ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಅವಿವಾಹಿತೆ ಎಂಬ ಕಾರಣಕ್ಕೆ ಫ್ಲ್ಯಾಟ್‌ನಿಂದ ಯುವತಿ ಕಿಕ್‌ಔಟ್! ಏನಿದು ಪ್ರಕರಣ?

ಗುಜರಾತ್‌ನ ಗಾಂಧಿನಗರದಲ್ಲಿ ಮದುವೆಯಾಗದಿದ್ದಕ್ಕಾಗಿ ತನ್ನ ಸಹೋದರಿಯನ್ನು ಬಾಡಿಗೆಗೆ ಪಡೆದ ಫ್ಲಾಟ್‌ನಿಂದ ಹೊರಹಾಕಿದ್ದಾರೆ ಎಂದು ನೆಟ್ಟಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಎಲ್ಲರ ಗಮನಸೆಳೆದುಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಅವಿವಾಹಿತೆ ಎಂಬ ಕಾರಣಕ್ಕೆ ಫ್ಲ್ಯಾಟ್‌ನಿಂದ ಯುವತಿ ಕಿಕ್‌ಔಟ್!

Profile pavithra Jul 7, 2025 3:53 PM

ಗಾಂಧಿನಗರ: ಸಾಮಾನ್ಯವಾಗಿ ಬಾಡಿಗೆಮನೆ ಹುಡುಕಲು ಹೋದಾಗ ಸಾಕಷ್ಟು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಬೇರೆ ಧರ್ಮದವರಿಗೆ, ನಾನ್‌ವೆಜ್‌ ತಿನ್ನುವವರಿಗೆ ಮನೆ ಬಾಡಿಗೆ ಕೊಡುವುದಕ್ಕೆ ಹಿಂದೇಟು ಹಾಕುತ್ತಾರೆ. ಇದೀಗ ಗುಜರಾತ್‌ನ ಗಾಂಧಿನಗರದಲ್ಲಿ ಮದುವೆಯಾಗದಿದ್ದಕ್ಕಾಗಿ ಯುವತಿಯೊಬ್ಬಳನ್ನು ಈಗಾಗಲೇ ಬಾಡಿಗೆಗೆ ಪಡೆದ ಫ್ಲಾಟ್‌ನಿಂದ ಹೊರಹಾಕಿದ ಘಟನೆಯೊಂದು ವೈರಲ್‌(Viral Video) ಆಗಿದೆ. ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ವ್ಯಕ್ತಿಯೊಬ್ಬರ ಸಹೋದರಿ ಗಾಂಧಿನಗರದಲ್ಲಿ 3 ಬಿಹೆಚ್‍ಕೆ ಫ್ಲಾಟ್(Rented Flat) ಅನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಅವಳ ಜೊತೆಗೆ ಇನ್ನೂ ಇಬ್ಬರು ಹುಡುಗಿಯರು ಇದ್ದರಂತೆ. ಅವರು ಫ್ಲಾಟ್‌ನಲ್ಲಿ ವಾಸಿಸಲು ಶುರುಮಾಡುವ ಮೊದಲೇ, ನೆರೆಹೊರೆಯವರು ಮದುವೆಯಾಗದ ಹುಡುಗಿಯರಿಗೆ ಫ್ಲಾಟ್ ಬಾಡಿಗೆಗೆ ನೀಡುವುದನ್ನು ವಿರೋಧಿಸಿ ಬಿಲ್ಡರ್‌ಗೆ ದೂರು ನೀಡಿದ್ದಾರೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನವನ್ನು ಸೆಳೆದು ವೈರಲ್ ಆಗಿದೆ. ಹಾಗೂ ಅನೇಕರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. "20 ವರ್ಷಗಳ ಹಿಂದೆ ಮುಂಬೈನಲ್ಲಿ ನನಗೆ ಇದೇ ರೀತಿ ಆಗಿತ್ತು. ಒಂಟಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಅಪಾರ್ಟ್‌ಮೆಂಟ್‌ ಪಡೆಯುವುದು ತುಂಬಾ ಕಷ್ಟ. ಪರಿಸ್ಥಿತಿ ಬದಲಾಗಿದೆ ಎಂದು ಭಾವಿಸುತ್ತೇನೆ. ಮುಂಬೈ ತುಂಬಾ ಸಂಪ್ರದಾಯವಾದಿ ಎಂದು ತಿಳಿದು ನನಗೆ ಆಶ್ಚರ್ಯವಾಯಿತು" ಎಂದು ಮತ್ತೊಬ್ಬರು ಹಂಚಿಕೊಂಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ

