ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Next BJP Chief: ಮುಂದಿನ ಬಿಜೆಪಿ ರಾಷ್ಟ್ರೀಯ ನಾಯಕನ ಆಯ್ಕೆಗೆ ಸದ್ದಿಲ್ಲದೇ ಮಾನದಂಡ ರೂಪಿಸಿದ RSS

BJP National President: ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ಮಾನದಂಡವೊಂದನ್ನು ವಿಧಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಆರ್‌ಎಸ್‌ಎಸ್‌ ನಡೆಸಿರುವ ಸರಣಿ ಸಭೆಯಲ್ಲಿ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇನ್ನು ಬಿಜೆಪಿಯಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿರುವುದು ಎನ್ನಲಾಗಿದೆ

ಬಿಜೆಪಿ ರಾಷ್ಟ್ರೀಯ ನಾಯಕನಿಗೆ ಈ ಎಲ್ಲಾ ಅರ್ಹತೆ ಇರಲೇಬೇಕಂತೆ!

Profile Rakshita Karkera Jul 9, 2025 12:00 PM

ನವದೆಹಲಿ: ಪ್ರಸ್ತುತ ರಾಷ್ಟ್ರ ರಾಜಕೀಯದಲ್ಲಿ ಎಲ್ಲರ ಗಮನ ಸೆಳೆದಿರುವ ಸಂಗತಿ ಎಂದರೆ ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷನ(Next BJP Chief) ಆಯ್ಕೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರೇಸ್‌ನಲ್ಲಿ ಈಗಾಗಲೇ ಬಿಜೆಪಿಯ ಹಲವು ಹಿರಿಯ ನಾಯಕರು ಇದ್ದಾರೆ. ಅದರ ನಡುವೆ ಈ ಬಾರಿ ಮಹಿಳೆಯರಿಗೆ ಆದ್ಯತೆ ಅದರಲ್ಲೂ ದಕ್ಷಿಣ ಭಾರತದ ಮಹಿಳಾ ನಾಯಕರಿಗೆ ಮಣೆ ಹಾಕಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಈ ನಡುವೆ ಸದ್ದಿಲ್ಲದೇ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ಮಾನದಂಡವೊಂದನ್ನು ವಿಧಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಆರ್‌ಎಸ್‌ಎಸ್‌ ನಡೆಸಿರುವ ಸರಣಿ ಸಭೆಯಲ್ಲಿ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇನ್ನು ಬಿಜೆಪಿಯಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿರುವುದು ಎನ್ನಲಾಗಿದೆ

ಮಾನದಂಡಗಳೇನು?

ಬಿಜೆಪಿಯ ಮುಂದಿನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಾನು ಯಾವುದೇ ಹೆಸರನ್ನು ಆರ್‌ಎಸ್‌ಎಸ್‌ ಸೂಚಿಸಿಲ್ಲ ಎಂದು ಹೇಳಿಕೊಂಡರೂ, ಈ ಪ್ರಕ್ರಿಯೆಯಲ್ಲಿ ಆರ್‌ಎಸ್‌ಎಸ್‌ ಅಭಿಪ್ರಾಯವನ್ನು ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಬಿಜೆಪಿಯ ಯಾವುದೇ ನಿರ್ಧಾರಕ್ಕೆ ಆರ್‌ಎಸ್‌ಎಸ್‌ನ ಸಮ್ಮತಿ ಅಗತ್ಯ ಎಂಬು ಅಲಿಖಿತ ಕ್ರಮ. ಈ ಹೀಗಿರುವಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ಆಯ್ಕೆಯಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಪಾತ್ರ ವಹಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಈ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷನ ಆಯ್ಕೆ ಪ್ರಕ್ರಿಯೆಗೆ ಆರ್‌ಎಸ್‌ಎಸ್‌ ಕೆಲವೊಂದು ಮಾನದಂಡಗಳನ್ನು ಅನುಸರಿಸುವಂತೆ ಬಿಜೆಪಿಗೆ ಸೂಚನೆ ನೀಡಿದೆ ಎಂದು ಅಧಿಕೃತ ಮಾಹಿತಿಯೊಂದ ಹೊರಬಿದ್ದಿದೆ.

