ಸೈಬರ್ ಕ್ರೈಂ ಬಗ್ಗೆ ಎಚ್ಚರದಿಂದಿರಲು ಲೀಡ್ ಬ್ಯಾಂಕ್ ಮ್ಯಾನೆಜರ್ ನಾಗರಾಜ್ ಮನವಿ
ನೀವು ದುಡಿದ ಹಣವನ್ನು ಸುರಕ್ಷತೆಯಿಂದ ಬ್ಯಾಂಕುಗಳಲ್ಲಿ ಇಟ್ಟುಕೊಳ್ಳಿ, ಖಾಸಗಿ ಕಂಪನಿ ಗಳಿಂದ ಅಥವಾ ಅನಧಿಕೃತ ಸಂಸ್ಥೆಗಳಿಂದ ಸಾಲ ಪಡೆದುಕೊಂಡು ಜೀವನ ಪೂರ್ತಿ ಬಡ್ಡಿ ಕಟ್ಟುವ ಜಾಲಕ್ಕೆ ಸಿಲುಕಿಕೊಳ್ಳಬೇಡಿ. ತಾವು ಸಂಪಾದನೆ ಮಾಡಿದ ಹಣ ದಲ್ಲಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡಿ. ಉಳಿತಾಯದ ಕಡೆ ಗಮನ ಹರಿಸಿ ಸಾಲ ಸೌಲಭ್ಯ ಹಾಗೂ ಸಾಮಾಜಿಕ ವಿಮೆಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ನೇರವಾಗಿ ಲೀಡ್ ಬ್ಯಾಂಕ್ ನ ವ್ಯವಸ್ಥಾಪಕರು, ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ಕರೆ ನೀಡಿದರು

ಮೊಬೈಲ್ ಮೂಲಕ ಹಣಕಾಸು ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಲೀಡ್ ಬ್ಯಾಂಕ್ ಮೇನೇಜರ್ ನಾಗರಾಜ್ ತಿಳಿಸಿದರು.

ಚಿಕ್ಕಬಳ್ಳಾಪುರ : ಗ್ರಾಹಕರೇ ಡಿಜಿಟಲ್ ಪೇಮೆಂಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮಾಡುವಾಗ ಎಚ್ಚರ,ನೀವು ಕಷ್ಟ ಪಟ್ಟು ದುಡಿದು ಕೂಡಿಸಿದ ಅಥವಾ ಉಳಿತಾಯ ಮಾಡಿದ ಹಣವನ್ನು ಕೆಲವು ಸೈಬರ್ ಕಳ್ಳರು ನಿಮ್ಮ ಡೆಬಿಡ್ ಕಾರ್ಡ್ ಸಮಯ ಮುಗಿದಿದೆ. ಒಟಿಪಿ ಹೇಳಿ ಹೊಸ ಕಾರ್ಡು ಕಳಿಸ್ತೇವೆ ಎಂತಲೋ ವಂಚಿಸಿ ಮೋಸ ಮಾಡುತ್ತಾರೆ ಎಂದು ಲೀಡ್ ಬ್ಯಾಂಕ್ ಮೇನೇಜರ್ ನಾಗರಾಜ್ ತಿಳಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇ ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಲೀಡ್ ಬ್ಯಾಂಕ್ ಚಿಕ್ಕಬಳ್ಳಾಪುರ ಹಾಗೂ ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ಹಣಕಾಸು ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಇದನ್ನೂ ಓದಿ: Children and Pets: ಮನೆಯಲ್ಲಿರುವ ಶ್ವಾನದಿಂದಾಗಿ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ?
