ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಕಲಿಯುಗದ ಶ್ರವಣಕುಮಾರ! ಹೆತ್ತವರ ಮುಖದಲ್ಲಿ ನಗು ಮೂಡಿಸಲು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

ಟೆಕ್ಕಿಯೊಬ್ಬ ತನ್ನ ಹೆತ್ತವರನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರವಾಸಕ್ಕಾಗಿ ಲಾಸ್ ವೇಗಾಸ್‌ಗೆ ಕರೆದುಕೊಂಡು ಹೋಗಿದ್ದಾನೆ. ಅವನು ಈ ಭಾವನಾತ್ಮಕ ಕ್ಷಣವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ಎಲ್ಲರ ಮನಗೆದ್ದು ವೈರಲ್(Viral Video) ಆಗಿದೆ.

ಹೆತ್ತವರ ಕನಸು ಈಡೇರಿಸಲು ಈತ ಮಾಡಿದ್ದೇನು? ವಿಡಿಯೊ ನೋಡಿ

Profile pavithra Jul 7, 2025 2:03 PM

ಟೆಕ್ಕಿಯೊಬ್ಬ ತನ್ನ ಹೆತ್ತವರನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರವಾಸಕ್ಕಾಗಿ ಲಾಸ್ ವೇಗಾಸ್‌ಗೆ ಕರೆದುಕೊಂಡು ಹೋಗಿದ್ದಾನೆ. ಅವನು ಈ ಭಾವನಾತ್ಮಕ ಕ್ಷಣವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ಎಲ್ಲರ ಮನಗೆದ್ದು ವೈರಲ್(Viral Video)ಆಗಿದೆ.ಅಮಿತ್ ಕಶ್ಯಪ್ ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್‍ನಲ್ಲಿ ವೇಗಾಸ್‌ಗೆ ಹೋದ ಪ್ರಯಾಣದ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಇದರಲ್ಲಿ ಅವನ ಹೆತ್ತವರು ವಿಮಾನದಲ್ಲಿ ಕುಳಿತುಕೊಂಡು ಖುಷಿಯಿಂದ ಫೋಟೊಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನವನ್ನೂ ಸೆಳೆದಿದ್ದು, ಅನೇಕರು ಟೆಕ್ಕಿಯನ್ನು ಹೊಗಳಿದ್ದಾರೆ. "ಅವರ ಮುಖದಲ್ಲಿನ ಸಂತೋಷ ನನ್ನ ದಿನವನ್ನು ಸುಂದರಗೊಳಿಸಿತು" ಎಂದು ಒಬ್ಬರು ಬರೆದಿದ್ದಾರೆ. "ನೀವು ಅವರನ್ನು ಲಾಸ್ ವೇಗಾಸ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ಸಂತೋಷವಾಗಿದೆ. ಅವರು ನಿಮ್ಮೊಂದಿಗೆ ಇರಲು ಸಂತೋಷಪಡುತ್ತಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

"ನಿಮ್ಮನ್ನು ವೈಯಕ್ತಿಕವಾಗಿ ತಿಳಿದಿಲ್ಲ, ಆದರೆ ಈ ರೀಲ್ ನೋಡಿದ ನಂತರ, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸಿತು. ಇದು ಅಕ್ಷರಶಃ ಪ್ರತಿ ಮಕ್ಕಳ ಕನಸು. ನೀವು ಅದನ್ನು ನನಸಾಗಿಸಲು ಸಾಧ್ಯವಾಗಿದ್ದಕ್ಕೆ ಸಂತೋಷವಾಯಿತು" ಎಂದು ಮತ್ತೊಬ್ಬರು ಹೇಳಿದ್ದಾರೆ.

ಮಕ್ಕಳು ತನ್ನ ಪೋಷಕರಿಗೆ ಖುಷಿ ನೀಡಿದ ವಿಡಿಯೊ ವೈರಲ್ ಆಗಿದ್ದು, ಇದೇ ಮೊದಲಲ್ಲ. ಈ ಹಿಂದೆ ಮಗನೊಬ್ಬ ತನ್ನ ತಾಯಿಗೆ ಚಿನ್ನದ ಸರದ ಉಡುಗೊರೆಯನ್ನು ಸರ್‌ಪ್ರೈಸ್‌ ಆಗಿ ನೀಡಿ ತಾಯಿಗೆ ಅಚ್ಚರಿಗೊಳಿಸಿದ್ದನು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರ ಹೃದಯವನ್ನು ಗೆದ್ದಿತ್ತು.

ಈ ಸುದ್ದಿಯನ್ನೂ ಓದಿ:Viral Video: ಡಾನ್ಸ್‌ ಮಾಡೋ ಜೋಶ್‌ನಲ್ಲಿ ಗುಂಡು ಹಾರಿಸಿದ ವ್ಯಕ್ತಿ; ಇಬ್ಬರು ಡಾನ್ಸರ್ಸ್‌ಗೆ ಗಾಯ

ವಿಡಿಯೊದಲ್ಲಿ ತಾಯಿ ತನ್ನ ಊಟದ ಪ್ಲೇಟ್‍ ಅನ್ನು ಮುಂದೆ ಇಟ್ಟು ನೆಲದ ಮೇಲೆ ಕುಳಿತಿರುವಾಗ ಕೆಲವೇ ಕ್ಷಣಗಳಲ್ಲಿ, ಅವಳ ಮಗ ಅವಳಿಗೆ ತಿಳಿಯದಂತೆ ಅವಳ ಹಿಂದೆ ನಿಂತು, ನಂತರ ಅವಳ ಕುತ್ತಿಗೆಗೆ ಚಿನ್ನದ ಸರವನ್ನು ಹಾಕಿದ್ದಾನೆ. ಮಗನಿಂದ ಬಂದ ಈ ವಿಶೇಷ ಉಡುಗೊರೆಯನ್ನು ಕಂಡು ಆ ತಾಯಿ ನೀಡಿದ ಪ್ರತಿಕ್ರಿಯೆ ಎಲ್ಲರ ಮನಸ್ಸನ್ನು ಗೆದ್ದಿದೆ. ಈ ವಿಡಿಯೊ ಹಂಚಿಕೊಂಡಿದಾಗಿನಿಂದ ವೈರಲ್ ಆಗಿ ಸುಮಾರು 6,100 ವ್ಯೂವ್ಸ್ ಮತ್ತು 650 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ.