Khalistani Terrorist: ಪಂಜಾಬ್‌ನಾದ್ಯಂತ 14 ಗ್ರೆನೇಡ್ ದಾಳಿ ಮಾಸ್ಟರ್ ಮೈಂಡ್ ಖಲಿಸ್ತಾನಿ ಉಗ್ರ ಭಾರತಕ್ಕೆ ಹಸ್ತಾಂತರ!
Khalistani Terrorist: ಪಂಜಾಬ್‌ನಾದ್ಯಂತ ನಡೆದ 14 ಗ್ರೆನೇಡ್ ದಾಳಿಗಳ ಪ್ರಮುಖ ಆರೋಪಿ ಮತ್ತು ಖಲಿಸ್ತಾನಿ ಭಯೋತ್ಪಾದಕ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗುತ್ತಿದ್ದು, ಸಿಂಗ್ ಎರಡು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಇತನನ್ನು ಅಮೆರಿಕದಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಬಂಧಿಸಿದೆ.


ನವದೆಹಲಿ: ಅಮೆರಿಕ (America) ಮೂಲದ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಹರ್‌ಪ್ರೀತ್ ಸಿಂಗ್ (Harpreet Singh) ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಏಪ್ರಿಲ್‌ನಲ್ಲಿ ಬಂಧಿಸಿ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ವಶಕ್ಕೆ ಒಪ್ಪಿಸಲಾಗಿತ್ತು. ಈಗ ಉಗ್ರನನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ. ಪಂಜಾಬ್‌ನಲ್ಲಿ ಕನಿಷ್ಠ 16 ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹರ್‌ಪ್ರೀತ್ ಸಿಂಗ್‌ಗೆ ಬೇಕಾಗಿದ್ದಾನೆ.
ಈತನ ವಿರುದ್ಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (BKI) ಜೊತೆ ಸಹಕರಿಸಿದ ಆರೋಪವಿದೆ. ಪಂಜಾಬ್ ಮತ್ತು ಅಮೆರಿಕದಲ್ಲಿ ಈತ ಪೊಲೀಸ್ ಠಾಣೆಗಳ ಮೇಲೆ ಹಲವು ಹ್ಯಾಂಡ್ ಗ್ರೆನೇಡ್ ದಾಳಿಗಳನ್ನು ನಡೆಸಿದ್ದಾನೆ. ಅಮೃತಸರದ ನಿವಾಸಿಯಾದ ಹರ್‌ಪ್ರೀತ್ ನನ್ನು ಏಪ್ರಿಲ್ 18 ರಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮತ್ತು ICE ತಂಡಗಳು ಬಂಧಿಸಿದ್ದವು.
ಈ ಸುದ್ದಿಯನ್ನು ಓದಿ: Viral Vidoe: ಆಡುತ್ತಾ ಹೊರಗೆ ಬಂದ ಬಾಲಕಿಗೆ ಡಿಕ್ಕಿ ಹೊಡೆದ ಆಟೋ;ಮುಂದೇನಾಯ್ತು ವಿಡಿಯೊ ನೋಡಿ!
ಬಂಧನದ ನಂತರ FBI ನಿರ್ದೇಶಕ ಕಾಶ್ ಪಟೇಲ್, "ನ್ಯಾಯ ಒದಗಿಸಲಾಗುವುದು" ಎಂದು ಭರವಸೆ ನೀಡಿದ್ದರು. "ಅಕ್ರಮವಾಗಿ ಅಮೆರಿಕದಲ್ಲಿದ್ದ ವಿದೇಶಿ ಭಯೋತ್ಪಾದಕ ಗ್ಯಾಂಗ್‌ನ ಭಾಗವಾಗಿರುವ ಹರ್‌ಪ್ರೀತ್ ಸಿಂಗ್‌ನನ್ನು ಸೆರೆಹಿಡಿಯಲಾಗಿದೆ. ಈತ ಭಾರತ ಮತ್ತು ಅಮೆರಿಕದಲ್ಲಿ ಪೊಲೀಸ್ ಠಾಣೆಗಳ ಮೇಲಿನ ದಾಳಿಗಳ ಯೋಜನೆಯಲ್ಲಿ ಭಾಗಿಯಾಗಿದ್ದಾನೆ ಎಂದು ನಾವು ಭಾವಿಸಿದ್ದೇವೆ" ಎಂದು ಅವರು ಏಪ್ರಿಲ್ 22 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
FBI ಸ್ಯಾಕ್ರಮೆಂಟೊ ತನಿಖೆಯನ್ನು ಸ್ಥಳೀಯವಾಗಿ ಹಾಗೂ ಭಾರತದ ಅಧಿಕಾರಿಗಳ ಜತೆಯಲ್ಲಿ ನಡೆಸಿತು. ಹಿಂಸಾಚಾರದಲ್ಲಿ ಭಾಗಿಯಾದವರನ್ನು FBI ಎಲ್ಲಿಯೇ ಇದ್ದರೂ ಕಂಡುಹಿಡಿಯುತ್ತದೆ ಎಂದು ಪಟೇಲ್ ಹೇಳಿದ್ದಾರೆ. ಭಾರತದ ಭಯೋತ್ಪಾದನೆ ನಿಗ್ರಹ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜನವರಿಯಲ್ಲಿ ಹರ್‌ಪ್ರೀತ್ ಸಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚಂಡೀಗಢದ ಮನೆಯೊಂದರ ಮೇಲೆ ನಡೆದ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈತ ಬೇಕಾಗಿದ್ದ. ಹರ್‌ಪ್ರೀತ್ ಸಿಂಗ್ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.