ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KMC Hospital: ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ; ಜನ್ಮಜಾತ ಹೃದಯ ಸಮಸ್ಯೆ ನಿವಾರಿಸಿದ ವೈದ್ಯರು

ಹುಟ್ಟಿನಿಂದಲೇ ಹೃದಯ ಸಂಬಂಧಿ ತೊಂದರೆ ಅನುಭವಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 35ರಿಂದ 40 ವರ್ಷ ವಯಸ್ಸಿನ ರೋಹಿತ್ ಎಂಬವರಿಗೆ ಅಪರೂಪ ಮತ್ತು ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಅವರು ಹುಟ್ಟಿನಿಂದಲೇ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು.

ಮಂಗಳೂರು ಕೆಎಂಸಿಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಮಂಗಳೂರು: ಹುಟ್ಟಿನಿಂದಲೇ ಹೃದಯ ಸಂಬಂಧಿ ತೊಂದರೆ ಅನುಭವಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆ (KMC Hospital) ವೈದ್ಯರು ಶಸ್ತ್ರಚಿಕಿತ್ಸೆ (Heart Operation) ನಡೆಸಿದ್ದಾರೆ. 35ರಿಂದ 40 ವರ್ಷ ವಯಸ್ಸಿನ ರೋಹಿತ್ ಎಂಬವರಿಗೆ ಅಪರೂಪ ಮತ್ತು ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಅವರು ಹುಟ್ಟಿನಿಂದಲೇ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಶೇ. 1ಕ್ಕಿಂತಲೂ ಕಡಿಮೆ ಮಂದಿಯಲ್ಲಿ ಕಂಡುಬರುವ ವಲ್ಸಾಲ್ವಾ ಅನ್ಯೂರಿಮ್ ಸೈನಸ್ ಮತ್ತು ತೀವ್ರವಾದ ಅಯೋರ್ಟಿಕ್ ರಿಗರ್ಗಿಟೇಶನ್ (Valsalva aneurysm sinus and acute aortic regurgitation) ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು.

ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜನ್ಮಜಾತ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಹಿತ್ ಎಂಬವರಿಗೆ ಸಂಕೀರ್ಣವಾದ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಅವರು ವಲ್ಸಾಲ್ವಾ ಅನ್ಯೂರಿಮ್ ಸೈನಸ್ ಮತ್ತು ತೀವ್ರವಾದ ಅಯೋರ್ಟಿಕ್ ರಿಗರ್ಗಿಟೇಶನ್ ಎಂಬ ಹೃದಯ ತೊಂದರೆಯಿಂದ ಬಳಲುತ್ತಿದ್ದರು.

ಕಳೆದ ಕೆಲವು ತಿಂಗಳಿಂದ ರೋಹಿತ್ ಹೆಚ್ಚು ಸುಸ್ತು, ಉಸಿರಾಟದ ತೊಂದರೆ, ಎರಡೂ ಕಾಲುಗಳಲ್ಲಿ ಊತವನ್ನು ಅನುಭವಿಸುತ್ತಿದ್ದರು. ಬಳಿಕ ಅವರನ್ನು ಪರೀಕ್ಷಿಸಿದ ವೈದ್ಯರು ಅವರಿಗೆ ಸೈನಸ್ ಆಫ್ ವಲ್ಸಲ್ವಾ ಅನ್ಯೂರಿಮ್ ಇರುವುದನ್ನು ಪತ್ತೆ ಹಚ್ಚಿದರು. ಇದು ಹುಟ್ತೊಂಟಿನಿಂದಲೇ ಇರುವ ತೊಂದರೆಯಾಗಿತ್ತು.

ಇದು ಮಹಾಪಧಮನಿಯ ಗೋಡೆಯ ಭಾಗವು ಹೊರಕ್ಕೆ ಬಲೂನುಗಳಾಗಿ ಉಬ್ಬಿ ಹತ್ತಿರದ ಹೃದಯ ರಚನೆಗಳನ್ನು ಸಂಕುಚಿತಗೊಳಿಸುವ ಮತ್ತು ಕವಾಟದ ಕಾರ್ಯವನ್ನು ದುರ್ಬಲಗೊಳಿಸುವ ಅಪರೂಪದ ಸ್ಥಿತಿ.

