MLA Sanjay Gaikwad: ಕ್ಯಾಂಟೀನ್ ಸಿಬ್ಬಂದಿಗೆ ಶಾಸಕನಿಂದ ಕಪಾಳಮೋಕ್ಷ! ವಿಡಿಯೊ ಫುಲ್ ವೈರಲ್
ಮಹಾರಾಷ್ಟ್ರ ವಿಧಾನಸಭೆಯ ಮಳೆಗಾಲದ ಅಧಿವೇಶನದ ವೇಳೆ ಹಲವಾರು ಶಾಸಕರು ತಂಗಿರುವ ರಾಜ್ಯ-ಸ್ವಾಮ್ಯದ ಅತಿಥಿ ಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಆಕ್ರೋಶಗೊಂಡ ಶಿಂಧೆ ಸೇನಾ ಶಾಸಕ ಸಂಜಯ್ ಗಾಯಕ್ವಾಡ್ (MLA Sanjay Gaikwad) ಕ್ಯಾಂಟೀನ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.


ಮುಂಬೈ: ಅತಿಥಿ ಗೃಹದ ( MLA Guest House) ಕ್ಯಾಂಟೀನ್ ಸಿಬ್ಬಂದಿಗೆ ಶಾಸಕ ( Shinde Sena MLA) ಸಂಜಯ್ ಗಾಯಕವಾಡ್ (Sanjay Gaikwad ) ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಅತಿಥಿ ಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಆಕ್ರೋಶಗೊಂಡ ಶಿಂಧೆ ಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಕ್ಯಾಂಟೀನ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಹಲವಾರು ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ(Maharastra) ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ವಿವಿಧ ಪಕ್ಷಗಳ ನಾಯಕರು ಇದನ್ನು ಖಂಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಳೆಗಾಲದ ಅಧಿವೇಶನದ ವೇಳೆ ಹಲವಾರು ಶಾಸಕರು ತಂಗಿರುವ ರಾಜ್ಯ-ಸ್ವಾಮ್ಯದ ಅತಿಥಿ ಗೃಹದಲ್ಲಿ ಬುಲ್ದಾನಾ ಕ್ಷೇತ್ರದ ಶಿವಸೇನೆ ಶಿಂಧೆ ಬಣದ ಶಾಸಕ ಸಂಜಯ್ ಗಾಯಕವಾಡ್ ಅವರು ಶಾಸಕರ ಅತಿಥಿ ಗೃಹದ ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಕ್ಯಾಂಟೀನ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಈಗ ಹೊಸ ವಿವಾದ ಸೃಷ್ಟಿಯಾಗಿದೆ.
ಕೆಲವು ದಿನಗಳ ಹಿಂದೆ ಮರಾಠಿ ಮಾತನಾಡಲು ನಿರಾಕರಿಸಿದ ಮೀರಾ ರಸ್ತೆಯ ಅಂಗಡಿಯವರ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದು ಆಗ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಶಾಸಕರ ವರ್ತನೆ ಮತ್ತೆ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಹೊಸ ವಿವಾದವನ್ನು ಎಬ್ಬಿಸಿದೆ.
ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕೆ ಪ್ರತಿಯಾಗಿ ಅವರು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ಯಾಂಟೀನ್ ಸಿಬ್ಬಂದಿ ಮತ್ತು ಶಿವಸೇನೆ ಶಾಸಕ ಸಂಜಯ್ ಗಾಯಕವಾಡ್ ನಡುವೆ ತೀವ್ರ ವಾದ-ವಿವಾದ ನಡೆದಿದೆ. ಇದು ಉಲ್ಬಣಗೊಂಡು ದೈಹಿಕ ಹಲ್ಲೆಗೆ ಕಾರಣವಾಗಿತ್ತು ಎಂದು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
इन से मिलिए यह शिवसेना के MLA संजय गायकवाड हैं, और जिसे यह मार रहा है वह MLA कैंटीन का एक कर्मचारी है जो की मराठी भाषी महाराष्ट्रीयन है, लेकिन यह उसे जानवरों की तरह इसलिए मुक्के मारे जा रहे हैं क्योंकि इनके हिसाब से दाल की क्वालिटी सही नहीं है, शाबाश pic.twitter.com/SzqTn8CiFi
— Nitin Shukla 🇮🇳 (@nshuklain) July 9, 2025
ಈ ಘಟನೆ ಬಗ್ಗೆ ಸಂಜಯ್ ಗಾಯಕವಾಡ್ ಅಥವಾ ಶಿವಸೇನೆ (ಶಿಂಧೆ ಬಣ) ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ರಾಜಕೀಯ ಘರ್ಷಣೆ
ರಾಜ್ಯದಲ್ಲಿ ಮರಾಠಿ ಭಾಷೆ ಬಳಕೆಯನ್ನು ಉತ್ತೇಜಿಸಲು ಎಂಎನ್‌ಎಸ್‌ನ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಇದು ಎಂಎನ್‌ಎಸ್ ಮತ್ತು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ನಡುವೆ ಘರ್ಷಣೆಗೆ ಕಾರಣವಾಗಿದೆ. ಈ ನಡುವೆಯೇ ಶಾಸಕ ಸಂಜಯ್ ವರ್ತನೆ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ENG vs IND: ನೆಟ್ಸ್‌ನಲ್ಲಿ ಬೆಂಕಿ ಬೌಲಿಂಗ್ ಅಭ್ಯಾಸ ನಡೆಸಿದ ಬುಮ್ರಾ; 3ನೇ ಪಂದ್ಯಕ್ಕೆ ಲಭ್ಯ
ಕೆಲವು ದಿನಗಳ ಹಿನೆ ಮರಾಠಿ ಮಾತನಾಡದ ಕಾರಣ ಉತ್ತರ ಭಾರತೀಯ ಅಂಗಡಿಯವನೊಬ್ಬನ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದರ ವಿಡಿಯೊಗಳು ಹೊರಬಂದ ಬಳಿಕ ರಾಜ್ ಠಾಕ್ರೆ ನೇತೃತ್ವದ ಪಕ್ಷವು ತೀವ್ರ ಟೀಕೆಗೆ ಗುರಿಯಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ ಠಾಕ್ರೆ ತಮ್ಮ ಕಾರ್ಯಕರ್ತರಿಗೆ "ಅವರನ್ನು ಹೊಡೆಯಿರಿ ಆದರೆ ವಿಡಿಯೊಗಳನ್ನು ರೆಕಾರ್ಡ್ ಮಾಡಬೇಡಿ" ಎಂದು ಹೇಳಿದ್ದರು. ಈ ನಡುವೆ ಮರಾಠಿ ಭಾಷೆಗೆ ಯಾವುದೇ ಅವಮಾನ ಮಾಡಿದರೆ ಪಕ್ಷದಿಂದ ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಂಎನ್‌ಎಸ್ ಹೇಳಿದೆ.