ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಹಣದ ಬದಲು ಯುಪಿಐ ಪಾವತಿ ಮಾಡಿ ಎಂದ ಆಟೋ ಚಾಲಕ; ಮಹಿಳೆ ಹೇಳಿದ್ದೇನು?

ಬೆಂಗಳೂರಿನ ಆಟೋ ಚಾಲಕನೊಬ್ಬ ಆನ್‍ಲೈನ್‍ ಪಾವತಿ ಮಾತ್ರ ಸ್ವೀಕರಿಸುವುದಾಗಿ ಹೇಳಿದ್ದು, ಇದನ್ನು ಮಹಿಳೆಯೊಬ್ಬರು 'ಪೀಕ್ ಬೆಂಗಳೂರು ಕ್ಷಣ'ವೆಂದು ಎಕ್ಸ್ (ಈ ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿ ಜನರ ಟೀಕೆಗೆ ಕಾರಣವಾಗಿದೆ.

ಹಣದ ಬದಲು ಯುಪಿಐ ಪಾವತಿ ಮಾಡಿ ಎಂದ ಆಟೋ ಚಾಲಕ; ʼಪೀಕ್ ಬೆಂಗಳೂರು ಮೂಮೆಂಟ್ʼ ಎಂದ ಮಹಿಳೆ

ಸಾಂದರ್ಭಿಕ ಚಿತ್ರ

Profile pavithra Jan 25, 2025 3:04 PM

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಜನರು ಹೆಚ್ಚಾಗಿ ಗೂಗಲ್ ಪೇ, ಫೋನ್ ಪೇಗಳಂತಹ ಆನ್‍ಲೈನ್‍ ಪಾವತಿಯನ್ನು ಬಳಸುತ್ತಾರೆ. ಅದಕ್ಕೆ ತಕ್ಕಂತೆ ಬೆಂಗಳೂರಿನ ಆಟೋ ಚಾಲಕನೊಬ್ಬ ಆನ್‍ಲೈನ್ ಪಾವತಿಯನ್ನು ಮಾತ್ರ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಯಾಕೆ ಹೀಗೆ ಎಂದು ಕಾರಣ ಕೇಳಿದರೆ ಇದು ಸುರಕ್ಷಿತವಾಗಿದೆ ಎಂದಿದ್ದಾರೆ. ಈ ಕುರಿತು ಮಹಿಳೆಯೊಬ್ಬಳು ಎಕ್ಸ್ (ಈ ಹಿಂದೆ ಟ್ವಿಟರ್)ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್(Viral News) ಆಗಿದೆ.

ನಿಶಾ ಆನಂದಾನಿ ಎಂಬ ಮಹಿಳೆ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದು, ಆಟೋ ಚಾಲಕ ನಗದು ಬೇಡ ಎಂದು ಹೇಳಿದ್ದನ್ನು ನೋಡಿ ಆಘಾತವಾಯಿತು ಎಂದು ಅವರು ಹೇಳಿದ್ದಾರೆ. ಹಣ ನೀಡಲು ಹೋದಾಗ ಆಟೋ ಚಾಲಕ ಯುಪಿಐನಲ್ಲಿ ಪಾವತಿಸಲು ಹೇಳಿದ್ದಾನೆ ಮತ್ತು ʼʼಇಂದಿನ ಕಾಲದಲ್ಲಿ ಕ್ಯಾಶ್ ಅನ್ನು ಯಾರು ಬಳಸುತ್ತಾರೆ ಮೇಡಂ?” ಎಂದಿದ್ದಾನಂತೆ.



ಈ ಟ್ವೀಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಆದರೆ ಇದು ಒಳ್ಳೆಯ ಕಾರಣಗಳಿಗಾಗಿ ಅಲ್ಲ. ಇದು ಬೆಂಗಳೂರಿನಂತಹ ಪ್ರಮುಖ ನಗರದಲ್ಲಿ ನಡೆಯುವ ಸಾಮಾನ್ಯ ಘಟನೆಯಾಗಿದ್ದು, ಇದನ್ನು ದೊಡ್ಡ ಸುದ್ದಿ ಎಂಬಂತೆ ಬಿಂಬಿಸಿದ್ದಕ್ಕೆ ಅನೇಕರು ಅವರನ್ನು ಟೀಕಿಸಿದ್ದಾರೆ. ಇಂತಹ ಅನುಭವಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅನೇಕರು ಹೇಳಿದ್ದಾರೆ. ಆಟೋ ಚಾಲಕ ಕನ್ನಡದ ಬದಲು ಹಿಂದಿಯಲ್ಲಿ ಮಾತನಾಡಿರುವುದು ಟ್ವೀಟ್‍ನ ಅತ್ಯಂತ ಗಮನಾರ್ಹ ಭಾಗವಾಗಿದೆ ಎಂದು ಇತರರು ಹೇಳಿದ್ದಾರೆ.

ಯುಪಿಐನ ಅಧಿಕೃತ ಹ್ಯಾಂಡಲ್ ಕೂಡ ಈ ಟ್ವೀಟ್‍ಗೆ ಉತ್ತರಿಸಿದ್ದು, "ಆ ಆಟೋ ಚಾಲಕ ಸ್ಪಷ್ಟವಾಗಿ ಡಿಜಿಟಲ್ ಪಾವತಿಗಳ ವೇಗದ ಹಾದಿಯಲ್ಲಿ ನಡೆಯುತ್ತಿದ್ದಾರೆ. ಯುಪಿಐ ಎಲ್ಲವನ್ನೂ ಒಳಗೊಂಡಿರುವಾಗ ಯಾರಿಗೆ ನಗದು ಬೇಕು?” ಎಂದು ಕೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Aghori Baba Chanchal Nath: ಅಘೋರಿ ಬಾಬಾ ಚಂಚಲ್‌ನಾಥ್‌ ರೀಲ್‌ಗಳು ವೈರಲ್‌, ಇವರು ಸಾಧುವೋ, ಸಾಧ್ವಿಯೋ?

"#Noida ಇ-ರಿಕ್ಷಾದ ಚಾಲಕರು ಕೂಡ ಹಾಗೆ ಹೇಳುತ್ತಾರೆ. ಇದರ ಬಗ್ಗೆ ಬರೀ #Bengaluru ಮಾತ್ರ ಹೇಳುತ್ತದೆ ಎಂದು ಭಾವಿಸಬೇಡಿ" ಎಂದು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.ಈ ಪೋಸ್ಟ್ 195.6 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಟ್ವೀಟ್ ಹಲವಾರು ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನವನ್ನು ತ್ವರಿತವಾಗಿ ಸೆಳೆದಿದೆ.