ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Infant murder case: ನೀರಿನ ಹಂಡೆಯಲ್ಲಿ ಮುಳುಗಿಸಿ ಮಗುವನ್ನು ಕೊಂದ ನಿಷ್ಕರುಣಿ ತಾಯಿ

Infant Murder: ಪವನ್ ಹಾಗೂ ರಾಧೆ ಎಂಬ ದಂಪತಿಗೆ ಈ ಗಂಡು ಮಗು ಜನಿಸಿತ್ತು. ಗಂಡ ಮನೆ ನಿಭಾಯಿಸದೆ ಕುಡಿತದ ಚಟಕ್ಕೆ ಒಳಗಾಗಿದ್ದ. ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ಹತಾಶಗೊಂಡ ತಾಯಿ ತಡರಾತ್ರಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.

ನೀರಿನ ಹಂಡೆಯಲ್ಲಿ ಮುಳುಗಿಸಿ ಮಗುವನ್ನು ಕೊಂದ ನಿಷ್ಕರುಣಿ ತಾಯಿ

ಹರೀಶ್‌ ಕೇರ ಹರೀಶ್‌ ಕೇರ Jul 7, 2025 2:04 PM

ಬೆಂಗಳೂರು : ರಾಜ್ಯದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ (Nelamangala) 45 ದಿನದ ಮಗುವನ್ನು (infant murder case) ನಿಷ್ಕರುಣಿ ತಾಯಿಯೊಬ್ಬಳು ಭೀಕರವಾಗಿ ಕೊಲೆ ಮಾಡಿದ್ದಾಳೆ. ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಮಗುವನ್ನು ಹತ್ಯೆಗೈದಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಿಶೇಷಪುರದ ನಾಗಕಲ್ಲು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪವನ್ ಹಾಗೂ ರಾಧೆ ಎಂಬ ದಂಪತಿಗೆ ಈ ಗಂಡು ಮಗು ಜನಿಸಿತ್ತು. ಗಂಡ ಮನೆ ನಿಭಾಯಿಸದೆ ಕುಡಿತದ ಚಟಕ್ಕೆ ಒಳಗಾಗಿದ್ದ. ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ಹತಾಶಗೊಂಡ ತಾಯಿ ತಡರಾತ್ರಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ರಾಧಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮ್ಯಾನೇಜರ್‌ ಕಿರುಕುಳ, ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಆತ್ಮಹತ್ಯೆ ಯತ್ನ

ಹಾಸನ : ಹಾಸನದಲ್ಲಿ (Hassan News)ಕೆಎಸ್ಆರ್ಟಿಸಿ (KSRTC) ಡಿಪೋ ಮ್ಯಾನೇಜರ್‌ನಿಂದ ಕಿರುಕುಳ (Harassment) ಆರೋಪದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಕಂ ಕಂಡಕ್ಟರ್ ಹರೀಶ್ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಚಾಲಕರ ವಿಶ್ರಾಂತಿ ಕೊಠಡಿಯಲ್ಲಿ ವಿಷ ಕುಡಿದು ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಡಿಪೋ ಮ್ಯಾನೇಜರ್ ಶಾಜಿಯಾ ಬಾನು ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಕೆಲಸದ ವಿಷಯವಾಗಿ ಹರೀಶ್ ಮತ್ತು ಶಾಜಿಯ ಬಾನು ನಡುವೆ ವಾಗ್ವಾದ ನಡೆದಿದೆ. ನಂತರ ವಿಶ್ರಾಂತಿ ಕೊಠಡಿಗೆ ಹೋಗಿ ಹರೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಹರೀಶ್‌ಗೆ ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಎಚ್. ಕೆ ಸುರೇಶ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