Aamir Khan: ತಮಿಳಿನ ಖ್ಯಾತ ನಟ ಮಗಳಿಗೆ ನಾಮಕರಣ ಮಾಡಿದ ಆಮೀರ್ ಖಾನ್; ಹೃದಯಸ್ಪರ್ಶಿ ವಿಡಿಯೊ ವೈರಲ್
ನಟ-ನಿರ್ಮಾಪಕ ವಿಷ್ಣು ವಿಶಾಲ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಏಪ್ರಿಲ್ 22 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಅವರ ಮಗಳ ನಾಮಕರಣವು ಹೈದರಾಬಾದ್ನಲ್ಲಿ ನೆರವೇರಿತು. ಈ ಸಮಾರಂಭಕ್ಕೆ ಅತಿಥಿಯಾಗಿ ಆಮೀರ್ ಖಾನ್ ಆಗಮಿಸಿ ಮಗುವಿಗೆ ಮೀರಾ ಎಂದು ಹೆಸರಿಟ್ಟಿದ್ದಾರೆ.



ತಮಿಳು ನಟ ವಿಷ್ಣು ವಿಷಾಲ್ ಮತ್ತು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಏಪ್ರಿಲ್ 22 ರಂದು ಹೆಣ್ಣು ಮಗಳನ್ನು ಬರ ಮಾಡಿಕೊಂಡರು. ಈಗ ಅವರು ತಮ್ಮ ಮಗಳ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಈ ಅದ್ದೂರಿ ನಾಮಕರಣಕ್ಕೆ ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್ ಕೂಡ ಭಾಗವಹಿಸಿದ್ದರು.

ಹೈದರಾಬಾದ್ನಲ್ಲಿ ನಡೆದ ನಾಮಕರಣ ಸಂದರ್ಭದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಆಮೀರ್ ಖಾನ್ ಭಾಗಿಯಾಗಿ ಮಗುವಿಗೆ “ಮೀರಾ” ಎಂದು ಹೆಸರಿಟ್ಟರು. ಈ ಖುಷಿಯ ಕ್ಷಣದ ಹಲವಾರು ಫೋಟೋಗಳನ್ನು ಜ್ವಾಲಾ ಮತ್ತು ವಿಷ್ಣು ತಮ್ಮಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಈ ಸಮಾರಂಭದ ಭಾವನಾತ್ಮಕ ಫೋಟೋಗಳನ್ನು ಹಂಚಿಕೊಂಡ ಜ್ವಾಲಾ, 'ನಮ್ಮ ಮೀರಾ' ನಿಮ್ಮ ಆಗಮನಕ್ಕೆ ಧನ್ಯವಾದಗಳು ಆಮಿರ್.. ನಾವು ನಿನ್ನನ್ನು ಸದಾ ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಅಮಿರ್ ಅವರೊಂದಿಗೆ ತಮ್ಮ ಕುಟುಂಬದ ಫೋಟೋವನ್ನು ಹಂಚಿಕೊಂಡ ವಿಷ್ಣು ಹೈದ ರಾಬಾದ್ಗೆ ಆಗಮಿಸಿ ತಮ್ಮ ಮಗಳಿಗೆ ಹೆಸರಿಟ್ಟ ಆಮೀರ್ ಖಾನ್ ಅವರಿಗೆ ಧನ್ಯವಾದಗಳು. ಆಮಿರ್ ಸರ್ ಜೊತೆಗಿನ ನಮ್ಮ ಪ್ರಯಾಣ ಅದ್ಭುತವಾಗಿತ್ತು ಎಂದು ಬರೆದು ಕೊಂಡಿದ್ದಾರೆ.

ವಿಷ್ಣು ವಿಶಾಲ್ ತಮ್ಮ ಪೋಸ್ಟ್ನಲ್ಲಿ ಮಗಳ ಹೆಸರಿನ ಅರ್ಥವನ್ನು ಸಹ ಬಹಿರಂಗಪಡಿಸಿದ್ದಾರೆ. ಮೀರಾ ಎಂದರೆ ಶಾಂತಿ ಮತ್ತು ಪ್ರೀತಿ ಎಂದು ಅವರು ಬರೆದಿದ್ದಾರೆ. ಅಭಿಮಾನಿಗಳು ಈ ಪೋಸ್ಟ್ಗೆ ಲೈಕ್,ಕಮೆಂಟ್ ಗಳ ಸುರಿಮಳೆ ಗೈದಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

2021ರ ಏಪ್ರಿಲ್ನಲ್ಲಿ ಅತಿಥಿಗಳ ಸಮ್ಮುಖದಲ್ಲಿ ಈ ಜೋಡಿ ಮದುವೆಯಾದರು. ಮದುವೆಗೆ ಮುಂಚಿತವಾಗಿ ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದರು. ವಿಷ್ಣು ಒಬ್ಬ ಖ್ಯಾತ ನಟನಾಗಿದ್ದರೆ, ಜ್ವಾಲಾ ಒಬ್ಬ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಯಾಗಿದ್ದಾರೆ.

ವಿಷ್ಣು ವಿಶಾಲ್ ಕೊನೆಯದಾಗಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಂ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ರಜನಿಕಾಂತ್, ವಿಕ್ರಾಂತ್, ಸೆಂಥಿಲ್ ಮತ್ತು ಕೆಎಸ್ ರವಿಕುಮಾರ್ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ವಿಷ್ಣು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಮುಂಬರುವ ಚಿತ್ರ ಓಹೋ ಎಂಥಾನ್ ಬೇಬಿ ಬಿಡುಗಡೆಗೆ ಸಜ್ಜಾಗುತ್ತಿದೆ.