ಆರ್‌ಎಸ್‌ಎಸ್‌ ನೀಡಿರುವ ಕೆಲವೊಂದು ಮಾನದಂಡಗಳ ಪ್ರಕಾರ ಬಿಜೆಪಿ ರಾಷ್ಟಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ವ್ಯಕ್ತಿ ತಳಮಟ್ಟದಿಂದ ಪಕ್ಷ ಸಂಘಟನೆ ಮೂಲಕ ಬೆಳೆದು ಬಂದವನಾಗಿರಬೇಕು. ಜನ ಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗರಬೇಕು. ಮುಖ್ಯವಾಗಿ ನಿಗಧಿತ ವಯಸ್ಸಿಗಿಂತ ಆತನ ವಯಸ್ಸು ಕಡಿಮೆ ಇರಬಾರದು ಎಂಬುದು ಸಂಘ ನೀಡಿರುವ ಮಾನದಂಡಗಳ ಪಟ್ಟಿಯಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು. ಆ ಮೂಲಕ ಆರ್‌ಎಸ್‌ಎಸ್‌ ಕೇವಲ ಕೇಂದ್ರೀಕರಿತ ನಾಯಕತ್ವದ ಬಗ್ಗೆ ಒಲವು ಹೊಂದಿಲ್ಲ. ಬದಲಾಗಿ ಹೈಕಮಾಂಡ್‌ ಮತ್ತು ತಳಮಟ್ಟದ ನಾಯಕರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ನಾಯಕರು ಬೇಕಾಗಿದ್ದಾರೆ. ಅಲ್ಲದೇ ಕಾರ್ಯಕರ್ತರನ್ನು ಸಂಘಟಿಸುವ ಶಕ್ತಿ ಅವಲ್ಲಿರಬೇಕು ಎಂಬುದು ಆರ್‌ ಎಸ್‌ಎಸ್‌ ಚಿಂತನೆ ಎನ್ನಲಾಗಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ (BJP national president) ಯಾರ ಹೆಸರನ್ನು ಫೈನಲ್ ಮಾಡಬೇಕು ಎನ್ನುವ ಗೊಂದಲ ಬಿಜೆಪಿಯಲ್ಲಿ ಪಾಳಯದಲ್ಲಿ ಮುಂದುವರಿದಿದೆ. ಅಧ್ಯಕ್ಷರ ಬದಲಾವಣೆ ಕುರಿತು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಅಧಿಕೃತವಾಗಿ ಯಾವುದೇ ಘೋಷಣೆ ಬರದಿದ್ದರೂ ಜೂನ್ ಮಧ್ಯಭಾಗದಲ್ಲಿ ಔಪಚಾರಿಕ ಪ್ರಕ್ರಿಯೆಯು ಪ್ರಾರಂಭವಾಗಬಹುದು ಎಂದು ಮೂಲಗಳು ಸೂಚಿಸುತ್ತವೆ. ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ, ಜೆ.ಪಿ.ನಡ್ಡಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಒಂದು ವರ್ಷ ಆಗುತ್ತಾ ಬಂದರೂ, ಗೊಂದಲಕ್ಕೆ ಪರಿಹಾರ ಸಿಗುತ್ತಿಲ್ಲ.

ಈ ಸುದ್ದಿಯನ್ನೂಓದಿ: BJP President: ಬಿಜೆಪಿಗೆ ಮಹಿಳಾ ಸಾರಥಿ? ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ನಾರಿಮಣಿಯರು!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರೇಸ್‌ನಲ್ಲಿ ಟಾಪ್ 3 ಸ್ಪರ್ಧಿಗಳು

ಒಡಿಶಾದ ಪ್ರಮುಖ ಒಬಿಸಿ ನಾಯಕರಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ , ತಮ್ಮ ಸಂಘಟನಾ ಚಾತುರ್ಯ ಮತ್ತು ಕೇಂದ್ರ ನಾಯಕತ್ವದ ಸಾಮೀಪ್ಯಕ್ಕೆ ಹೆಸರುವಾಸಿಯಾಗಿದ್ದು, ಪಕ್ಷದ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿರುವ ಪ್ರಮುಖ ನಾಯಕರಲ್ಲಿ ಒಬ್ಬರು. ಮತ್ತೊಬ್ಬ ಪ್ರಬಲ ಆಕಾಂಕ್ಷಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಈಗ ಕೇಂದ್ರ ಸಚಿವರಾಗಿರುವ ಅವರನ್ನು ತಳಮಟ್ಟದ ಅನುಭವ ಹೊಂದಿರುವ ಜನನಾಯಕ ಎಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಹರಿಯಾಣ ಮುಖ್ಯಮಂತ್ರಿ ಹುದ್ದೆಯಿಂದ ಕೇಂದ್ರ ಸಚಿವ ಸಂಪುಟಕ್ಕೆ ವರ್ಗಾವಣೆಗೊಂಡ ಮನೋಹರ್ ಲಾಲ್ ಖಟ್ಟರ್ , ನಿರಂತರತೆ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ.