#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಹೃದಯ ನಾಳಗಳ ಬ್ಯಾಂಕ್ ಸ್ಥಾಪನೆಯ ಗುರಿಯಿದೆ : ಶಸ್ತ್ರಚಿಕಿತ್ಸಕ ಡಾ.ಹಿರೇಮಠ

ಕಳೆದ ಒಂದು ವರ್ಷದ ಅವಧಿಯಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಉಚಿತವಾಗಿ 300 ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಈ ಪೈಕಿ 160 ಮಕ್ಕಳ ಹೃದಯ ಸಂಬಂಧಿತ ಶಸ್ತ್ರ ಚಿಕಿತ್ಸೆ ನಡೆಸ ಲಾಗಿದೆ ಎಂದು ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಹಿರೇಮಠ ತಿಳಿಸಿದರು

ಮುದ್ದೇನಹಳ್ಳಿ ಸತ್ಯಸಾಯಿ  ಆಸ್ಪತ್ರೆಯಲ್ಲಿ ದೇಶದಲ್ಲಿಯೇ ಮೊದಲ ಹಾಟ್ ವಾಲ್ವ್ ಬ್ಯಾಂಕ್

Profile Ashok Nayak Feb 1, 2025 3:05 PM

ಚಿಕ್ಕಬಳ್ಳಾಪುರ: ಮಕ್ಕಳು ಮತ್ತು ವಯಸ್ಕರ ಹೃದಯ ಸಂಬಂಧಿ ಖಾಯಿಲೆಯನ್ನು ಗುಣಪಡಿ ಸಲು ಕೃತಕ ಹೃದಯ ನಾಳಗಳನ್ನು ಅಳವಡಿಸುವ ಬದಲು ಮನುಷ್ಯರ ಹೃದಯದ ನಾಳಗಳನ್ನೇ ಬಳಸಿ ಶಸ್ತ್ರ ಚಿಕಿತ್ಸೆ ಮಾಡುವ ಹಾಟ್ ವಾಲ್ವ್ ಬ್ಯಾಂಕ್ ಸ್ಥಾಪನೆಯ ಗುರಿಯಿದೆ ಎಂದು ಸತ್ಯ ಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಹಿರೇಮಠ ತಿಳಿಸಿದರು.

ತಾಲೂಕು ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಸರಳ ಮೇಮೋರಿಯಲ್ ಆಸ್ಪತ್ರೆಯಲ್ಲಿ ಶುಕ್ರ ವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಹೃದಯ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು ನಿರಂತರವಾಗಿ ನಡೆಯುತ್ತಿದ್ದು, ದೇಶ ವಿದೇಶಗಳ ನುರಿತ ವೈದ್ಯರ ತಂಡದಿಂದ ಇದುವರೆಗೂ 4 ವಿಶೇಷ ಶಿಬಿರಗಳು ನಡೆದಿದ್ದು, ಪ್ರಸ್ತುತ 5ನೇ ಶಿಬಿರದಲ್ಲಿ 45ಕ್ಕೂ ಹೆಚ್ಚು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Chikkaballapur News: ಬಾಲ್ಯಕ್ಕೆ ಜಾರಿದ ಶಿಷ್ಯರು, ಭಾವುಕರಾದ ಶಿಕ್ಷಕರು

ಕಳೆದ ಒಂದು ವರ್ಷದ ಅವಧಿಯಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಉಚಿತವಾಗಿ 300 ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಈ ಪೈಕಿ 160 ಮಕ್ಕಳ ಹೃದಯ ಸಂಬಂಧಿತ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಹಿರೇಮಠ ತಿಳಿಸಿದರು.

