ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Champions Trophy: ಬಾಬರ್‌ ಆಝಮ್‌ಗೆ ಓಪನಿಂಗ್‌ ನೀಡಬೇಡಿ ಎಂದ ಮೊಹಮ್ಮದ್‌ ಹಫೀಝ್‌!

Mohammad Hafeez argued against Babar Azam: ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಬಾಬರ್ ಆಝಮ್ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ವಿಫಲರಾಗಿದ್ದಾರೆ. ಆದ್ದರಿಂದ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಾಜಿ ನಾಯಕನನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿಸದೆ ಮೂರನೇ ಕ್ರಮಾಂಕದಲ್ಲಿ ಆಡಿಸಬೇಕೆಂದು ಮಾಜಿ ನಾಯಕ ಮೊಹಮ್ಮದ್ ಹಫೀಜ್ ಆಗ್ರಹಿಸಿದ್ದಾರೆ.

ಬಾಬರ್‌ ಆಝಮ್‌ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಮೊಹಮ್ಮದ್‌ ಹಫೀಝ್‌!

Babar Azam-Mohammed Hafeez

Profile Ramesh Kote Feb 15, 2025 3:05 PM

ಕರಾಚಿ: ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಕ್ರಿಕೆಟ್‌ ತ್ರಿಕೋನ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ ವೈಫಲ್ಯ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಬರ್‌ ಆಝಮ್‌ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಪರ ಬಾಬರ್‌ ಆಝಮ್‌ ಇನಿಂಗ್ಸ್‌ ಆರಂಭಿಸದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಪಾಕ್‌ ಮಾಜಿ ನಾಯಕ ಮೊಹಮ್ಮದ್‌ ಹಫೀಝ್‌ ಆಗ್ರಹಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಾಜಿ ನಾಯಕ ಬಾಬರ್ ಆಝಮ್ ಉತ್ತಮ ಆರಂಭ ತಂದುಕೊಡುವಲ್ಲಿ ವೈಫಲ್ಯ ಕಂಡಿದ್ದರಿಂದ ಪಾಕಿಸ್ತಾನ ಸೋಲು ಕಂಡಿತು. ಸರಣಿಯಲ್ಲಿ ಬಾಬರ್ ಆಝಮ್ ಆಡಿದ 3 ಪಂದ್ಯಗಳಿಂದ ಕೇವಲ 62 ರನ್ ಗಳಿಸಿದ್ದಾರೆ. ಆದ್ದರಿಂದ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬಾಬರ್ ಆಝಮ್ ಬದಲಿಗೆ ಸೈಮ್ ಆಯುಬ್, ಫಖಾರ್ ಝಮಾನ್‌ ಅವರೊಂದಿಗೆ ಇನಿಂಗ್ಸ್ ಆರಂಭಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಹಫೀಝ್‌ ಸಲಹೆ ನೀಡಿದ್ದಾರೆ.

Champions Trophy: ʻನನ್ನನ್ನು ಕಿಂಗ್‌ ಎಂದು ಕರೆಯಬೇಡಿʼ-ಫ್ಯಾನ್ಸ್‌ಗೆ ಬಾಬರ್‌ ಆಝಮ್‌ ಆಗ್ರಹ!

ಫೆಬ್ರವರಿ 14 (ಶುಕ್ರವಾರ) ನಡೆದಿದ್ದ ಫೈನಲ್ ಪಂದ್ಯದಲ್ಲಿ 34 ಎಸೆತಗಳಲ್ಲಿ 29 ರನ್ ಬಾರಿಸಿದ್ದ ಬಾಬರ್ ಆಝಮ್, ನ್ಯೂಜಿಲೆಂಡ್‌ನ ಬೌಲರ್ ನೇಥನ್‌ ಸ್ಮಿತ್‌ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚ್‌ ಕೊಟ್ಟ ನಿರ್ಗಮಿಸಿದ್ದರು. ತ್ರಿಕೋನ ಸರಣಿಯಲ್ಲಿ ಸೈಬ್ ಆಯುಬ್ ಅನುಪಸ್ಥಿತಿಯಲ್ಲಿ ಬಾಬರ್ ಆಝಮ್ ಇನಿಂಗ್ಸ್ ಆರಂಭಿಸಿದ್ದರು.

ಬಾಬರ್ ಆಝಮ್ 3ನೇ ಕ್ರಮಾಂಕದಲ್ಲಿ ಆಡಲಿ: ಮೊಹಮ್ಮದ್ ಹಫೀಝ್‌

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮೊಹಮ್ಮದ್ ಹಫೀಜ್, " ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಾನ್ ಮಸೂದ್, ಇಮಾಮ್ ಉಲ್ ಹಕ್ ಅಥವಾ ಅಬ್ದುಲ್ ಶಫೀಕ್ ಪೈಕಿ ಒಬ್ಬರು ಆರಂಭಿಕ ಆಟಗಾರನಾಗಿ ಆಡುವ ಜವಾಬ್ದಾರಿ ಹೊತ್ತುಕೊಳ್ಳಲಿ. ಬಾಬರ್ ಆಝಮ್ ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ, ಆಗ ತಂಡದ ಸಂಗತಿಗಳು ಸುಲಭವಾಗುತ್ತದೆ " ಎಂದು ಮಾಜಿ ನಾಯಕ ಹೇಳಿದ್ದಾರೆ.

ICC Champions Trophy: ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸಬೇಡಿ ಎಂದ ಶಾಹಿದ್‌ ಅಫ್ರಿದಿ!

ಬಾಬರ್ ಆಝಮ್ ಉತ್ತಮ ಆಟಗಾರ: ಮೊಹಮ್ಮದ್ ರಿಝ್ವಾನ್

ಪಾಕಿಸ್ತಾನದ ಪರ ಟಿ20 ಕ್ರಿಕೆಟ್‌ನಲ್ಲಿ ಬಾಬರ್ ಆಝಮ್ ಸಾಕಷ್ಟು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದಾರೆ, ಅಲ್ಲದೆ ಅವರು ಉತ್ತಮ ಆಟಗಾರ. ಆದ್ದರಿಂದ ತ್ರಿಕೋನ ಸರಣಿಯಲ್ಲಿ ಫಖಾರ್ ಝಮಾನ್‌ ಹಾಗೂ ಬಾಬರ್ ಆಝಮ್‌ಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಿದ್ದೆವು ಎಂದು ನಾಯಕ ಮೊಹಮ್ಮದ್‌ ರಿಝ್ವಾನ್‌ ಹೇಳಿದ್ದಾರೆ.

"ತ್ರಿಕೋನ ಸರಣಿಯಲ್ಲಿ ಸೈಬ್ ಆಯುಬ್ ಅಲಭ್ಯತೆ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಆದ್ದರಿಂದ ತಂಡದಲ್ಲಿರುವ ಉತ್ತಮ ಆಟಗಾರ ಬಾಬರ್ ಆಝಮ್ ಅವರಿಂದ ಇನಿಂಗ್ಸ್ ಆರಂಭಿಸಲು ಬಯಸಿದ್ದೆವು. ದಕ್ಷಿಣ ಆಫ್ರಿಕಾದ ಪಿಚ್‌ನಲ್ಲಿ ಅಬ್ದುಲ್ ಶಫೀಕ್, ಚೆಂಡು ಹೆಚ್ಚು ತಿರುವು ಪಡೆದಾಗ ಸುಲಭವಾಗಿ ವಿಕೆಟ್ ಒಪ್ಪಿಸಿದ್ದರು. ಆದ್ದರಿಂದ ಚೆಂಡಿನೊಂದಿಗೆ ಯಾವ ಹಂತದಲ್ಲಿ ಸುಲಭವಾಗಿ ವ್ಯವಹರಿಸಬಲ್ಲ ಬಾಬರ್ ಆಝಮ್ ಗೆ ಆರಂಭಿಕನ ಪಾತ್ರ ನೀಡಿದೆವು. ವೇಗದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸುವ ಕಲೆ ಬಾಬರ್ ಆಝಮ್ ಹೊಂದಿದ್ದಾರೆ," ಎಂದು ಮೊಹಮ್ಮದ್‌ ರಿಝ್ವಾನ್‌ ತಿಳಿಸಿದ್ದಾರೆ.