Monsoon kids Fashion 2025: ಮಳೆಗಾಲದ ರಂಗು ಹೆಚ್ಚಿಸಿದ ಮಕ್ಕಳ ಕ್ಯೂಟ್ ಫ್ಯಾಷನ್ವೇರ್ಸ್
Monsoon kids Fashion 2025: ಮಾನ್ಸೂನ್ಗೆ ಹೊಂದುವಂತಹ ಆಕರ್ಷಕವಾಗಿರುವ ನಾನಾ ಬಗೆಯ ಮಕ್ಕಳ ಕ್ಯೂಟ್ ಔಟ್ಫಿಟ್ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವುಗಳಲ್ಲಿ ಲೇಯರ್ಡ್ ಲುಕ್ ನೀಡುವ ಕ್ಯೂಟ್ ಡ್ರೆಸ್ಗಳು ಟ್ರೆಂಡಿಯಾಗಿವೆ. ಯಾವ ಬಗೆಯವು ಹೆಚ್ಚು ಮಾರಾಟವಾಗುತ್ತಿವೆ. ಆಯ್ಕೆ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್


ಈ ಸೀಸನ್ಗೆ ಹೊಂದುವಂತಹ ಮಕ್ಕಳ ವೈವಿಧ್ಯಮಯ ಉಡುಪುಗಳು ಹಾಗೂ ಆಕ್ಸೆಸರೀಸ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮಾನ್ಸೂನ್ನ ರಂಗು ಹೆಚ್ಚಿಸಿವೆ. ಅವುಗಳಲ್ಲಿ ಲೇಯರ್ಡ್ ಲುಕ್ ನೀಡುವ ಕ್ಯೂಟ್ ಡ್ರೆಸ್ಗಳು ಟ್ರೆಂಡಿಯಾಗಿವೆ.

ಈ ಬಾರಿಯು ಎಂದಿನಂತೆ, ಮಳೆಯಲ್ಲೂ ಮಕ್ಕಳನ್ನು ಕ್ಯೂಟ್ ಆಗಿ, ಮುದ್ದು ಮುದ್ದಾಗಿ ಬಿಂಬಿಸುವಂತಹ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳಲ್ಲಿ ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣುವಂತಹ ಮಿನಿ ಲೇಯರ್ಡ್ ಔಟ್ಫಿಟ್ಗಳು ಹೊಸರೂಪದಲ್ಲಿ ಆಗಮಿಸಿವೆ.

ಟ್ರೆಂಡಿಯಾಗಿರುವ ಮಕ್ಕಳ ಡ್ರೆಸ್ಗಳು
ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರೂ ಧರಿಸಬಹುದಾದ ಫುಲ್ ಸ್ಲೀವ್, ಹಾಫ್ ಶರ್ಟ್ಸ್ ಹಾಗೂ ಟೀ ಶರ್ಟ್, ಪುಲ್ ಓವರ್, ಸ್ವೆಟ್ ಶರ್ಟ್ಸ್, ಶಾರ್ಟ್ ಬಾಟಮ್ಸ್, ಆಂಕಲ್ ಲೆಂತ್ ಟೈಟ್ಸ್, ಶಾರ್ಟ್ ಕ್ಯೂಲ್ಲೋಟ್ಸ್, ನೀ ಲೆಂಥ್ ಪ್ಯಾಂಟ್ಸ್, ಪೆನ್ಸಿಲ್ ಜೀನ್ಸ್ ಪ್ಯಾಂಟ್, ಜಾಕೆಟ್ಸ್, ರೇನ್ಕೋಟ್ಸ್, ಡೆನಿಮ್ ಸೆಟ್ಗಳು ಟ್ರೆಂಡಿಯಾಗಿವೆ. ಇನ್ನು ಹೆಣ್ಣುಮಕ್ಕಳ ಉಡುಪಿನ ಕೆಟಗರಿಯಲ್ಲಿ ಶಾರ್ಟ್ ಸ್ಕರ್ಟ್, ಮಂಡಿವರೆಗಿನ ಡಂಗ್ರೀಸ್ ಸ್ಟೈಲ್ನ ಪ್ಯಾಂಟ್ ಹಾಗೂ ಸ್ಕರ್ಟ್ಸ್, ಲೇಯರ್ಡ್ ಲುಕ್ ನೀಡುವ ಡಬ್ಬಲ್ ತ್ರಿಬಲ್ ಟಾಪ್ ಹಾಗೂ ನೆಟ್ಟೆಡ್ ಲೈನಿಂಗ್ ಇರುವಂತಹ ಸಾಫ್ಟ್ ಫ್ಯಾಬ್ರಿಕ್ನ ಫ್ರಾಕ್ಸ್, ಮಿಡಿಗಳು, ರಾಂಪರ್ ಶೈಲಿಯ ಶಾರ್ಟ್ ಜಂಪ್ಸೂಟ್ಸ್, ಬೆಲ್ಟ್ ಡ್ರೆಸ್, ಟೈಯಿಂಗ್ ಡ್ರೆಸ್, ವಾಟರ್ ಪ್ರೂಫ್ ಕ್ಯಾಪ್ಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಕ್ಕಳ ಸ್ಟೈಲಿಸ್ಟ್ ದಿವ್ಯಾ ಸುಮನ್.

