾರೆ. ಈ ಬಗ್ಗೆ ನಟಿ ಆಲಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೇ 2022 ಮತ್ತು ಆಗಸ್ಟ್ 2024 ರ ನಡುವೆ ಈ ವಂಚನೆ ನಡೆದಿದೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಲಿಯಾ ಭಟ್ ಅವರ ತಾಯಿ, ನಟಿ-ನಿರ್ದೇಶಕಿ ಸೋನಿ ರಜ್ದಾನ್ ಜನವರಿ 23 ರಂದು ಜುಹು ಪೊಲೀಸರಿಗೆ ದೂರು ನೀಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಆಲಿಯಾ ಭಟ್‌ ಅವರ ತಾಯಿಯ ದೂರಿನಾಧಾರದಲ್ಲಿ ಪೊಲೀಸರು ವೇದಿಕಾ ವಿರುದ್ಧ ವಂಚನೆ ಕೇಸ್‌ ದಾಖಲಿಸಿದ್ದರು. ಇದಾದ ಬಳಿಕ ತಲೆಮರೆಸಿಕೊಂಡಿದ್ದ ವೇದಿಕಾಳಿಗಾಗಿ ಪೊಲೀಸರು ವೇದಿಕಾ ಶೆಟ್ಟಿಗಾಗಿ ಹುಡುಕಾಟ ನಡೆಸಿದ್ದರು.

ಈ ಸುದ್ದಿಯನ್ನೂ ಓದಿ: Alia Bhatt: ಇನ್ಮುಂದೆ ಆಲಿಯಾ ಭಟ್ ಅಂತಾ ಕರೆಯುವಂತಿಲ್ಲ... ಹೆಸ್ರು ಬದಲಿಕೊಂಡ ಸ್ಟಾರ್‌ ನಟಿ

ಪೊಲೀಸ್ ಮೂಲಗಳ ಪ್ರಕಾರ, ವೇದಿಕಾ ಶೆಟ್ಟಿ 2021 ರಿಂದ 2024 ರವರೆಗೆ ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ನಟನ ಹಣಕಾಸಿನ ದಾಖಲೆಗಳು ಮತ್ತು ಪಾವತಿಗಳನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ನಕಲಿ ಬಿಲ್‌ಗಳನ್ನು ಸಿದ್ದಪಡಿಸಿಕೊಂಡು ಹಣವನ್ನು ವಂಚಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ತಮ್ಮ ಪ್ರಯಾಣ ವೆಚ್ಚ ಎಂದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆಲಿಯಾ ಭಟ್‌ಗೆ ವಂಚಿಸಿದ ಹಣವನ್ನು ವೇದಿಕಾ ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿದ್ದಾಳೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವೇದಿಕಾ ಪರಾರಿಯಾಗಿದ್ದಳು. ಪೊಲೀಸರ ಕಣ್ತಪ್ಪಿಸಿ ರಾಜಸ್ಥಾನ, ಕರ್ನಾಟಕ, ಪುಣೆ, ಬೆಂಗಳೂರು ಹೀಗೆ ನಾನಾ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದಳು. ಇದೀಗ ಜುಹುನಲ್ಲಿ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಅರೆಸ್ಟ್‌ ಮಾಡಿದ್ದಾರೆ. ಇದೀಗ ಆಕೆಯನ್ನು ಪುಣೆಗೆ ಕರೆತಂದಿದ್ದಾರೆ.