ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವ್ಯಕ್ತಿಯ ಹೊಟ್ಟೆಯೊಳಗೆ 1 ಅಡಿ ಉದ್ದದ 'ಈಲ್ 'ಜೀವಿ ಪತ್ತೆ; ಡಾಕ್ಟರ್‌ ಫುಲ್‌ ಶಾಕ್‌!

Viral: ವೈದ್ಯಕೀಯ ಲೋಕದಲ್ಲಿ ಅನೇಕ ರೀತಿಯ ಆಶ್ಚರ್ಯಕರ ಘಟನೆಗಳು ಬೆಳಕಿಗೆ ಬರ್ತಾ ಇರುತ್ತವೆ. ಚೀನಾದ ಹುನಾನ್ ನಲ್ಲಿ ಅಚ್ಚರಿಯ ಪ್ರಕರಣ ನಡೆದಿದೆ. ಹೊಟ್ಟೆ ನೋವು ಎಂದು ವೈದ್ಯರ ಬಳಿ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಈಲ್ ಎಂಬ ಜೀವಿ ಪತ್ತೆಯಾಗಿದೆ.

ವ್ಯಕ್ತಿಯ ಹೊಟ್ಟೆಯೊಳಗೆ 1 ಅಡಿ ಉದ್ದದ ಜೀವಿ ಪತ್ತೆ!

Profile Sushmitha Jain Jul 9, 2025 12:42 PM

ಹುನಾನ್: ವೈದ್ಯಕೀಯ ಲೋಕ(Medical Field)ದಲ್ಲಿ ಅನೇಕ ರೀತಿಯ ಆಶ್ಚರ್ಯಕರ(Weird) ಘಟನೆಗಳು ಬೆಳಕಿಗೆ ಬರ್ತಾ ಇರುತ್ತವೆ. ಚೀನಾದ ಹುನಾನ್( Chinese Hunan) ನಲ್ಲಿ ಅಚ್ಚರಿಯ ಪ್ರಕರಣ ನಡೆದಿದೆ. ಹೊಟ್ಟೆ ನೋವು ಎಂದು ವೈದ್ಯರ ಬಳಿ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಈಲ್ (Eel Creature) ಎಂಬ ಜೀವಿ ಪತ್ತೆಯಾಗಿದೆ.

ಹೌದು ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಮೊದಲೆಲ್ಲಾ ಹೊಟ್ಟೆಯಲ್ಲಿ ಗೆಡ್ಡೆ ಪತ್ತೆಯಾಯಿತ್ತು ಎಂಬೆಲ್ಲಾ ಸುದ್ದಿಗಳನ್ನು ಕೇಳುತ್ತಿದ್ದವು. ಆದರೀಗ ಹೊಟ್ಟೆಯಲ್ಲಿ ಕಬ್ಬಿಣ ಸಿಕ್ಕಿತು, ಸ್ಟಿಲ್ ಗ್ಲಾಸ್ ಪತ್ತೆಯಾಯಿತು ಅಷ್ಟೇ ಯಾಕೆ ಹುಳು-ಜಂತುಗಳು ಜೀವಂತವಾಗಿ ಕಂಡು ಬಂದವು ಎಂದೆಲ್ಲಾ ಸುದ್ದಿಗಳು ಬರುತ್ತದೆ. ಈಗ್ ಇಂತಹದೊಂದು ಪ್ರಕರಣವೊಂದು ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ವೈದ್ಯರನ್ನು ಭೇಟಿಯಾದಾಗ ಹೊಟ್ಟೆಯೊಳಗೆ ಈಲ್ ಜೀವಿ ಇರುವುದು ವೈದ್ಯರ ಗಮನಕ್ಕೆ ಬಂದಿದೆ.