ಈ ಸೇವಾ ಕಾರ್ಯಕ್ಕೆ ವಿವಿಧ ದೇಶಗಳ ವೈದ್ಯರು ಕೈಜೋಡಿಸಿದ್ದು, ಒಂದು ಕೆ.ಜಿ, ಎರಡು ಕೆ.ಜಿ ಹೀಗೆ ತೂಕವುಳ್ಳ ಮಕ್ಕಳಿಗೂ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದೇವೆ. ಆಫ್ರಿಕಾ ತಾಯಿಯೊಬ್ಬರು ಅವರ ಮಗುವಿಗೆ ಇಲ್ಲಿಗೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಮಧುಸೂದನಸಾಯಿ ಅವರ 45ನೇ ಹುಟ್ಟುಹಬ್ಬದಂದು ಬರೊಬ್ಬರಿ 45 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವುದಾಗಿ ತಿಳಿಸಿದರು.

ಹಾರ್ಟ್ ವಾಲ್ವ್ ಬ್ಯಾಂಕ್ ಸ್ಥಾಪನೆ
ಮುದ್ದೇನಹಳ್ಳಿ ಸತ್ಯಸಾಯಿ  ಆಸ್ಪತ್ರೆಯಲ್ಲಿ ದೇಶದಲ್ಲಿಯೇ ಮೊದಲ ಹಾಟ್ ವಾಲ್ವ್  ಬ್ಯಾಂಕ್ ತೆರೆಯಲಾಗುತ್ತಿದೆ. ವಿಶ್ವದಲ್ಲಿ ಇಂತಹ ಹಾರ್ಟ ವಾಲ್ವ್ ಬ್ಯಾಂಕ್‌ಗಳು ಕೇವಲ 7ಮಾತ್ರಯಿವೆ. ಇದು ಸಾಕಾರವಾದಲ್ಲಿ ಇಡೀ ದೇಶಕ್ಕೆ ಮಾದರಿಯಾಗಲಿದೆ. ಇದರಿಂದ ಕೃತಕ ಹಾರ್ಟ್ವಾಲ್ ನೆಚ್ಚಿಕೊಳ್ಳು ವುದು ತಪ್ಪುವ ಜೊತೆಗೆ ಅನೇಕ ಮಂದಿಯ ಪ್ರಾಣಗಳನ್ನು ಉಳಿಸಬಹುದಾಗಿದೆ ಎಂದು ಹೇಳಿದರು.
ಶಿಕ್ಷಣ ಆರೋಗ್ಯ ಮಾರಾಟವಲ್ಲ
ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರಘು ಪತಿ, ಶಿಕ್ಷಣ ಮತ್ತು ಆರೋಗ್ಯ ಮಾರಾಟದ ವಸ್ತು ಆಗಬಾರದು ಎಂದು ಸತ್ಯಸಾಯಿ ಬಾಬಾ ಹೇಳು ತ್ತಿದ್ದರು. ಆ ಪ್ರಕಾರವೇ ಮಧುಸೂದನ ಸಾಯಿ ಅವರು ನಡೆದುಕೊಂಡು ಬರುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕ್ಷೇತ್ರದಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸದ್ಬಳಕೆ ಆಗಲಿ: ಸಂಸ್ಥೆಯಿAದ ಐದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನಡೆಯುತ್ತಿವೆ. 33 ಸಾವಿರ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.ಈವೇಳೆ ಮಕ್ಕಳ ಪೋಷಕರ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೂಡ ಉಚಿತವಾಗಿ ನೋಡಿಕೊಳ್ಳಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಮೆದುಳು ಹಾಗೂ ಬೆನ್ನಿಗೆ ಸಂಬAಧಿಸಿದ ಶಸ್ತçಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಾ ಂಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುತ್ತಿದೆ. ರೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಪ್ರತಿ ತಿಂಗಳ ಮೂರನೇ ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಅಲ್ಲಿನ ಗರ್ಭಿಣಿ ಯರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಮತ್ತು ಔಷಧ ನೀಡಲಾಗುತ್ತಿತ್ತು. ಕೋವಿಡ್ ಸಮಯದಲ್ಲಿ ಈ ಕಾರ್ಯಕ್ರಮ ಸ್ಥಗಿತವಾಯಿತು. ಮತ್ತೆ ಈ ಕಾರ್ಯಕ್ರಮವನ್ನು ಆರಂಭಿಸಲಾಗುವುದು, ಅಲ್ಲದೆ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಸತ್ಯಸಾಯಿ ಆಸ್ಪತ್ರೆಯು ಬಡವರಿಗೆ ವರದಾನವಾಗಿದೆ. ಹಲವರ ಜೀವವನ್ನು ಉಳಿಸಿದೆ. ಬುದ್ಧಿ ವಂತರು, ಕೌಶಲ ಹೊಂದಿರುವವರು ವೈದ್ಯರಾಗುತ್ತಾರೆ. ಆದರೆ ವೈದ್ಯರಿಗೆ ಇವುಗಳ ಜೊತೆಗೆ ಸೇವಾ ಭಾವನೆಯೂ ಮುಖ್ಯ. ಹೀಗೆ ಈ ಮೂರು ಅಂಶಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಲ್ಲಿ ಕಾಣಬೇಕು ಎನ್ನುವ ಉದ್ದೇಶದಿಂದ ಉಚಿತ ಕಾಲೇಜು ಆರಂಭಿಸಿದ್ದೇವೆ ಎಂದು ಹೇಳಿದರು.

ಬ್ರಿಟನ್‌ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ಸಂಸ್ಥಾಪಕ ಡಾ.ಸಂಜೀವ್ ನಿಚ್ಚಾನಿ ಮಾತ ನಾಡಿ, 15 ವರ್ಷಗಳಿಂದ 23 ದೇಶಗಳಿಗೆ ಸಂಚರಿಸಿದ್ದೇನೆ. ಈವರೆಗೆ 8 ಸಾವಿರ ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆಯನ್ನು ಹೀಲಿಂಗ್ ಲಿಟಲ್ ಹಾರ್ಟ್ಸ್  ಸಂಸ್ಥೆಯು ಮಾಡಿದೆ. ಈಗ ಸತ್ಯಸಾಯಿ ಆಸ್ಪತ್ರೆ ಯೊಂದಿಗೆ ಕೈಗೋಡಿಸಿ ಇದುವರೆಗೂ ೫ ಶಿಬಿರಗಳ ಮೂಲಕ ನೂರಾರು ಸರ್ಜರಿಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ. ವಿವಿಧ ದೇಶಗಳ ವೈದ್ಯರು ತಮ್ಮ ರಜೆಯ ದಿನಗಳಲ್ಲಿ ಇಲ್ಲಿಗೆ ಬಂದು ವೈದ್ಯಕೀಯ ಸೇವೆ ನೀಡುತ್ತಿರುವುದು ಮಾದರಿಯಾಗಿದೆ.ಸೇವಾಮನೋಭಾವವೇ ಇಲ್ಲಿನ ಉಸಿರಾ ಗಿದೆ. ಈವರೆಗೆ 33 ಸಾವಿರ ಹೃದಯ ಚಿಕಿತ್ಸೆ ಇಲ್ಲಿ ನಡೆದಿರುವುದು ಸಾಧನೆ ವಿಶ್ವದಾಖಲೆಯೇ ಸರಿ ಎಂದು ಹೇಳಿದರು.

ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಗುಣಮಟ್ಟ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ.ಸತೀಶ್‌ಬಾಬು, ಟ್ರಸ್ಟಿ, ಬ್ರಿಟನ್‌ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ನಿರ್ದೇಶಕಿ ಲೆಸ್ಲಿ, ಜೆಕ್ ಗಣರಾಜ್ಯದ ಮಕ್ಕಳ ತಜ್ಞ ಡಾ.ರೋಮನ್, ಡಾ.ಪೀಟರ್, ಲಾಟ್ವಿಯಾ ದೇಶದ ಅರವಳಿಕೆ ತಜ್ಞ ಡಾ.ಇವಾರಿಸ್, ಬ್ರಿಟನ್‌ನ ಇವಾ ಜರೀನಾ, ಸ್ಲೊವೇನಿಯಾದ ಡಾ.ಮಿಹಾ, ಡಾ.ಬಿ.ಆರ್.ಜಗನ್ನಾಥ್, ಡಾ.ಅನ್ನಿ ಅರವಿಂದ್ ಇದ್ದರು.