#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

KN Rajanna: ರಾಜಕೀಯ ಮರೆತು ಬೋಟ್‌ನಲ್ಲಿ ಜಾಲಿ ರೈಡ್‌ ಹೊರಟ ಸಚಿವ ಕೆ.ಎನ್‌.ರಾಜಣ್ಣ

ರಾಜಕೀಯ ಮರೆತು ಸಹಕಾರ ಸಚಿವ ಕೆ.ಎನ್.ರಾಜಣ್ಣಅವರು ಗುರುವಾರ (ಜ. 30) ಕೆಲಹೊತ್ತು ರಿಲ್ಯಾಕ್ಸ್‌ ಮೂಡ್‌ನಲ್ಲಿ ಬೋಟಿಂಗ್‌ ನಡೆಸಿದ್ದು ಕಂಡುಬಂತು. ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿರುವ ಚೋಳೆನಹಳ್ಳಿ ಕೆರೆಯಲ್ಲಿ ಅವರು ಬೋಟಿಂಗ್‌ಗೆ ಚಾಲನೆ ನೀಡಿದರು. ಬಳಿಕ ಬೋಟ್‌ನಲ್ಲಿ ಕೆರೆಗೆ ಒಂದು ಸುತ್ತು ಬಂದು ಗಮನ ಸೆಳೆದರು.

ರಾಜಕೀಯ ಮರೆತು ಬೋಟ್‌ನಲ್ಲಿ ಜಾಲಿ ರೈಡ್‌ ಹೊರಟ ಸಚಿವ ಕೆ.ಎನ್‌.ರಾಜಣ್ಣ

ಬೋಟಿಂಗ್‌ ನಡೆಸಿದ ಸಚಿವ ಕೆ.ಎನ್‌.ರಾಜಣ್ಣ.

Profile Ramesh B Jan 30, 2025 3:53 PM

ತುಮಕೂರು: ರಾಜಕೀಯ ಮರೆತು ಸಹಕಾರ ಸಚಿವ ಕೆ.ಎನ್.ರಾಜಣ್ಣ(KN Rajanna) ಅವರು ಗುರುವಾರ (ಜ. 30) ಕೆಲಹೊತ್ತು ರಿಲ್ಯಾಕ್ಸ್‌ ಮೂಡ್‌ನಲ್ಲಿ ಬೋಟಿಂಗ್‌ ನಡೆಸಿದ್ದು ಕಂಡುಬಂತು. ತುಮಕೂರು ಜಿಲ್ಲೆಯ ಮಧುಗಿರಿ (Madhugiri) ಏಕಶಿಲಾ ಬೆಟ್ಟದ ತಪ್ಪಲಿನಲ್ಲಿರುವ ಚೋಳೆನಹಳ್ಳಿ (Cholenahalli) ಕೆರೆಯಲ್ಲಿ ಅವರು ಬೋಟಿಂಗ್‌ಗೆ ಚಾಲನೆ ನೀಡಿ ಕೆಲಹೊತ್ತು ಬೋಟಿಂಗ್‌ ನಡೆಸಿ ಗಮನ ಸೆಳೆದರು.

ತಮ್ಮ ಬೆಂಬಲಿಗರ ಜತೆ ಬೋಟಿಂಗ್‌ನಲ್ಲಿ ರಾಜಣ್ಣ ಅವರು ಜಾಲಿ ರೈಡ್ ನಡೆಸಿದರು. ಡಿ. 24ರಂದು ಇದೇ ಚೋಳೆನಹಳ್ಳಿ ಕೆರೆಯಲ್ಲಿ 50 ವರ್ಷದ ಬಳಿಕ ಮಧುಗಿರಿ ದಂಡಿಮಾರಮ್ಮನ ತೆಪ್ಪೋತ್ಸವ ನಡೆಸಲಾಗಿತ್ತು. ಇದೀಗ ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಇಲಾಖೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿ ಮಾಡುವುದಾಗಿ ರಾಜಣ್ಣ‌ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Government Scheme: ಕಾರ್ಮಿಕರಿಗೆ ಬಂಪರ್‌ ಲಾಟರಿ; 3,000 ರೂ ಪಿಂಚಣಿ, 2 ಲಕ್ಷ ರೂ ಜೀವ ವಿಮೆ!

ಶಾಸಕರ ಅಭಿಪ್ರಾಯ ಪಡೆದೇ ಮುಖ್ಯಮಂತ್ರಿ ಆಯ್ಕೆ

ಬೆಂಗಳೂರು: ʼʼಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಶಾಸಕಾಂಗ ಪಕ್ಷದ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಹೈಕಮಾಂಡ್‌ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆʼʼ ಎಂದು ರಾಜಣ್ಣ ಮಂಗಳವಾರ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲು ಶಾಸಕರ ಬೆಂಬಲ ಇರಲೇಬೇಕು ಎಂದೇನೂ ಇಲ್ಲ. ಹೈಕಮಾಂಡ್‌ ಹೇಳಿದರೆ ಸಾಕು ಎಂದು ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌ ನೀಡಿದ್ದ ಹೇಳಿಕೆಗೆ ರಾಜಣ್ಣ ಈ ಈ ರೀತಿ ಪ್ರತಿಕ್ರಿಯಿಸಿದ್ದರು.

ʼʼಎಲ್ಲ ಶಾಸಕರದ್ದು ಒಂದೇ ಅಭಿಪ್ರಾಯ ಇರುವುದಿಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಇರುವವರು ಒಬ್ಬರಲ್ಲ, ಹಲವು ಮಂದಿ ಇದ್ದಾರೆ. ಹೈಕಮಾಂಡ್‌ ಮೊದಲು ಎಲ್ಲ ನಾಯಕರ ಅಭಿಪ್ರಾಯ ಕೇಳುತ್ತದೆ. ಹೈಕಮಾಂಡ್‌ ನಿರ್ಣಯಕ್ಕೆ ಎಲ್ಲರೂ ಬದ್ದರಾಗಿರುತ್ತಾರೆʼʼ ಎಂದು ಸ್ಪಷ್ಟಪಡಿಸಿದ್ದಾರೆ.