ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Allu Arjun: ಅಲ್ಲು ಅರ್ಜುನ್ ಮುಂದಿನ ಸಿನಿಮಾದಲ್ಲಿ ಹಾಲಿವುಡ್‌ ನಟ ವಿಲ್‌ ಸ್ಮಿತ್‌?

ನಿರ್ದೇಶಕ ಅಟ್ಲೀ ನಿರ್ದೇಶನದ AA22xA6 ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಇವರ ಜೊತೆಗೆ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ತಾರಾಗಣ ಈ ಸಿನಿಮಾ ದಲ್ಲಿ ಇರಲಿದೆ. ಅಂತೆಯೇ ಬಾಲಿವುಡ್ ತಾರೆಯರ ಜೊತೆ ಹಾಲಿವುಡ್ ಖ್ಯಾತ ನಟನನ್ನು ಕೂಡ ಈ ಸಿನಿಮಾದಲ್ಲಿ ಕರೆತರಲು ನಿರ್ದೇಶಕ ಅಟ್ಲೀ ಪ್ಲ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ‌.

ಅಲ್ಲು ಅರ್ಜುನ್ ಮುಂದಿನ ಸಿನಿಮಾದಲ್ಲಿ ಹಾಲಿವುಡ್‌ ನಟ ವಿಲ್‌ ಸ್ಮಿತ್‌?

Profile Pushpa Kumari Jul 9, 2025 12:54 PM

ನವದೆಹಲಿ: ಆರ್ಯ, ಸನ್ ಆಫ್ ಸತ್ಯಮೂರ್ತಿ, ಪುಷ್ಪ ಸಿನಿಮಾ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರು (Allu Arjun) ಸದ್ಯ ಸೈನ್ಸ್ ಫಿಕ್ಶನ್ ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜವಾನ್, ಹಿಟ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ನಿರ್ದೇಶಕ ಅಟ್ಲೀ ನಿರ್ದೇಶನದ AA22xA6 ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಇವರ ಜೊತೆಗೆ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ತಾರಾಗಣ ಈ ಸಿನಿಮಾ ದಲ್ಲಿ ಇರಲಿದೆ. ಅಂತೆಯೇ ಬಾಲಿವುಡ್ ತಾರೆಯರ ಜೊತೆ ಹಾಲಿವುಡ್ ಖ್ಯಾತ ನಟನನ್ನು ಕೂಡ ಈ ಸಿನಿಮಾದಲ್ಲಿ ಕರೆತರಲು ನಿರ್ದೇಶಕ ಅಟ್ಲೀ ಪ್ಲ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ‌. ಹಾಗಾದರೆ ಆ ಹಾಲಿವುಡ್ ಫೇಮಸ್ ನಟ ಯಾರು? ಅವರು AA22xA6 ಸಿನಿಮಾ ಒಪ್ಪಿದ್ದಾರಾ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಾಲಿವುಡ್ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಅವರ ಮುಂದಿನ ಸಿನಿಮಾ AA22xA6 ಬಗ್ಗೆ ಜನರಿಗೆ ನಿರೀಕ್ಷೆ ಹೆಚ್ಚಿಸುತ್ತಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ 800 ಕೋಟಿ ರೂ.ಗಳ ಬಜೆಟ್‌ ನದ್ದಾಗಿದ್ದು ವಿಭಿನ್ನವಾದ ಕಥೆಯನ್ನು ತೆರೆ ಮೇಲೆ ತರಲು ಮುಂದಾಗಿದೆ. ಈಗಾಗಲೇ ಪಾತ್ರಗಳಿಗೆ ನಟ ನಟಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿಲನ್ ಪಾತ್ರಕ್ಕಾಗಿ ಹಾಲಿವುಡ್ ಖ್ಯಾತ ನಟ ವಿಲ್ ಸ್ಮಿತ್ ಅವರ ಜೊತೆಗೆ ಈಗಾಗಲೇ ಚಿತ್ರತಂಡ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಮೆನ್ ಇನ್ ಬ್ಲ್ಯಾಕ್, ಐ ಆಮ್ ಲೆಜೆಂಡ್ ಮತ್ತು ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್‌ನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಟ, ವರ್ಲ್ಡ್ ಸೂಪರ್‌ಸ್ಟಾರ್ ವಿಲ್ ಸ್ಮಿತ್ ಅವರನ್ನು AA22xA6 ಸಿನಿಮಾದಲ್ಲಿ ನೆಗೆಟಿವ್ ರೋಲ್ ಅಭಿನಯಿಸಲು ಕೇಳಿ ಕೊಳ್ಳಲಾಗಿದೆ. ಆದರೆ ಸ್ಮಿತ್ ಇನ್ನು ಅಭಿ ನಯಿಸುವ ಬಗ್ಗೆ ಚಿತ್ರತಂಡಕ್ಕೆ ದೃಢಿಕರಿಸಿಲ್ಲ. ಒಂದು ವೇಳೆ ಈ ಸಿನಿಮಾ ಅವರು ಒಪ್ಪಿಕೊಂಡರೆ ವಿಲ್ ಸ್ಮಿತ್ ಸಿನಿಮಾ ಜರ್ನಿಯಲ್ಲಿ ಅವರು ಅಭಿನಯಿಸಿದ್ದ ಭಾರತದ ಮೊದಲ ಸಿನಿಮಾ AA22xA6 ಎಂಬ ಖ್ಯಾತಿ ಸಿಗಲಿದೆ.

