ಸ್ಟ್ರೀಟ್ ಸಾಂಗ್ ಮೂಲಕ ಆಕಾಶ್ ದೀಪ್‌ಗೆ ಗೌರವ ಸಲ್ಲಿಸಿದ ಇಂಗ್ಲೆಂಡ್ ಅಭಿಮಾನಿಗಳು; ವಿಡಿಯೊ ವೈರಲ್
Akash Deep: ಇಂಗ್ಲಿಷ್ ಪ್ರೇಕ್ಷಕರು ತಮ್ಮ ಕ್ರೀಡಾ ಗೀತೆಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಫುಟ್‌ಬಾಲ್‌ನಲ್ಲಿ, ಬಹುತೇಕ ಪ್ರತಿಯೊಬ್ಬ ತಾರೆಯೂ ತಮ್ಮದೇ ಆದ ಗಾಯನವನ್ನು ಹೊಂದಿರುತ್ತಾರೆ. ಕ್ರಿಕೆಟ್ ಕೂಡ ಆ ಸಂಸ್ಕೃತಿಯ ತನ್ನದೇ ಆದ ಆವೃತ್ತಿಯನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಯಾವಾಗಲೂ ಗಾಯನಶೀಲ ಬಾರ್ಮಿ ಆರ್ಮಿ ನಡೆಸುತ್ತದೆ.


ಬರ್ಮಿಂಗ್‌ಹ್ಯಾಮ್: ಎಜ್‌ಬಾಸ್ಟನ್(Edgbaston) ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಘಾತಕ ಬೌಲಿಂಗ್ ದಾಳಿಯ ಮೂಲಕ ಆಂಗ್ಲರಿಗೆ ಸೋಲಿನ ರುಚಿ ತೋರಿಸಿದ ಆಕಾಶ್ ದೀಪ್(Akash Deep) ಅವರಿಗೆ ಇಂಗ್ಲಿಷ್ ಅಭಿಮಾನಿಗಳಿಂದ ಹೃದಯಸ್ಪರ್ಶಿ ಸಂಗೀತ ಗೌರವ ದೊರೆಯಿತು. 28 ವರ್ಷದ ವೇಗದ ಬೌಲರ್ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಈ ಪ್ರದರ್ಶನಕ್ಕೆ ಸ್ವತಃ ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳೇ ಮನಸೋತಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಎಜ್‌ಬಾಸ್ಟನ್ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಗಿಟಾರ್ ಹಿಡಿದು ಹಿಪ್ಪಿ ಶೈಲಿಯ ಸ್ಟ್ರೀಟ್ ಸಾಂಗ್ ಹಾಡುವ ಮೂಲಕ ಆಕಾಶ್ ದೀಪ್ ಅವರಿಗೆ ಗೌರವ ಸೂಚಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ʼಆಕಾಶ್ ದೀಪ್, ಆಕಾಶ್ ದೀಪ್, ಆಕಾಶ್ ದೀಪ್... ಬೌಲಿಂಗ್ ಔಟ್ ಆಕಾಶ್ ದೀಪ್ʼ ಎಂದು ಇಂಗ್ಲೆಂಡ್ ಅಭಿಮಾನಿಗಳು ಸ್ಟ್ರೀಟ್ ಸಾಂಗ್ ಹಾಡಿದ್ದಾರೆ.
The Poms do have a sense of humour : “Akash Deep Akash Deep Bowling England Out Akash Deep” (In Let It Be tune) pic.twitter.com/TpVZ5QrZaB
— Sameer (@BesuraTaansane) July 6, 2025
ಇಂಗ್ಲಿಷ್ ಪ್ರೇಕ್ಷಕರು ತಮ್ಮ ಕ್ರೀಡಾ ಗೀತೆಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಫುಟ್‌ಬಾಲ್‌ನಲ್ಲಿ, ಬಹುತೇಕ ಪ್ರತಿಯೊಬ್ಬ ತಾರೆಯೂ ತಮ್ಮದೇ ಆದ ಗಾಯನವನ್ನು ಹೊಂದಿರುತ್ತಾರೆ. ಕ್ರಿಕೆಟ್ ಕೂಡ ಆ ಸಂಸ್ಕೃತಿಯ ತನ್ನದೇ ಆದ ಆವೃತ್ತಿಯನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಯಾವಾಗಲೂ ಗಾಯನಶೀಲ ಬಾರ್ಮಿ ಆರ್ಮಿ ನಡೆಸುತ್ತದೆ.
ಜಸ್‌ಪ್ರೀತ್ ಬಮ್ರಾ ಅವರ ಬದಲಿಗೆ ಕಣಕ್ಕಿಳಿದ ಆಕಾಶ್ ದೀಪ್ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಕಿತ್ತು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. 608 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಆತಿಥೇಯರ ಆಟ 271 ರನ್‌ಗಳಿಗೆ ಅಂತ್ಯವಾಯಿತು.
ಇದನ್ನೂ ಓದಿ ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್