ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಚ್ಛೇದನಕ್ಕಾಗಿ ಬಂದು ಒಂದುಗೂಡಿದ ದಂಪತಿಗಳು

ಲೋಕ ಅದಾಲತ್‌ ನಲ್ಲಿ ಐದು ಮಂದಿ ದಂಪತಿಗಳು ವಿಚ್ಚೇದನಕ್ಕೆ ದೂರು ನೀಡಿದ್ದರು, ಎಲ್ಲರನ್ನೂ ರಾಜೀ ಮಾಡಿಸಿ ದಂಪತಿಗಳನ್ನು ಒಂದುಗೂಡಿಸಿ ಮರು ಜೀವನಕ್ಕೆ ದಾರಿ ಮಾಡಿ ಕೊಡಲಾಯಿತು, ಇಂದಿನ ಲೋಕ ಅದಾಲತ್‌ ನಲ್ಲಿ 258 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು, ಒಟ್ಟು ಒಂದು ಕೋಟಿ 25 ಲಕ್ಷ 28 ಸಾವಿರ 460 ಹಣ ಸಂಗ್ರಹ ಮಾಡಲಾಯಿತು.

ವಿಚ್ಛೇದನಕ್ಕಾಗಿ ಬಂದು ಒಂದುಗೂಡಿದ ದಂಪತಿಗಳು

Profile Ashok Nayak Jul 13, 2025 10:27 PM

ಗೌರಿಬಿದನೂರು: ನಗರದ ಜೆಎಂಎಫ್‌ಸಿ ಕೊರ್ಟುನಲ್ಲಿ ಬೃಹತ್ ಲೋಕದಾಲತ್ ಅಯೋಜನೆ ಮಾಡಲಾಗಿತ್ತು, ಹಿರಿಯ ಶ್ರೇಣಿ ನ್ಯಾಯಧೀಶೆ ಗೀತಾ ಕುಂಬಾರ್ ಮಾತನಾಡಿ, ಕಾನೂನು ಪ್ರಾಧಿಕಾರದ ಅದೇಶದಂತೆ ಇಂದು ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿತ್ತು. ಲೋಕ ಅದಾಲತ್‌ ಕಕ್ಷಿದಾರ ಒಳಿತಿಗಾಗಿ ಅಯೋಜನೆ ಮಾಡಲಾಗಿದೆ. ಇದರ ಉಪಯೋಗ ಮಾಡಿಕೊಳ್ಳಿ ದ್ವೇಷ ಕೋಪ ಬದಿಗೊತ್ತಿ ನಿಮ್ಮ ಪ್ರಕರಣವನ್ನು ರಾಜೀ ಸಂಧಾನದಲ್ಲಿ ಇತ್ಯರ್ಥ ಮಾಡಿಕೊಂಡಲ್ಲಿ ಮಾನವ ಸಂಬಂಧಗಳು ಉಳಿಯುತ್ತದೆ ಎಂದು ತಿಳಿಸಿದರು.

ಲೋಕ ಅದಾಲತ್‌ ನಲ್ಲಿ ಐದು ಮಂದಿ ದಂಪತಿಗಳು ವಿಚ್ಚೇದನಕ್ಕೆ ದೂರು ನೀಡಿದ್ದರು, ಎಲ್ಲರನ್ನೂ ರಾಜೀ ಮಾಡಿಸಿ ದಂಪತಿಗಳನ್ನು ಒಂದುಗೂಡಿಸಿ ಮರು ಜೀವನಕ್ಕೆ ದಾರಿ ಮಾಡಕೊಡಲಾಯಿತು, ಇಂದಿನ ಲೋಕ ಅದಾಲತ್‌ ನಲ್ಲಿ 258 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು, ಒಟ್ಟು ಒಂದು ಕೋಟಿ 25 ಲಕ್ಷ 28 ಸಾವಿರ 460 ಹಣ ಸಂಗ್ರಹ ಮಾಡಲಾಯಿತು.

ಇದರೊಟ್ಟಿಗೆ ಬ್ಯಾಂಕ್ ಪ್ರಕರಣಗಳಾದ ಚೆಕ್ ಕೇಸ್‌ಗಳಲ್ಲಿ 44 ಲಕ್ಷ 97ಸಾವಿರ 542 ರೂಗಳನ್ನು ಸಂಗ್ರಹ ಮಾಡಲಾಯಿತ್ತು ಹಾಗೂ ಇದೇ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರಗಳನ್ನು ನೀಡಿಲಾಯಿತ್ತು.

ಲೋಕ ಅದಾಲತ್‌ ನಲ್ಲಿ ಪ್ರಧಾನ ನ್ಯಾಯಾದೀಶ ಎನ್ ಗಣೇಶ್ ಹೆಚ್ಚುವರಿ ನ್ಯಾಯಧೀಶೆ, ಪುಷ್ಟ ವಕೀಲ ಸಂಘದ ಅಧ್ಯಕ್ಷ ದಿನೇಶ್ ಪ್ರಧಾನ ಕಾರ್ಯದರ್ಶಿ ಬಿ, ಲಿಂಗಪ್ಪ, ಸಂಧಾನಕಾರಾಗಿ ರೂಪ, ಚಲುವರಾಜು ನಾಗಾರಾಜ್, ನರಸಿಂಹಮೂರ್ತಿ, ಅದಿನಾರಾಯಣಗೌಡ, ಎನ್.ರಂಗನಾಥ, ವಿ .ಸಿ , ಗಂಗಯ್ಯ, ಅರ್.ರಾಮಚಂದ್ರ ಎಚ್‌ಎಲ್ ವೆಂಕಟೇಶ್, ವಿಜಯ ಕುಮಾರ್ ಪಾರ್ಶ್ವನಾಥ, ವಿ.ಗೋಪಾಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.