ಹೃದಯ ತಜ್ಞರಾದ ಡಾ. ಹರೀಶ್ ರಾಘವನ್, ಡಾ. ಮಾಧವ್ ಕಾಮತ್, ಡಾ. ಐರೇಶ್ ಶೆಟ್ಟಿ ನೇತೃತ್ವದ ತಂಡವು ಕಾರ್ಡಿಯಾಕ್ ಅರಿವಳಿಕೆ ತಜ್ಞರಾದ ಡಾ. ಪಂಚಾಕ್ಷರಿ ಗೌಡ, ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಸಲಹೆಗಾರ ಡಾ.ಎಂ.ಎನ್. ಭಟ್ ನೇತೃತ್ವದಲ್ಲಿ ರೋಹಿತ್ ಅವರಿಗಿದ್ದ ಅನ್ಯೂರಿಮ್‌ನ ಪ್ಯಾಚ್ ಮುಚ್ಚುವಿಕೆ ಮತ್ತು ಮಹಾಪಧಮನಿಯ ಕವಾಟವನ್ನು ಯಾಂತ್ರಿಕ ಕೃತಕ ಅಂಗದೊಂದಿಗೆ ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಇದು ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ಎಂದು ಡಾ.ಹರೀಶ್ ರಾಘವನ್ ಹೇಳಿದ್ದು, ರೋಗಿಯು ಚಿಕಿತ್ಸೆಯ ಕಾರ್ಯವಿಧಾನಕ್ಕೆ ಸಹಕರಿಸಿದ್ದು, ಅವಧಿಗಿಂತ ಮುನ್ನವೇ ಅವರು ಚೇತರಿಸಿಕೊಂಡಿದ್ದಾರೆ. ಆರಂಭಿಕ ರೋಗನಿರ್ಣಯವು ಯಶಸ್ವಿ ಫಲಿತಾಂಶ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ತುರ್ತಾಗಿ ಇದಕ್ಕೆ ಚಿಕಿತ್ಸೆ ನೀಡದೇ ಇರುತ್ತಿದ್ದರೆ ತುರ್ತು ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ರೋಗ ಲಕ್ಷಣಗಳ ಆರಂಭಿಕ ಗುರುತಿಸುವಿಕೆ, ವೈದ್ಯಕೀಯ ತಂಡವು ಯೋಜಿತ ಶಸ್ತ್ರಚಿಕಿತ್ಸಾ ವಿಧಾನದಿಂದ ರೋಹಿತ್ ಅವರಿಗೆ ಇದ್ದ ಈ ತೊಂದರೆಯನ್ನು ನಿವಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣವು ನಮ್ಮ ಹೃದಯ ಚಿಕಿತ್ಸಾ ತಂಡದ ಅಸಾಧಾರಣ ಸಾಮರ್ಥ್ಯಕ್ಕೆ ಸಾಕ್ಷಿ. ಕೆಎಂಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸುಧಾರಿತ, ಜೀವ ಉಳಿಸುವ ಚಿಕಿತ್ಸಾ ವಿಧಾನಗಳನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸಘೀರ್ ಸಿದ್ಧಿಕಿ ಹೇಳಿದರು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ವಾರದೊಳಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಹಿಂದಿನ ರೋಗಲಕ್ಷಣಗಳಿಂದ ಮುಕ್ತರಾಗಿದ್ದಾರೆ ಎಂದು ಸಿದ್ದಿಕಿ ತಿಳಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆ

ಆರೋಗ್ಯ ಕ್ಷೇತ್ರದಲ್ಲಿ ಮಣಿಪಾಲ್ ಆಸ್ಪತ್ರೆಗಳು ಭಾರತದಲ್ಲೇ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿವೆ. ಇವುಗಳು ವಾರ್ಷಿಕವಾಗಿ 7 ಮಿಲಿಯನ್‌ಗೂ ಹೆಚ್ಚಿನ ರೋಗಿಗಳಿಗೆ ಆರೋಗ್ಯ ಸೇವೆಯನ್ನು ನೀಡುತ್ತಿವೆ. ಕೈಗೆಟುಕುವ, ಉತ್ತಮ-ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಸಂಸ್ಥೆಯ ಗುರಿ. ಮೆಡಿಕಾ ಸಿನರ್ಜಿ ಆಸ್ಪತ್ರೆ ಮತ್ತು ಎಎಂಆರ್‌ಐ ಆಸ್ಪತ್ರೆಗಳ ಸ್ವಾಧೀನ ಪೂರ್ಣಗೊಂಡ ಅನಂತರ ಇಂದು 19 ನಗರಗಳಲ್ಲಿ 10,500ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ 37 ಆಸ್ಪತ್ರೆಗಳ ಪ್ಯಾನ್-ಇಂಡಿಯಾ ಜಾಲವನ್ನು ಹೊಂದಿದೆ. ಇವುಗಳಲ್ಲಿ 5,600ಕ್ಕೂ ಹೆಚ್ಚು ಪ್ರತಿಭಾನ್ವಿತ ವೈದ್ಯರು, 18,600ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Drone Prathap: ಊರಲ್ಲಿ ಓಡಾಡಲು ಅಮ್ಮನಿಗೆ ಹೊಸ ಕಾರು ತೆಗೆದುಕೊಟ್ಟ ಡ್ರೋನ್ ಪ್ರತಾಪ್

ಮಣಿಪಾಲ್ ಆಸ್ಪತ್ರೆಗಳು NABH ಮತ್ತು AAHRPP ಮಾನ್ಯತೆ ಪಡೆದಿದ್ದು, ಹೆಚ್ಚಿನ ಆಸ್ಪತ್ರೆಗಳು NABL, ER ಮತ್ತು ರಕ್ತ ಬ್ಯಾಂಕ್‌ಗಳನ್ನು ಹೊಂದಿವೆ. ಅತ್ಯುತ್ತಮ ನರ್ಸಿಂಗ್‌ಗಾಗಿಯೂ ಗುರುತಿಸಲ್ಪಟ್ಟಿದೆ. ವಿವಿಧ ಸಮೀಕ್ಷೆಗಳಲ್ಲಿ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಆಸ್ಪತ್ರೆ ಎಂದು ಹೆಸರು ಮಾಡಿದೆ.