ಕೆಲವು ಸೈಬರ್ ಕಳ್ಳರು ನಿಮ್ಮ ಡೆಬಿಡ್ ಕಾರ್ಡ್ ಸಮಯ ಮುಗಿದಿದೆ. ಒಟಿಪಿ ಹೇಳಿ ಹೊಸ ಕಾರ್ಡು ಕಳಿಸ್ತೇವೆ ಎನ್ನುತ್ತಾ ಮೊದಲು ಒಂದು ನೂರು ನಿಮ್ಮ ಖಾತೆಗೆ ಕಳಿಸಿ ನಿಮ್ಮ ಮೊಬೈಲ್‌ಗೆ ಮೆಸೆಜ್ ಬರುವಂತೆ ಮಾಡುತ್ತಾರೆ. ನಂತರ ಕಾಲ್ ಮಾಡಿ ನಿಮಗೆ ನೂರು ರೂ ಹಣ ಬಂದಿದೆ. ನಿಮಗೆ ಕಳಿಸಿದ ಒಟಿಪಿ ಹೇಳಿ ಹತ್ತು ಸಾವಿರ ಬರುತ್ತೆ ಎಂದು ಆಮಿಷ ಗಳೊಡ್ಡಿ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಸೆಳೆದುಕೊಂಡು ಮೋಸ ಮಾಡುತ್ತಾರೆ. ಇಂತಹವರ ಬಗ್ಗೆ ಎಚ್ವರಿಕೆಯಿಂದಿರಬೇಕು. ಯಾವುದೇ ರೀತಿಯ ಒಟಿಪಿ ಹಾಗೂ ಬ್ಯಾಂಕು ಗಳು ನೀಡಿರುವ ವಿವಿಧ ರೀತಿಯ ಕಾರ್ಡುಗಳ ಗೌಪ್ಯ ಮಾಹಿತಿಯ ವಿವರವನ್ನು ಯಾವುದೇ ಅನ್ಯ ವ್ಯಕ್ತಿಗಳಿಗೆ ನೀಡಬಾರದು ಎಂದು ಮನವಿ ಮಾಡಿದರು.
ನೀವು ದುಡಿದ ಹಣವನ್ನು ಸುರಕ್ಷತೆಯಿಂದ ಬ್ಯಾಂಕುಗಳಲ್ಲಿ ಇಟ್ಟುಕೊಳ್ಳಿ, ಖಾಸಗಿ ಕಂಪನಿ ಗಳಿಂದ ಅಥವಾ ಅನಧಿಕೃತ ಸಂಸ್ಥೆಗಳಿಂದ ಸಾಲ ಪಡೆದುಕೊಂಡು ಜೀವನ ಪೂರ್ತಿ ಬಡ್ಡಿ ಕಟ್ಟುವ ಜಾಲಕ್ಕೆ ಸಿಲುಕಿಕೊಳ್ಳಬೇಡಿ. ತಾವು ಸಂಪಾದನೆ ಮಾಡಿದ ಹಣ ದಲ್ಲಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡಿ. ಉಳಿತಾಯದ ಕಡೆ ಗಮನ ಹರಿಸಿ ಸಾಲ ಸೌಲಭ್ಯ ಹಾಗೂ ಸಾಮಾಜಿಕ ವಿಮೆಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ನೇರವಾಗಿ ಲೀಡ್ ಬ್ಯಾಂಕ್ ನ ವ್ಯವಸ್ಥಾಪಕರು, ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಕೆನರಾ ಬ್ಯಾಂಕ್ ಎಫ್ ಎಲ್ ಸಿ ಸಲಹೆ ಗಾರ್ತಿ ಎ ಎಂ ಕವಿತ ಮಾತನಾಡಿ ಕೇಂದ್ರ ಸರ್ಕಾರ ಜನರಿಗೆ ಜಾರಿ ಮಾಡಿರುವ ಮೂರು ಸಾಮಾಜಿಕ ವಿಮೆಗಳು ಮತ್ತು ಖಾತೆಗಳಲ್ಲಿ ಉಂಟಾ ಗುವ ಸಮಸ್ಯಗಳ ಬಗ್ಗೆ ತಿಳಿಸಿಕೊಟ್ಟು ಸೈಬರ್ ಮೂಲಕ ವಂಚಿಸುವ ಕಳ್ಳರಿಂದ ದೂರವಿರಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಪ್ಪ, ಕೊತ್ತನೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಶಿವಶಂಕರ್, ನಿವೃತ್ತ ಮ್ಯಾನೇಜರ್ ನಾರಾಯಣಪ್ಪ, ಯುವ ಮುಖಂಡ ಮುರುಳಿ, ಡೈರಿ ನಿರ್ದೇಶಕ ಶ್ರೀನಿವಾಸ್, ಸಾರ್ವಜನಿಕರು ಹಾಜರಿದ್ದರು.