ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mandya News: ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಗೆ ಬಿದ್ದು ಕೊಚ್ಚಿ ಆಟೋ ಚಾಲಕ!

Mandya News: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸರ್ವಧರ್ಮ ಆಶ್ರಮದ ಬಳಿ ಘಟನೆ ನಡೆದಿದೆ. ಆಟೋ ಚಾಲಕ ಫೋಟೋ ತೆಗೆಸಿಕೊಳ್ಳಲು ಹೋದಾಗ ಆಯತಪ್ಪಿ ಕಾವೇರಿ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದ ಕಾರಣ ಕೊಚ್ಚಿ ಹೋಗಿದ್ದಾರೆ. ಅವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.

ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಗೆ ಬಿದ್ದು ಕೊಚ್ಚಿ ಆಟೋ ಚಾಲಕ!

Profile Prabhakara R Jul 7, 2025 1:49 PM

ಮಂಡ್ಯ: ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಕೊಚ್ಚಿ ಹೋದ ಘಟನೆ (Mandya News) ಶ್ರೀರಂಗಪಟ್ಟಣ ತಾಲೂಕಿನ ಸರ್ವಧರ್ಮ ಆಶ್ರಮದ ಬಳಿ ನಡೆದಿದೆ. ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ( 36) ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ. ಭಾನುವಾರ ಸಂಜೆ ಮಹೇಶ್‌ ಸ್ನೇಹಿತರೊಂದಿಗೆ ಕೆಆರ್‌ಎಸ್ ಭಾಗಕ್ಕೆ ಪಿಕ್ನಿಕ್‌ ಬಂದಿದ್ದರು.

ಸರ್ವಧರ್ಮ ಆಶ್ರಮದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದಾಗ ಆಯತಪ್ಪಿ ಕಾವೇರಿ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದ ಕಾರಣ ಮಹೇಶ್‌ ಕೊಚ್ಚಿ ಹೋಗಿದ್ದಾರೆ. ಮಹೇಶ್‌ ಪತ್ತೆಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದೆ. ಕೆಆರ್‌ಎಸ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Belagavi News: ಅಥಣಿಯಲ್ಲಿ ಭೀಕರ ಅಪಘಾತ; ಕಾರು-ಬಸ್‌ ಡಿಕ್ಕಿಯಾಗಿ ಮೂವರ ದುರ್ಮರಣ

ಮ್ಯಾನೇಜರ್‌ನಿಂದ ಕಿರುಕುಳ, ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಆತ್ಮಹತ್ಯೆ ಯತ್ನ

ಹಾಸನ : ಹಾಸನದಲ್ಲಿ (Hassan News)ಕೆಎಸ್ಆರ್ಟಿಸಿ (KSRTC) ಡಿಪೋ ಮ್ಯಾನೇಜರ್‌ನಿಂದ ಕಿರುಕುಳ (Harassment) ಆರೋಪದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಕಂ ಕಂಡಕ್ಟರ್ ಹರೀಶ್ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಚಾಲಕರ ವಿಶ್ರಾಂತಿ ಕೊಠಡಿಯಲ್ಲಿ ವಿಷ ಕುಡಿದು ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಡಿಪೋ ಮ್ಯಾನೇಜರ್ ಶಾಜಿಯಾ ಬಾನು ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಕೆಲಸದ ವಿಷಯವಾಗಿ ಹರೀಶ್ ಮತ್ತು ಶಾಜಿಯ ಬಾನು ನಡುವೆ ವಾಗ್ವಾದ ನಡೆದಿದೆ. ನಂತರ ವಿಶ್ರಾಂತಿ ಕೊಠಡಿಗೆ ಹೋಗಿ ಹರೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಹರೀಶ್‌ಗೆ ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಎಚ್. ಕೆ ಸುರೇಶ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.