ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು

ಜೆಬಿಎಂ ಒಗಿಹೋರಾ ಕಂಪೆನಿಯ ಹಿರಿಯ ಸಂಪನ್ಮೂಲ ಅಧಿಕಾರಿ ಲೇಪಾಕ್ಷಿ ಅರುಣ್ ಕುಮಾರ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಮಕ್ಕಳು ದಾನಿಗಳ ಸಹಾಯ ಪಡೆದು ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದಾಗ ನಿಮ್ಮ ತಂದೆ ತಾಯಿಗಳಿಗೂ, ಓದಿದ ಶಾಲೆಗೂ, ಶಿಕ್ಷಕರಿಗೂ, ದಾನಿಗಳಿಗೂ ಸಹಾ ಸಂತೋಷ ವಾಗುತ್ತದೆ

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು

Profile Ashok Nayak Jul 13, 2025 10:12 PM

ಗೌರಿಬಿದನೂರು: ಉತ್ತಮ ವಿದ್ಯಾಭ್ಯಾಸದಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವಿಕಸಿತ ಜೀವನವನ್ನು ಸಾಗಿಸಲು ಸಾಧ್ಯ, ಆದುದರಿಂದ ಇಂದಿನ ಮಕ್ಕಳಾದ ನೀವು ಪ್ರಾಥಮಿಕ ಹಂತದಲ್ಲೇ ಸೋಮಾರಿಗಳಾಗದೆ,ದುಷ್ಟರ ಸಹವಾಸ ಮಾಡದೆ ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು ಎಂದು ನಕ್ಕಲಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಶ್ರೀಧರ್ ತಿಳಿಸಿದರು.

ಅವರು ಶನಿವಾರ ಬೆಂಗುಳೂರಿನ ಜೆಬಿಎಂ ಒಗಿಹೋರಾ ಕಂಪೆನಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಲೇಪಾಕ್ಷಿ ಅರುಣ್ ಕುಮಾರ್ ಕುಟುಂಬದವರಿಂದ ತಾಲೂಕಿನ ನಕ್ಕಲಹಳ್ಳಿ ಸರ್ಕಾರೀ ಶಾಲೆಯ ವಿಧ್ಯಾರ್ಥಿಗಳಿಗೆ ನೀಡಿದ ನೋಟು ಪುಸ್ತಕಗಳು ಹಾಗೂ ಪಠ್ಯ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.

ಎಲವೂ ಸರ್ಕಾರವೇ ಮಾಡಬೇಕೆಂದರೆ ಸಾಧ್ಯವಾಗುವುದಿಲ್ಲ,ಸಮಾಜದಲ್ಲಿನ ದಾನಿಗಳು ಸಹಾ ಮಕ್ಕಳ ವ್ಯಾಸಂಗಕ್ಕೆ ಕೈಜೋಡಿಸಿ ತಮ್ಮ ಕೈಲಾದ ನೆರವನ್ನು ನೀಡಬೇಕೆಂದರು.

ಜೆಬಿಎಂ ಒಗಿಹೋರಾ ಕಂಪೆನಿಯ ಹಿರಿಯ ಸಂಪನ್ಮೂಲ ಅಧಿಕಾರಿ ಲೇಪಾಕ್ಷಿ ಅರುಣ್ ಕುಮಾರ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಮಕ್ಕಳು ದಾನಿಗಳ ಸಹಾಯ ಪಡೆದು ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದಾಗ ನಿಮ್ಮ ತಂದೆ ತಾಯಿಗಳಿಗೂ,ಓದಿದ ಶಾಲೆಗೂ, ಶಿಕ್ಷಕರಿಗೂ,ದಾನಿಗಳಿಗೂ ಸಹಾ ಸಂತೋಷ ವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸುರೇಶ್,ಅಶ್ವಿನಿ,ಸಹ ಶಿಕ್ಷಕರಾದ ಬಾಲಪ್ಪ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.