#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಎರಡನೇ ಟಿ20ಐ ವರುಣ್‌ ಚಕ್ರವರ್ತಿಗೆ ಅತ್ಯಂತ ಭಾವನಾತ್ಮಕ ಪಂದ್ಯ! ಇದಕ್ಕೆ ಕಾರಣ ಏನು?

ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ವರುಣ್ ಚಕ್ರವರ್ತಿ (23ಕ್ಕೆ3) ಪಂದ್ಯ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಶನಿವಾರ (ಜನವರಿ 24) ಚೆನ್ನೈನಲ್ಲಿ ಎರಡನೇ ಪಂದ್ಯ ನಡೆಯಲಿದ್ದು ಕುಟುಂಬದ ಸದಸ್ಯರ ಮುಂದೆ ಆಡಲು ಎದುರು ನೋಡುತ್ತಿದ್ದೇನೆ ಎಂದು ವರುಣ್‌ ಚಕ್ರವರ್ತಿ ತಿಳಿಸಿದ್ದಾರೆ.

ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ವರುಣ್‌ ಚಕ್ರವರ್ತಿ ಹೇಳಿದ್ದೇನು?

Varun Chakravarthy on 2nd T20I Match

Profile Ramesh Kote Jan 24, 2025 5:11 PM

ಚೆನ್ನೆ: ತವರು ಅಂಗಣದಲ್ಲಿ ತಮ್ಮ ಕುಟುಂಬದ ಎದುರು ಆಡಲು ಎದುರು ನೋಡುತ್ತಿದ್ದೇನೆಂದು ಭಾರತ ತಂಡದ ಸ್ಪಿನ್ನರ್‌ ವರುಣ್ ಚಕ್ರವರ್ತಿ (Varun Chakravarthy) ಸಂತಸ ವ್ಯಕ್ತಪಡಿಸಿದ್ದಾರೆ. ಶನಿವಾರ (ಜನವರಿ 25) ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಟಿ20ಐ (IND vs ENG) ಪಂದ್ಯ ನಡೆಯಲಿದೆ. ಕೋಲ್ಕತ್ತಾದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಪಂದ್ಯ ಶ್ರೇಷ್ಠ ಪ್ರದರ್ಶನ ತೋರಿದ್ದರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ತಮ್ಮ ಪಾಲಿನ 4 ಓವರ್‌ಗಳಲ್ಲಿ 23 ರನ್ ನೀಡಿ ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ಸ್ಪೋಟಕ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದು ಇಂಗ್ಲೆಂಡ್ ಅನ್ನು 132 ರನ್‌ಗಳಿಗೆ ನಿಯಂತ್ರಿಸಿದ್ದರು. ಬಳಿಕ ಗುರಿ ಹಿಂಬಾಲಿಸಿದ ಸೂರ್ಯಕುಮಾರ್ ಯಾದವ್ ಪಡೆ 12.5 ಓವರ್‌ಗಳಲ್ಲಿ ಗೆಲುವಿನ ದಡ ತಲುಪಿತು.

Ind vs Eng 2nd T20I: ದ್ವಿತೀಯ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ

ಕುಟುಂಬದ ಎದುರು ಆಡಲು ಎದುರು ನೋಡುತ್ತಿದ್ದೇನೆ: ವರುಣ್ ಚಕ್ರವರ್ತಿ

ಚೆನ್ನೈನಲ್ಲಿ ನಡೆಯಲಿರುವ ಎರಡನೇ ಪಂದ್ಯದ ಅಂಗವಾಗಿ ಬಿಸಿಸಿಐ ಅಪ್ ಲೋಡ್ ಮಾಡಿರುವ ವಿಡಿಯೋದಲ್ಲಿ ವರುಣ್ ಚಕ್ರವರ್ತಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

"ನಾವು ಈಗ ಮುಂದಿನ ಪಂದ್ಯವಾಡಲು ಚೆನ್ನೈಗೆ ಪಯಣ ಬೆಳೆಸುತ್ತಿದ್ದು, ತವರು ಅಂಗಣದಲ್ಲಿ ಟೀಮ್ ಇಂಡಿಯಾ ಪರ ಮೊದಲ ಪಂದ್ಯ ಆಡುತ್ತಿದ್ದೇನೆ. ತಮ್ಮ ಪೋಷಕರು ಹಾಗೂ ಕುಟುಂಬದವರು ಈ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದು ಅವರ ಮುಂದೆ ಆಡಲು ಎದುರು ನೋಡುತ್ತಿದ್ದೇನೆ," ಎಂದು ವರುಣ್ ಚಕ್ರವರ್ತಿ ತಿಳಿಸಿದ್ದಾರೆ.



ಸ್ಥಾನ ಕಳೆದುಕೊಂಡಿದ್ದ ಸ್ಪಿನ್ನರ್

2021ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಟಿ20 ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪರ್ದಾಪಣೆ ಮಾಡಿದ್ದ ವರುಣ್ ಚಕ್ರವರ್ತಿ, ಅದೇ ವರ್ಷ ನಡೆದ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಆಡಿದ 3 ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ಎಡವಿದ್ದ ಕಾರಣ ಅವರು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು.

ಐಪಿಎಲ್‌ನಲ್ಲಿ ಮಿಂಚು

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುವ ವರುಣ್ ಚಕ್ರವರ್ತಿ 2023 (20 ವಿಕೆಟ್) ಹಾಗೂ 2024 (21 ವಿಕೆಟ್)ರ ಟೂರ್ನಿಯಲ್ಲಿ ಮಿಂಚಿದ್ದರು. 2024ರಲ್ಲಿ ಕೆಕೆಆರ್‌ ಚಾಂಪಿಯನ್‌ ಆಗುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು.

ವರುಣ್‌ ಚಕ್ರವರ್ತಿಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡಬೇಕಿತ್ತು: ದಿನೇಶ್ ಕಾರ್ತಿಕ್!

ಬಲವಾಗಿ ಕಮ್‌ಬ್ಯಾಕ್ ಮಾಡಿದ ವರುಣ್

ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾಗೆ ಬಲವಾಗಿ ಕಮ್ ಬ್ಯಾಕ್ ಮಾಡಿರುವ ವರುಣ್ ಚಕ್ರವರ್ತಿ, ಮಧ್ಯಮ ಹಾಗೂ ಡೆತ್ ಓವರ್‌ಗಳಲ್ಲಿ ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವು ನೀಡಿದ್ದರು. ಕಳೆದ 8 ಪಂದ್ಯಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಸಾಧನೆ ಸೇರಿದಂತೆ 7.31ರ ಸರಾಸರಿಯಲ್ಲಿ 20 ವಿಕೆಟ್‌ಗಳನ್ನು ವರುಣ್ ಚಕ್ರವರ್ತಿ ಪಡೆದಿದ್ದರು.