ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ: ಕೆ.ಟಿ.ವೀರಾಂಜನೇಯ
ಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಅದರಲ್ಲೂ ಮಹಿಳೆಯೊಬ್ಬರು ಶಾಲೆಯನ್ನು ಸ್ಥಾಪನೆ ಮಾಡಿ, ಅಚ್ಚುಕಟ್ಟಾಗಿ ನಿಭಾಯಿಸಿ ಕೊಂಡು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಒದಗಿಸಿ,ಅವರ ಸರ್ವತೋ ಮುಖ ಬೆಳವಣಿಗೆಗೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಎದುರಿಸಿ, ಶಾಲೆಯನ್ನು ಸುಮಾರು ೧೨ ವರ್ಷಗಳಿಂದ ಮುನ್ನೆಡೆಸು ತ್ತಿದ್ದು, ಇದಕ್ಕೆ ಮಕ್ಕಳ ಪೋಷಕರೂ ಹೆಚ್ಚಿನ ಸಹಕಾರ ನೀಡಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಎಂದು ಕೆ.ಟಿ.ವೀರಾಂಜನೇಯ ತಿಳಿಸಿದರು.

ಬಾಗೇಪಲ್ಲಿ: ತಾಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ನೇಹಾ ವಿದ್ಯಾ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾ ಯಿತು. ಈ ಕಾರ್ಯಕ್ರಮದಲ್ಲಿ ಬಿಇಓ ವೆಂಕಟೇಶಪ್ಪರವರು ಮಾತನಾಡಿ, ಪೋಷಕರು ಉತ್ತಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಾರೆ. ಆ ಮೂಲಕ ಮಕ್ಕಳ ಭವಿಷ್ಯದ ಬಗ್ಗೆ ನಿರಾಳ ಎಂದುಕೊಳ್ಳಬಾರದು. ನಿರಂತರವಾಗಿ ಮಕ್ಕಳ ಶೈಕ್ಷಣಿಕ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಿರಬೇಕು. ಏಕೆಂದರೆ ಶೇ.40 ಕಾಲ ಮಾತ್ರ ಮಗು ಶಾಲೆಯಲ್ಲಿದ್ದರೆ ಉಳಿದ ಶೇ ೬೦ರಷ್ಟು ಸಮಯ ಮನೆಯಲ್ಲಿರುತ್ತದೆ. ಹಾಗಾಗಿ ಮಗುವಿನ ಕಲಿಕೆಯ ಜವಬ್ದಾರಿಯು ಪೋಷಕರ ಮೇಲೆಯೂ ಇರುತ್ತದೆ ಎಂದರು.
ಇದನ್ನೂ ಓದಿ: Chikkaballapur News: ಗೃಹ ರಕ್ಷಕದಳ ಸಿಬ್ಬಂದಿ ಕೆಲಸವನ್ನು ಮಾಡಬೇಕಾದರೂ ಹಿರಿಯ ಅಧಿಕಾರಿಗೆ ಲಂಚ ನೀಡಬೇಕಾಗಿದೆ
ಇದೇ ವೇಳೆ ನ್ಯಾಷನಲ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೀರಾಂಜನೇ ಯರವರು ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಅದರಲ್ಲೂ ಮಹಿಳೆಯೊಬ್ಬರು ಶಾಲೆಯನ್ನು ಸ್ಥಾಪನೆ ಮಾಡಿ, ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಒದಗಿಸಿ,ಅವರ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಎದುರಿಸಿ, ಶಾಲೆಯನ್ನು ಸುಮಾರು ೧೨ ವರ್ಷಗಳಿಂದ ಮುನ್ನೆಡೆಸು ತ್ತಿದ್ದು, ಇದಕ್ಕೆ ಮಕ್ಕಳ ಪೋಷಕರೂ ಹೆಚ್ಚಿನ ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ವೆಂಕಟ ಶಿವಾರೆಡ್ಡಿಯವರು ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಈ ಶಾಲೆಯ ಸಂಸ್ಥಾಪಕಿ ನಾಗರತ್ನರವರು ಆಗಿನ ಕಾಲದಲ್ಲೆ ಉನ್ನತ ವಿದ್ಯಾಭ್ಯಾಸ ಮಾಡಿ, ಶಾಲೆಯನ್ನು ತೆರೆದು ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾಧಾತರಾಗಿದ್ದಾರೆ. ಅವರು ನನ್ನಿಂದ ಸಾಧ್ಯ ಎಂಬ ನಂಬಿಕೆಯಿAದ ಎದೆಗುಂದದೆ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಅವರ ಸೇವೆ ಮತ್ತಷ್ಟು ಗ್ರಾಮೀಣ ಮಕ್ಕಳಿಗೆ ದೊರೆಯುವಂತಾಗಲಿ ಎಂದು ತಿಳಿಸಿದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಮಂಜುನಾಥರೆಡ್ಡಿ,ಶಿಕ್ಷಣ ಸಮನ್ವಯ ಅಧಿಕಾರಿ ಆರ್.ವೆಂಕಟರಾಮ್, ಇಸಿಓ ರವಿಕುಮಾರ್, ಉಪನ್ಯಾಸಕ ಶಿವಕು ಮಾರ್, ಪತ್ರಕರ್ತ ಬಿ.ಆರ್ ಕೃಷ್ಣ,ನೇಹಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನಾಗರತ್ನಮ್ಮ ಸೇರಿದಂತೆ ಹಲವಾರು ಮಂದಿ ಇದ್ದರು.