ಚೀನಾದಲ್ಲಿ ನಡೆದ ಆಘಾತಕಾರಿ ಘಟನೆ ಇದಾಗಿದ್ದು, ಇಲ್ಲಿ ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯೊಳಗಿನಿಂದ 1 ಅಡಿ ಉದ್ದದ ಈಲ್ ಎಂಬ ಹಾವಿನಂತೆ ಕಾಣುವ ಜೀವಂತ ಮೀನು ಹೊರತೆಗೆದಿದ್ದಾರೆ. ಇಷ್ಟಕ್ಕೂ ಈ ಮೀನು ಕರುಳಿನ ಜಠರದ ಮೂಲಕ ಈ ವ್ಯಕ್ತಿಯ ಹೊಟ್ಟೆ ಸೇರಿತ್ತು.

ಈ ಸುದ್ದಿಯನ್ನು ಓದಿ: Viral News: ವ್ಯಕ್ತಿಯ ಸಿಟಿ ಸ್ಕ್ಯಾನ್‍ ನೋಡಿ ಶಾಕ್ ಆದ ವೈದ್ಯರು; ಅಂಥದ್ದೇನಿದೆ ಅದರಲ್ಲಿ?

ಹೌದು, ತೀವ್ರವಾದ ಹೊಟ್ಟೆನೋವು ಹಾಗೂ ಕಿಬ್ಬೊಟ್ಟೆ ನೋವು, ವಿಪರೀತವಾದ ಸೆಳೆತ ಎಂದು ಹುನಾನ್ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆ ಸೇರಿದ ವ್ಯಕ್ತಿಯನ್ನು ಅಲ್ಲಿನ ತುರ್ತು ವಿಭಾಗದ ವೈದ್ಯಕೀಯ ಕೇಂದ್ರದಲ್ಲಿ ಎಕ್ಸ್-ರೇ ಮತ್ತು ಅಲ್ಟ್ರಾಸೌಂಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆಯಲ್ಲಿ ಹೊಟ್ಟೆಯಲ್ಲಿ ವಸ್ತುವೊಂದು ಪತ್ತೆಯಾಗಿದೆ. ಇದರಿಂದಾಗಿ ‘ಪೆರಿಟೋನಿಟಿಸ್’ ಎಂಬ ಸೋಂಕು ಕಾಣಿಸಿಕೊಂಡಿದೆ. ಅದು ಹೊಟ್ಟೆ ನೋವಿಗೆ ಕಾರಣ ಎಂದು ತಿಳಿದ ವೈದ್ಯರು ಕ್ಷಣವೇ ವ್ಯಕ್ತಿಗೆ ತುರ್ತು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.

ಆದರೆ ವ್ಯಕ್ತಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದಾಗ ಹೊಟ್ಟೆಯೊಳಗೆ 1 ಅಡಿ ಉದ್ದದ ಉದ್ದದ ಜೀವಂತ ಮೀನನ್ನು ಹೋಲುವ ಇರುವುದನ್ನು ಕಂಡು ವೈದ್ಯರೂ ಬೆಚ್ಚಿ ಬಿದಿದ್ದಾರೆ. ಕರುಳಿನ ಜಠರ ಮೂಲಕ ಜೀವಂತ ಮೀನು ಹೊಟ್ಟೆ ಸೇರಿರುವುದು ಎನ್ನುವ ಶಂಕೆ ವ್ಯಕ್ತವಾಗಿದೆ. ಅದಲ್ಲದೇ ಈ ಜೀವಂತ ಮೀನು ಕರುಳಿನಲ್ಲಿ ರಂಧ್ರಗಳನ್ನು ಕೊರೆದು ಹಾನಿ ಮಾಡಿದ್ದು, ಶಸ್ತ್ರಚಿಕಿತ್ಸೆಯ ವೇಳೆ ಹೊಟ್ಟೆಯೊಳಗಿದ್ದ ಜೀವಂತ ಮೀನು ಹಾಗೂ ಹಾನಿಗೊಳಗಾದ ಅಂಗಾಂಶವನ್ನು ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಚೇತರಿಕೆಯನ್ನು ಕಾಣುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.