Makeup Awareness: ವಾಟರ್‌ಫ್ರೂಫ್ ಕಾಸ್ಮೆಟಿಕ್ಸ್ ಬಳಕೆದಾರರು ಗಮನಿಸಬೇಕಾದ ಸಂಗತಿಗಳಿವು!
Makeup Awareness: ಮಾನ್ಸೂನ್‌ನಲ್ಲಿ ವಾಟರ್‌ಫ್ರೂಫ್ ಕಾಸ್ಮೆಟಿಕ್ಸ್ ಬಳಸುವ ಬ್ಯೂಟಿ ಪ್ರಿಯರೇ ಎಚ್ಚರ! ಬಳಸುವ ಮುನ್ನ ಈ ಕುರಿತಂತೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್. ಅದೇನದು? ಈ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ವಾಟರ್‌ಫ್ರೂಫ್ ಕಾಸ್ಮೆಟಿಕ್ಸ್ ಬಳಸುವವರೇ ಎಚ್ಚರ! ಇವುಗಳ ನಿರಂತರ ಬಳಕೆ ಚರ್ಮದ ನಾನಾ ಸಮಸ್ಯೆಗಳನ್ನು ಹುಟ್ಟುಹಾಕಬಹುದು, ಇಲ್ಲವೇ, ತ್ವಚೆ ನಿಸ್ತೇಜವಾಗಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್. ಆದರೆ, ಈ ಸೀಸನ್‌ನಲ್ಲಿ ನೀವು ಬಳಸಲೇಬೇಕಾದಲ್ಲಿ, ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು (Makeup Awareness) ಮುಂದುವರೆಯುವುದು ಉತ್ತಮ. ಇದಕ್ಕಾಗಿ ಒಂದಿಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಿದಲ್ಲಿ ಈ ಸಮಸ್ಯೆಗಳಿಂದ ಬಚಾವಾಗಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ವಾಟರ್ ಪ್ರೂಫ್ ಮಸ್ಕರಾ, ಐಬ್ರೋ ಹಾಗೂ ಐ ಶೇಡ್ಸ್ ಬಳಸುವಾಗ ಆದಷ್ಟೂ ನಿಮ್ಮ ತ್ವಚೆಗೆ ಮ್ಯಾಚ್ ಆಗುವಂತಹ ಮಾಯಿಶ್ಚರೈಸರ್ ಬಳಸಿ. ಲೈಟಾಗಿ ಮೇಕಪ್ ಮಾಡಿ. ಇಲ್ಲವಾದಲ್ಲಿ ಕಣ್ಣಿನ ಚರ್ಮದ ಸುತ್ತಮುತ್ತ ನೆರಿಗೆ ಮೂಡಬಹುದು.

ವಾಟರ್‌ಪ್ರೂಫ್ ಮೇಕಪ್ ರಿಮೂವಿಂಗ್
ವಾಟರ್‌ಪ್ರೂಫ್ ಮೇಕಪ್ ಮಾಡಿದಾಗ ಯಾವುದೇ ಕಾರಣಕ್ಕೂ ಮೇಕಪ್ ತೆಗೆಯದೇ ಮಲಗಲೇಕೂಡದು. ಮೇಕಪ್ ರಿಮೂವರ್‌ನಿಂದ ತೆಗೆಯುವುದು ಅಗತ್ಯ. ಇಲ್ಲವಾದಲ್ಲಿ ಚರ್ಮದ ರಂಧ್ರಗಳು ಮುಚ್ಚಿ, ಮೊಡವೆಗಳು ಮೂಡಬಹುದು.

ಲಾಂಗ್ ಲಿಪ್ಸ್‌ಟಿಕ್ ಮೋಹ
ಲಾಂಗ್ ಲಾಸ್ಟಿಂಗ್ ಲಿಪ್‌ಸ್ಟಿಕ್‌ಗಳು ಮಾನ್ಸೂನ್‌ನಲ್ಲಿ ಆಕರ್ಷಕ ಲುಕ್ ನೀಡುತ್ತವೆ. ನಿಜ! ಆದರೆ, ಇದನ್ನು ಪ್ರತಿದಿನ ಬಳಸುವವರು ಮಲಗುವ ಮುನ್ನ ರಾತ್ರಿಯಿಡಿ ಉಳಿಯುವಂತಹ ಮಾಯಿಶ್ಚರೈಸರ್ ಅಂಶವಿರುವ ಲಿಪ್‌ಬಾಮ್ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಬೆಸ್ಟ್. ಹೀಗಿದ್ದೂ ತುಟಿಯ ಚರ್ಮ ಒಣಗಲಾರಂಭಿಸಿದಲ್ಲಿ ಹಚ್ಚುವುದನ್ನು ಆವಾಯ್ಡ್ ಮಾಡಿ.

ವಾಟರ್‌ಪ್ರೂಫ್ ಫೌಂಡೇಷನ್ ಬಳಕೆ
ವಾಟರ್‌ಪ್ರೂಫ್ ಫೌಂಡೇಷನ್‌ನಲ್ಲಿ ಸಿಲಿಕಾನ್ ಅಂಶವಿರುವುದರಿಂದ ಇದು ಚರ್ಮಕ್ಕೆ ಉಸಿರಾಡಲು ಅನುವು ಮಾಡಿಕೊಡುವುದಿಲ್ಲ. ಪ್ರತಿದಿನ ವಾಟರ್‌ಫ್ರೂಫ್ ಮೇಕಪ್ ಹಚ್ಚುವುದರಿಂದ ಮುಖದ ಮೇಲೆ ಅತಿ ಬೇಗ ನೆರಿಗೆಗಳು ಮೂಡಬಹುದು, ಅಲ್ಲದೇ, ಚರ್ಮದ ಅಲರ್ಜಿಯುಂಟಾಗಬಹುದು. ಹಾಗಾಗಿ ಕೆಮಿಕಲ್ ಫ್ರೀ ಅಥವಾ ಹರ್ಬಲ್ ಕಾಸ್ಮೆಟಿಕ್ಸ್ ಬಳಕೆ ಮಾಡುವುದು ಸೂಕ್ತ.
ಈ ಸುದ್ದಿಯನ್ನೂ ಓದಿ | Monsoon Fashion 2025: ಮಾನ್ಸೂನ್‌ಗೆ ಬಂತು ಲೈಟ್ ವೇಟ್ ಯೂನಿಸೆಕ್ಸ್ ಜಾಕೆಟ್ಸ್