#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BANWU19 vs INDWU19: ಸೂಪರ್‌-6ನಲ್ಲೂ ಭಾರತದ ಗೆಲುವಿನ ಸಿಕ್ಸರ್‌

ಚೇಸಿಂಗ್‌ ವೇಳೆ ಗೊಂಗಡಿ ತ್ರಿಷಾ 40 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 8 ಬೌಂಡರಿ ಸಿಡಿಯಿತು. ಅಂತಿಮವಾಗಿ ಸಾನಿಕಾ ಚಲ್ಕೆ(11) ಮತ್ತು ನಾಯಕಿ ನಿಕಿ ಪ್ರಸಾದ್‌(3) ಅಜೇಯ ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿದರು.

BANWU19 vs INDWU19: ಸೂಪರ್‌-6ನಲ್ಲೂ ಭಾರತದ ಗೆಲುವಿನ ಸಿಕ್ಸರ್‌

India Women U19

Profile Abhilash BC Jan 26, 2025 4:55 PM

ಕೌಲಾಲಂಪುರ: ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿನ ನಾಗಲೋಟ ಸೂಪರ್‌-6 ಹಂತಕ್ಕೂ ವಿಸ್ತರಿಸಿದೆ. ಭಾನುವಾರ ನಡೆದ ಬಾಂಗ್ಲಾದೇಶ(BANWU19 vs INDWU19) ವಿರುದ್ಧದ ಸೂಪರ್‌-6 ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 64 ರನ್‌ ಬಾರಿಸಿತು. ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 7.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 66 ರನ್‌ ಬಾರಿಸಿ ಗೆಲುವು ದಾಖಲಿಸಿತು. ಮುಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಜ.28 ರಂದು ನಡೆಯಲಿದೆ.

ಚೇಸಿಂಗ್‌ ವೇಳೆ ಗೊಂಗಡಿ ತ್ರಿಷಾ 40 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 8 ಬೌಂಡರಿ ಸಿಡಿಯಿತು. ಅಂತಿಮವಾಗಿ ಸಾನಿಕಾ ಚಲ್ಕೆ(11) ಮತ್ತು ನಾಯಕಿ ನಿಕಿ ಪ್ರಸಾದ್‌(3) ಅಜೇಯ ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿದರು.

ಭಾರತ ಪರ ಬೌಲಿಂಗ್‌ನಲ್ಲಿ ವೈಷ್ಣವಿ ಶರ್ಮಾ 15 ರನ್‌ಗೆ 3 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಾಂಗ್ಲಾ ತಂಡಕ್ಕೆ ಆಸರೆಯಾದದ್ದು ನಾಯಕಿ ಸುಮಿಯಾ ಅಕ್ತರ್. 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಇವರು ಅಜೇಯ 21 ರನ್‌ ಗಳಿಸಿದರು.

ಇದನ್ನೂ ಓದಿ IND vs ENG: ಅರ್ಧಶತಕ ಸಿಡಿಸಿ ಸೋಲಂಚಿನಲ್ಲಿದ್ದ ಭಾರತವನ್ನು ಗೆಲ್ಲಿಸಿದ ತಿಲಕ್‌ ವರ್ಮಾ!

ಸಂಕ್ಷಿಪ್ತ ಸ್ಕೋರ್‌

ಬಾಂಗ್ಲಾದೇಶ: 8 ವಿಕೆಟ್‌ಗೆ 64; (ಸುಮಿಯಾ ಅಕ್ತರ್ 21*, ಜನ್ನತುಲ್ ಮೌವಾ 14, ವೈಷ್ಣವಿ ಶರ್ಮಾ 15ಕ್ಕೆ 2).

ಭಾರತ: 2 ವಿಕೆಟ್‌ಗೆ 66; (ಗೊಂಗಡಿ ತ್ರಿಷಾ 40, ಸಾನಿಕಾ ಚಲ್ಕೆ11*, ನಿಕಿ ಪ್ರಸಾದ್‌ 3*, ಹಬೀಬಾ ಇಸ್ಲಾಂ ಪಿಂಕಿ 15 ಕ್ಕೆ 1.