Maharashtra coast: ರಾಯಗಢದ ಕರಾವಳಿಯಲ್ಲಿ ಅನುಮಾನಾಸ್ಪದ ಬೋಟ್ ಪತ್ತೆ; ಹೆಚ್ಚಿದ ಭದ್ರತೆ
ಮಹಾರಾಷ್ಟ್ರದ ರಾಯಗಢ ಕರಾವಳಿಯಲ್ಲಿ ಸೋಮವಾರ ಅನುಮಾನಾಸ್ಪದ ದೋಣಿಯೊಂದು ರೇವ್ಡಾಂಡ ಕರಾವಳಿಯ ಬಳಿ ಪತ್ತೆಯಾದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಾನುವಾರ ರಾತ್ರಿ ರೇವದಂಡ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲು ದೂರದಲ್ಲಿ ಅಪರಿಚಿತ ದೋಣಿಯನ್ನು ಭದ್ರತಾ ಸಿಬ್ಬಂದಿ ನೋಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮುಂಬೈ: ಮಹಾರಾಷ್ಟ್ರದ (Maharashtra coast) ರಾಯಗಢ ಕರಾವಳಿಯಲ್ಲಿ ಸೋಮವಾರ ಅನುಮಾನಾಸ್ಪದ ದೋಣಿಯೊಂದು ರೇವ್ಡಾಂಡ ಕರಾವಳಿಯ ಬಳಿ ಪತ್ತೆಯಾದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಾನುವಾರ ರಾತ್ರಿ ರೇವದಂಡ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲು ದೂರದಲ್ಲಿ ಅಪರಿಚಿತ ದೋಣಿಯನ್ನು ಭದ್ರತಾ ಸಿಬ್ಬಂದಿ ನೋಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಆ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಾರತೀಯ ನೌಕಾಪಡೆಯ ರಾಡಾರ್‌ನಿಂದ ಪತ್ತೆಯಾದ ದೋಣಿ "ಬಹುಶಃ ಪಾಕಿಸ್ತಾನದ ಮೀನುಗಾರಿಕಾ ಹಡಗು" ಆಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದು ರೆವ್‌ಡಾಂಡಾದ ಕೊರ್ಲೈ ಕರಾವಳಿಯಿಂದ ಸುಮಾರು ಎರಡು ನಾಟಿಕಲ್ ಮೈಲು ದೂರದಲ್ಲಿದೆ.
ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ, ಕ್ಷಿಪ್ರ ಪ್ರತಿಕ್ರಿಯೆ ತಂಡ ಭಾನುವಾರ ರಾತ್ರಿಯೇ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿವೆ. ಪೊಲೀಸರು ಮತ್ತು ಕಡಲ ಭದ್ರತಾ ಅಧಿಕಾರಿಗಳು ದೋಣಿಗಾಗಿ ಹುಡುಕಾಟ ನಡೆಸಿದ್ದಾರೆ. ರಾಯಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಚಲ್ ದಲಾಲ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕಾಗಮಿಸಿದ್ದರು. ರಾತ್ರಿ ಭಾರಿ ಮಳೆ ಮತ್ತು ಬಲವಾದ ಗಾಳಿ ಬೀಸಿದ್ದರಿಂದ ಅವರು ಬೋಟ್ ಇರುವ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರ್ಲೈ ಗ್ರಾಮದ ಮಾಜಿ ಸರಪಂಚ ಪ್ರಶಾಂತ್ ಮಿಸಾಲ್ ಮಾತನಾಡಿ, ರಾತ್ರಿ 8:30 ರ ಸುಮಾರಿಗೆ ಪೊಲೀಸ್ ಅಧಿಕಾರಿಗಳಿಂದ ಕರೆ ಬಂದಿದ್ದು, ಪಾಕಿಸ್ತಾನಿ ದೋಣಿ ಸಮುದ್ರದಲ್ಲಿ ಕಂಡು ಬಂದಿರುವುದಾಗಿ ತಿಳಿಸಿದರು. ಕಡಲ ಕಿನಾರೆ ಬಳಿ ಗ್ರಾಮಸ್ಥರು ಹೋಗುವ ಮೊದಲೇ ಪೊಲೀಸರು ಅಲ್ಲಿಗೆ ತಲುಪಿದ್ದರು. ನಾವು ಬೆಳಗಿನ ಜಾವದವರೆಗೆ ಅಲ್ಲೇ ಇದ್ದೆವು. ಆದರೆ, ಬೆಳಗಿನ ಜಾವ 4 ಗಂಟೆಯ ನಂತರ ದೋಣಿ ಕಣ್ಮರೆಯಾಯಿತು. ಆದ್ದರಿಂದ, ಇದು ಅನುಮಾನಾಸ್ಪದವಾಗಿ ಕಾಣುತ್ತಿದೆ. ಆದ್ದರಿಂದ, ಕೊರ್ಲೈ ಜನರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bilawal Bhutto: ಭಾರತದ ಮುಸ್ಲಿಂರ ಕುರಿತು ಭುಟ್ಟೋ ವಿವಾದ; ವಿಶ್ವಸಂಸ್ಥೆಯಲ್ಲಿ ಪಾಕ್ ಸಂಸದನಿಗೆ ಚಳಿಬಿಡಿಸಿದ ಪತ್ರಕರ್ತ
ಶಂಕಾಸ್ಪದ ದೋಣಿ ಕೊರ್ಲೈ ಲೈಟ್‌ಹೌಸ್‌ನಿಂದ ಸುಮಾರು ಎರಡು ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಜಿಲ್ಲಾಡಳಿತ ಯಾವುದೇ ಮಾಹಿತಿ ಮತ್ತು ಪ್ರತಿಕ್ರಿಯೆ ನೀಡಿಲ್ಲ.