ನಿರ್ದೇಶಕ ಅಟ್ಲೀ ಅವರು ಪ್ಯಾನ್ ಇಂಡಿಯಾ ಹಾಗೂ ಪ್ಯಾನ್ ವರ್ಲ್ಡ್ ಮಟ್ಟಕ್ಕೆ AA22xA6 ಸಿನಿಮಾ ತೆರೆ ಮೇಲೆ ತರಲು ಯೋಜನೆ ರೂಪಿಸುತ್ತಿದ್ದಾರೆ. ಒಂದು ವೇಳೆ ಹಾಲಿವುಡ್ ನಟ ವಿಲ್ ಸ್ಮಿತ್ ಈ ಸಿನಿಮಾ ಒಪ್ಪಿಕೊಂಡರೆ ಭಾರತೀಯ ಮೂಲದ ಈ ಸಿನಿಮಾ ಜಾಗತಿಕ ಮಟ್ಟಕ್ಕೆ ಪ್ರಸಿದ್ಧಿಯಾಗಲಿದೆ.

ಇದನ್ನು ಓದಿ:Elumale Movie: 'ಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್! ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

ನಟ ಅಲ್ಲು ಅರ್ಜನ್ ಅವರು ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಅವ ರೊಂದಿಗೆ ದೀಪಿಕಾ ಪಡುಕೋಣೆ ಮತ್ತು ಮೃಣಾಲ್ ಠಾಕೂರ್ ಸಹ ಅಭಿನಯಿಸಲಿದ್ದಾರೆ. ಅಂತೆಯೇ ಇನ್ನೊಬ್ಬ ಭಾರತೀಯ ಖ್ಯಾತ ನಟ ಕೂಡ ಇದೇ ಸಿನಿಮಾದಲ್ಲಿ ಅಭಿನಯಿಸ್ತಾರೆ ಎಂದು ಹೇಳಲಾಗುತ್ತಿದೆ. ಚಿತ್ರ ತಂಡವು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ದೃಶ್ಯ ಮತ್ತು ಆಕ್ಷನ್ ಸಿಕ್ವೆನ್ಸ್ ರೂಪಿಸುತ್ತಿದೆ. ಅವೆಂಜರ್ಸ್, ಸ್ಪೈಡರ್ ಮ್ಯಾನ್ ಮತ್ತು ವಂಡರ್ ವುಮನ್‌ ನಂತಹ ಫ್ರಾಂಚೈಸಿಗಳಲ್ಲಿ ಹಿಂದೆ ಕೆಲಸ ಮಾಡಿದ ಹಾಲಿವುಡ್ ಸ್ಟುಡಿಯೋಗಳಿಂದ ವಿಎಫ್ ಎಕ್ಸ್ ಕೆಲಸ ಕಾರ್ಯ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ‌.