Wiaan Mulder: ತ್ರಿಶತಕ ಬಾರಿಸಿ ವಿಶ್ವ ದಾಖಲೆ ಬರೆದ ವಿಯಾನ್ ಮುಲ್ಡರ್
ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಮಹಾರಾಜ್ ಗಾಯಗೊಂಡು ದ್ವಿತೀಯ ಪಂದ್ಯದಿಂದ ಹೊರಬಿದ್ದರು. ಹೀಗಾಗಿ 2ನೇ ಪಂದ್ಯದಲ್ಲಿ ವಿಯಾನ್ ಮುಲ್ಡರ್ ನಾಯಕತ್ವ ವಹಿಸಿಕೊಂಡರು. ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲೇ ತ್ರಿಶತಕ ಬಾರಿಸುವ ಮೂಲಕ ಭವಿಷ್ಯದ ನಾಯಕ ಮತ್ತು ಆಟಗಾರನಾಗಿ ಗುರುತಿಸಿಕೊಂಡರು.


ಬುಲವಾಯೊ: ಆತಿಥೇಯ ಜಿಂಬಾಬ್ವೆ ವಿರುದ್ದದ ದ್ವಿತೀಯ ಟೆಸ್ಟ್(ZIM vs SA 2nd Test) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿಯಾನ್ ಮುಲ್ಡರ್(Wiaan Mulder) ತ್ರಿಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ತ್ರಿಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಅವರು ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಒಂಬತ್ತನೇ ನಾಯಕ ಎನಿಸಿಕೊಂಡರು.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ಎದುರಾದ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳದ ದಕ್ಷಿಣ ಆಫ್ರಿಕಾದ ನಾಯಕ ಟೆಂಬ ಬವುಮಾ ಈ ಸರಣಿಗೆ ಅಲಭ್ಯರಾದ ಕಾರಣ ಕೇಶವ್ ಮಹಾರಾಜ್‌ಗೆ ಹಂಗಾಮಿ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು.
ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಮಹಾರಾಜ್ ಗಾಯಗೊಂಡು ದ್ವಿತೀಯ ಪಂದ್ಯದಿಂದ ಹೊರಬಿದ್ದರು. ಹೀಗಾಗಿ 2ನೇ ಪಂದ್ಯದಲ್ಲಿ ವಿಯಾನ್ ಮುಲ್ಡರ್ ನಾಯಕತ್ವ ವಹಿಸಿಕೊಂಡರು. ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲೇ ತ್ರಿಶತಕ ಬಾರಿಸುವ ಮೂಲಕ ಭವಿಷ್ಯದ ನಾಯಕ ಮತ್ತು ಆಟಗಾರನಾಗಿ ಗುರುತಿಸಿಕೊಂಡರು.
ಇದನ್ನೂ ಓದಿ ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್
ಕೊನೆಯ ಬಾರಿಗೆ ನಾಯಕನಾಗಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದು ನ್ಯೂಜಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್. 2014 ರಲ್ಲಿ ಮೆಕಲಮ್ ಭಾರತ ವಿರುದ್ಧ 302 ರನ್ ಬಾರಿಸಿದ್ದರು. ಇದೀಗ 11 ವರ್ಷದ ಬಳಿಕ ಮುಲ್ಡರ್ ತ್ರಿಶತಕ ಬಾರಿಸಿದ್ದಾರೆ. ಇದಲ್ಲದೆ, 1998 ರ ನಂತರ ಟೆಸ್ಟ್‌ನಲ್ಲಿ ತವರಿನಿಂದ ಹೊರಗೆ ತ್ರಿಶತಕ ಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಯಕನಾಗಿ ಟೆಸ್ಟ್‌ನಲ್ಲಿ ಮೊದಲ ತ್ರಿಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಬಾಬ್ ಸಿಂಪ್ಸನ್ ಹೆಸರಿನಲ್ಲಿದೆ. 1964ರಲ್ಲಿ ಇಂಗ್ಲೆಂಡ್ ವಿರುದ್ಧ 311 ರನ್ ಬಾರಿಸಿದ್ದರು.
ನಾಯಕನಾಗಿ ಟೆಸ್ಟ್ ತ್ರಿಶತಕ ಬಾರಿಸಿದ ಸಾಧಕರು
ಆಟಗಾರ(ದೇಶ) | ರನ್ | ವಿರುದ್ಧ | ವರ್ಷ |
---|---|---|---|
ಬಾಬ್ ಸಿಂಪ್ಸನ್(ಆಸ್ಟ್ರೇಲಿಯಾ) | 311 | ಇಂಗ್ಲೆಂಡ್ | 1964 |
ಗ್ರಹಾಂ ಗೂಚ್(ಇಂಗ್ಲೆಂಡ್) | 333 | ಭಾರತ | 1990 |
ಮಾರ್ಕ್ ಟೇಲರ್ (ಆಸ್ಟ್ರೇಲಿಯಾ) | 334* | ಪಾಕಿಸ್ತಾನ | 1998 |
ಬ್ರಿಯಾನ್ ಲಾರಾ(ವಿಂಡೀಸ್) | 400* | ಇಂಗ್ಲೆಂಡ್ | 2004 |
ಜಯವರ್ಧನೆ(ಶ್ರೀಲಂಕಾ) | 374 | ದಕ್ಷಿಣ ಆಫ್ರಿಕಾ | 2006 |
ಯೂನಿಸ್ ಖಾನ್(ಪಾಕಿಸ್ತಾನ) | 313 | ಶ್ರೀಲಂಕಾ | 2009 |
ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ) | 329* | ಭಾರತ | 2012 |
ಬ್ರೆಂಡನ್ ಮೆಕಲಮ್(ಕಿವೀಸ್) | 302 | ಭಾರತ | 2014 |
ವಿಯಾನ್ ಮುಲ್ಡರ್(ದ. ಆಫ್ರಿಕಾ) | 346(ಬ್ಯಾಟಿಂಗ್) | ಜಿಂಬಾಬ್ವೆ | 2025 |