ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Chalanachitra Academy: ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸದಸ್ಯರ ನೇಮಕ

Karnataka Chalanachitra Academy: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಯಮಾವಳಿಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಯ ಸದಸ್ಯರುಗಳನ್ನಾಗಿ ಸಾಮಾನ್ಯ ಸಮಿತಿಗೆ ರಾಜ್ಯ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ನೇಮಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸದಸ್ಯರ ನೇಮಕ

Profile Prabhakara R Feb 15, 2025 2:04 PM

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ (Karnataka Chalanachitra Academy) ಸಾಮಾನ್ಯ ಸಮಿತಿಗೆ ನೂತನ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದ ಪ್ರತಿನಿಧಿಗಳನ್ನು ಸಾಮಾನ್ಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಿರಿಯ ಪತ್ರಕರ್ತರಾದ ಸಾವಿತ್ರಿ ಮಜುಂದಾರ್‌, ಚಿದಾನಂದ ಪಟೇಲ್‌, ಸಿನಿಮಾ ವಿಶ್ಲೇಷಕ ದೇಶಾದ್ರಿ. ಎಚ್‌, ಸಿನಿಮಾ ಕಲಾವಿದೆ ನಿಖಿತಾಸ್ವಾಮಿ. ಎಸ್‌, ಸಿನಿಮಾ ಪ್ರಚಾರಕರಾದ ಡಿ.ಜಿ.ವೆಂಕಟೇಶ್‌, ಚಿತ್ರೋದ್ಯಮಿ ವಿಷ್ಣು ಕುಮಾರ್‌. ಎಸ್‌ ಹಾಗೂ ಸಿನಿಮಾ ತಂತ್ರಜ್ಞ ಐವಾನ್‌ ಡಿಸಿಲ್ವ ಅವರನ್ನು ನೂತನ ಸದಸ್ಯರನ್ನಾಗಿ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ.ಜೆಸಿಂತ ಆದೇಶ ಹೊರಡಿಸಿದ್ದಾರೆ.

ನೂತನ ಸದಸ್ಯರ ಪಟ್ಟಿ

  1. ಸಾವಿತ್ರಿ ಮಜುಂದಾರ್‌, ಹಿರಿಯ ಪತ್ರಕರ್ತರು, ಬೆಂಗಳೂರು
  2. ಚಿದಾನಂದ ಪಟೇಲ್‌, ಹಿರಿಯ ಪತ್ರಕರ್ತರು, ಬೆಂಗಳೂರು
  3. ದೇಶಾದ್ರಿ. ಎಚ್‌, ಸಿನಿಮಾ ವಿಶ್ಲೇಷಕ, ಶಿವಮೊಗ್ಗ
  4. ನಿಖಿತಾಸ್ವಾಮಿ. ಎಸ್‌, ಸಿನಿಮಾ ಕಲಾವಿದೆ, ಬೆಂಗಳೂರು
  5. ಡಿ.ಜಿ.ವೆಂಕಟೇಶ್‌, ಸಿನಿಮಾ ಪ್ರಚಾರಕರು, ಬೆಂಗಳೂರು
  6. ವಿಷ್ಣು ಕುಮಾರ್‌. ಎಸ್‌, ಚಿತ್ರೋದ್ಯಮಿ, ಮೈಸೂರು
  7. ಐವಾನ್‌ ಡಿಸಿಲ್ವ, ಸಿನಿಮಾ ತಂತ್ರಜ್ಞ, ಬೆಂಗಳೂರು

ಈ ಸುದ್ದಿಯನ್ನೂ ಓದಿ | Roopa Gururaj Column: ಮಾತಿಗಿರುವ ಮಹತ್ವವನ್ನು ಅರಿಯೋಣ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಯಮಾವಳಿಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಯ ಸದಸ್ಯರುಗಳನ್ನಾಗಿ ಸಾಮಾನ್ಯ ಸಮಿತಿಗೆ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ನೇಮಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅನ್ನು ಕರ್ನಾಟಕ ಸರ್ಕಾರವು 2009 ರಲ್ಲಿ ಕರ್ನಾಟಕದಲ್ಲಿ ಚಲನಚಿತ್ರ ಸಂಸ್ಕೃತಿಯನ್ನು ಉತ್ತೇಜಿಸಲು ರಚಿಸಿತು. ಅಕಾಡೆಮಿಯು ರಾಜ್ಯದಲ್ಲಿ ಆರೋಗ್ಯಕರ ಚಲನಚಿತ್ರ ಸಂಸ್ಕೃತಿಯನ್ನು ಬೆಳೆಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಮತ್ತು 'ಸಿನಿಮಾದಲ್ಲಿ ಶಿಕ್ಷಣ ಮತ್ತು ಶಿಕ್ಷಣದಲ್ಲಿ ಸಿನಿಮಾ' ಎಂಬ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ.