#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Australian Open: ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಗೆ ಮುತ್ತಿಟ್ಟ ಕೀಯ್ಸ್

ಸಿನ್ನರ್‌ ಹಾಗೂ ಜ್ವೆರೆವ್‌ ಎಟಿಪಿ ಟೂರ್ನಿಗಳಲ್ಲಿ ಈವರೆಗೂ ಒಟ್ಟು 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಜ್ವೆರೆವ್‌ 4 ಪಂದ್ಯಗಳಲ್ಲಿ ಗೆದ್ದರೆ, ಸಿನ್ನರ್‌ಗೆ 2 ಪಂದ್ಯದಲ್ಲಿ ಜಯ ಸಿಕ್ಕಿದೆ.

Australian Open: ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಗೆ ಮುತ್ತಿಟ್ಟ ಕೀಯ್ಸ್

Australian Open

Profile Abhilash BC Jan 26, 2025 8:34 AM

ಮೆಲ್ಬರ್ನ್‌: ಯಾರೂ ನಿರೀಕ್ಷೆ ಮಾಡದಂತೆ ಆಸ್ಟ್ರೇಲಿಯನ್‌ ಓಪನ್‌(Australian Open) ಮಹಿಳಾ ಸಿಂಗಲ್ಸ್‌ನಲ್ಲಿ ನೂತನ ಚಾಂಪಿಯನ್‌ ಆಗಿ ಅಮೆರಿಕದ ಮ್ಯಾಡಿಸನ್​ ಕೀಯ್ಸ್ ಮೂಡಿ ಬಂದಿದ್ದಾರೆ. ಶನಿವಾರ ರಾತ್ರಿ ನಡೆದಿದ್ದ ಫೈನಲ್‌ ಫೈಟ್‌ನಲ್ಲಿ ಹಾಲಿ, ಹಾಗೂ ಹ್ಯಾಟ್ರಿಕ್‌ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ವಿಶ್ವ ನಂ.1 ಆಟಗಾರ್ತಿ ಅರಿನಾ ಸಬಲೆಂಕಾಗೆ ಆಘಾತ ನೀಡುವ ಮೂಲಕ ಚೊಚ್ಚಲ ಗ್ರ್ಯಾನ್‌ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು. ಇಂದು ನಡೆಯುವ ಪುರುಷರ ಸಿಂಗಲ್ಸ್‌ ಫೈನಲ್‌ ಕಾದಾಟದಲ್ಲಿ ವಿಶ್ವ ನಂ.1 ಆಟಗಾರ ಇಟಲಿಯ ಯಾನ್ನಿಕ್‌ ಸಿನ್ನರ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸೆಣಸಲಿದ್ದಾರೆ.

ಮೊದಲ ಸೆಟ್‌ನಲ್ಲೇ ಆಕ್ರಮಣಕಾರಿ ಆಟವಾಡಿದ ಮ್ಯಾಡಿಸನ್‌ 6-3 ಅಂತರದಿಂದ ಗೆದ್ದು ಮುನ್ನಡೆ ಸಾಧಿಸಿದರು. ಆದರೆ ದ್ವಿತೀಯ ಸೆಟ್‌ನಲ್ಲಿ ಸಬಲೆಂಕಾ ಕೂಡ ತಿರುಗಿ ಬಿದ್ದರು. 6-2 ಅಂತರದಿಂದ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದರು. ನಿರ್ಣಯ ಸೆಟ್‌ನಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಿದ ಮ್ಯಾಡಿಸನ್‌ ತೀವ್ರ ಹೋರಾಟ ನಡೆಸಿ ಚೊಚ್ಚಲ ಪ್ರಶಸ್ತಿ ಗೆದ್ದರು. ಚಾಂಪಿಯನ್ ಆದ ಮ್ಯಾಡಿಸನ್‌ ಕೀಸ್‌ ಬಹುಮಾನ ಮೊತ್ತವಾಗಿ 19.05 ಕೋಟಿ ಪಡೆದರೆ, ರನ್ನರ್‌-ಅಪ್‌ ಸಬಲೆಂಕಾಗೆ 10.34 ಕೋಟಿ ರೂ. ಲಭಿಸಿತು. ಇದು ಮ್ಯಾಡಿಸನ್‌ಗೆ 46ನೇ ಗ್ರಾಂಡ್​ ಸ್ಲಾಂನಲ್ಲಿ ಒಲಿದ ಚೊಚ್ಚಲ ಪ್ರಶಸ್ತಿ ಒಲಿಸಿಕೊಂಡರು.

ಇದನ್ನೂ ಓದಿ IND vs ENG: ಅರ್ಧಶತಕ ಸಿಡಿಸಿ ಸೋಲಂಚಿನಲ್ಲಿದ್ದ ಭಾರತವನ್ನು ಗೆಲ್ಲಿಸಿದ ತಿಲಕ್‌ ವರ್ಮಾ!



ನೊವಾಕ್​ ಜೋಕೋವಿಕ್​ ಗಾಯದಿಂದಾಗಿ ಸೆಮೀಸ್​ನಲ್ಲಿ ಹಿಂದೆ ಸರಿದ ಕಾರಣ ಜ್ವೆರೆವ್‌ ವಾಕ್‌ ಓವರ್‌ ಲಭಿಸಿ ನೇರವಾಗಿ ಫೈನಲ್‌ ಪ್ರವೇಶಿಸಿದ್ದರು. ಈ ಹಿಂದಿನ 2 ಫೈನಲ್​ಗಳಲ್ಲಿ (2020ರ ಯುಎಸ್​ ಓಪನ್​, 2024ರ ಫ್ರೆಂಚ್​ ಓಪನ್​) ಜ್ವೆರೇವ್​ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಸಿನ್ನರ್‌ ಹಾಗೂ ಜ್ವೆರೆವ್‌ ಎಟಿಪಿ ಟೂರ್ನಿಗಳಲ್ಲಿ ಈವರೆಗೂ ಒಟ್ಟು 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಜ್ವೆರೆವ್‌ 4 ಪಂದ್ಯಗಳಲ್ಲಿ ಗೆದ್ದರೆ, ಸಿನ್ನರ್‌ಗೆ 2 ಪಂದ್ಯದಲ್ಲಿ ಜಯ ಸಿಕ್ಕಿದೆ.