ಮಾಂಸಾಹಾರಿಗಳಿಗೆ ಮನೆ ಇಲ್ಲವೆಂದ ಮಾಲೀಕ!

ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬವರು ಮನೆ ಮಾಲೀಕರೊಬ್ಬರು ಮಾಂಸಾಹಾರಿಗಳಿಗೆ ಮನೆ ಕೊಡುವುದಿಲ್ಲ ಎಂದು ಕಳುಹಿಸಿದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಹರಿದಾಡುತ್ತಿದ್ದು, ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಹಾರ ಆಧಾರಿತ ತಾರತಮ್ಯದ ಬಗ್ಗೆ ಅನೇಕರು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. "ಜಾತಿ ಅಥವಾ ಧರ್ಮದ ಆಧಾರದ ಮೇಲೆ ಬಾಡಿಗೆದಾರರನ್ನು ತಿರಸ್ಕರಿಸುವವರೂ ಇದ್ದಾರೆ. ಉದಾಹರಣೆಗೆ, ನೀವು ಮುಸ್ಲಿಮರಾಗಿದ್ದರೆ, ಅವರು ಹೀಗೆ ಹೇಳುತ್ತಾರೆ: ಕ್ಷಮಿಸಿ, ನಾವು ಮುಸ್ಲಿಮರಿಗೆ ಬಾಡಿಗೆಗೆ ನೀಡುವುದಿಲ್ಲ" ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

2 ಗಂಟೆ ಈ ಮನೆಯಲ್ಲಿರಲು 4 ಲಕ್ಷ ರೂ ಬಾಡಿಗೆ!

ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಹೊರಗೆ ನಂದಿ ಹಿಲ್ಸ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಎರಡು ಗಂಟೆಗಳ ಕಾಲ ಉಳಿದುಕೊಳ್ಳಲು ತಿಂಗಳಿಗೆ 4 ಲಕ್ಷ ರೂ. ಬಾಡಿಗೆ ನೀಡಿದ್ದಾನೆ. ಆತ ವಾಸವಾಗಿದ್ದ ಐಷಾರಾಮಿ ಮನೆಯನ್ನು ತೋರಿಸುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.ವಿಡಿಯೊದಲ್ಲಿ ಮನೆ ಹಾಗೂ ಅಲ್ಲಿನ ಸುತ್ತಮುತ್ತಲಿನ ದೃಶ್ಯ ಸೆರೆಯಾಗಿದೆ. ಬೆಟ್ಟಗುಡ್ಡಗಳು ಮತ್ತು ಹಚ್ಚ ಹಸಿರಿನಿಂದ ಸುತ್ತುವರಿದಿರುವ ಈ ಮನೆಯು ಖಾಸಗಿ ಈಜುಕೊಳ ಮತ್ತು ಸುಂದರವಾದ ಗಾರ್ಡನ್‌ ಹೊಂದಿದೆ. ಇನ್ನು ಲಿವಿಂಗ್ ರೂಮ್ ಪೀಠೋಪಕರಣಗಳನ್ನು ಮೆಕ್ಸಿಕೋದಿಂದ ತರಲಾಗಿದೆ ಎಂದು ಅವನು ಹೇಳಿದ್ದಾನೆ. ಈ ಮನೆಯ ಸೌಂದರ್ಯ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.