ಮಕ್ಕಳ ಸ್ಟೈಲಿಸ್ಟ್ ದಿವ್ಯಾ ಸುಮನ್ ಅವರ ಪ್ರಕಾರ, ಮಕ್ಕಳು ಡ್ರೆಸ್ಗಳನ್ನು ಧರಿಸಿದ ನಂತರ ಮಳೆಯಲ್ಲಿ ಆಟವಾಡಿದಲ್ಲಿ ಧರಿಸಿದ ಉಡುಪುಗಳು ಒದ್ದೆಯಾಗಬಹುದು. ಕಾಲಿನಲ್ಲಿ ಆಡಿದಾಗ ಕೊಚ್ಚೆಯಾಗಬಹುದು. ಹಾಗಾಗಿ ಇವನ್ನೆಲ್ಲಾ ಪರಿಗಣನೆಯಲ್ಲಿಟ್ಟುಕೊಂಡಿರುವ ಡಿಸೈನರ್ಗಳು, ಮಾನ್ಸೂನ್ನಲ್ಲಿ ಬಿಡುಗಡೆಯಾಗುವ ಮಕ್ಕಳ ಉಡುಪುಗಳನ್ನು ಆದಷ್ಟೂ ಗಿಡ್ಡನಾಗಿ ವಿನ್ಯಾಸಗೊಳಿಸಿದ್ದಾರೆ ಎನ್ನುತ್ತಾರೆ.

ಕಿಡ್ಸ್ ವೇರ್ ಖರೀದಿಸುವಾಗ ಗಮನದಲ್ಲಿರಲಿ
- ಟ್ರೆಂಡಿ ಡಿಸೈನ್ನೊಂದಿಗೆ ಕಂಫರ್ಟಬಲ್ ಆಗಿರಲಿ.
- ಮಳೆಯಲ್ಲಿ ಒದ್ದೆಯಾದಲ್ಲಿ, ಒಣಗುವಂತಹ ಫ್ಯಾಬ್ರಿಕ್ನದ್ದನ್ನು ಕೊಳ್ಳಿ.
- ಮಕ್ಕಳ ಕಾಲಿಗೆ ಆದಷ್ಟೂ ಬೂಟ್ಸ್ ಹಾಕಿಸಿ.
- ಭಾರವಾದ ಉಡುಪಿನ ಆಯ್ಕೆ ಬೇಡ. ಲೈಟ್ವೇಟ್ ಔಟ್ಫಿಟ್ ಖರೀದಿಸಿ.