#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy: ಸ್ಟಾರ್‌ ಆಟಗಾರರನ್ನೊಳಗೊಂಡ ಮುಂಬೈಗೆ ಸೋಲುಣಿಸಿದ ಜಮ್ಮು-ಕಾಶ್ಮೀರ!

Mumbai vs Jammu & Kashmir Match Highlights: 2024-25ರ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡ, ಜಮ್ಮು ಮತ್ತು ಕಾಶ್ಮೀರ ಎದುರು ಹೀನಾಯ ಸೋಲು ಅನುಭವಿಸಿದೆ. ಅರ್ಧಟೀಮ್‌ ಇಂಡಿಯಾ ಆಟಗಾರರೇ ಒಳಗೊಂಡಿರುವ ಮುಂಬೈ ತಂಡ 5 ವಿಕೆಟ್‌ಗಳಿಂದ ಪರಾಭವಗೊಂಡಿವೆ.

ರೋಹಿತ್‌ ಶರ್ಮಾ ಒಳಗೊಂಡ ಮುಂಬೈಗೆ ಶಾಕ್‌ ನೀಡಿದ ಜಮ್ಮು & ಕಾಶ್ಮೀರ!

Jammu and Kashmir won by 5 wkts

Profile Ramesh Kote Jan 25, 2025 5:54 PM

ಮುಂಬೈ: ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಸೇರಿ ಭಾರತದ ಸ್ಟಾರ್‌ ಆಟಗಾರರನ್ನು ಒಳಗೊಂಡ ಮುಂಬೈ ತಂಡ 2024-25ರ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು & ಕಾಶ್ಮೀರ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಮುಂಬೈನ ಬಿಕೆಸಿ ಶರದ್‌ ಪವಾರ್‌ ಸ್ಟೇಡಿಯಂನಲ್ಲಿ ನಡೆದಿದ್ದ ಎಲೈಟ್‌ ಎ ಗುಂಪಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ಜಮ್ಮು-ಕಾಶ್ಮೀರ ತಂಡ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿದೆ.

ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ, ನಾಲ್ಕನೇ ಇನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 205 ರನ್‌ಗಳ ಗುರಿಯನ್ನು ನೀಡಿತ್ತು. ಬ್ಯಾಟಿಂಗ್‌ಗೆ ಕಷ್ಟಕರವಾದ ವಿಕೆಟ್‌ನಲ್ಲಿ ಈ ರನ್‌ಗಳನ್ನು ಗಳಿಸುವುದು ಸುಲಭವಾಗಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಬ್ಯಾಟ್ಸ್‌ಮನ್‌ಗಳು 4ಕ್ಕಿಂತ ಹೆಚ್ಚು ರನ್ ರೇಟ್‌ನಲ್ಲಿ ಬ್ಯಾಟ್ ಮಾಡಿ 49ನೇ ಓವರ್‌ನಲ್ಲಿ ಪಂದ್ಯವನ್ನು ಗೆದ್ದುಕೊಂಡರು. ಆರಂಭಿಕ ಬ್ಯಾಟ್ಸ್‌ಮನ್‌ ಶುಭಂ ಖಜುರಿಯಾ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 45 ರನ್‌ಗಳ ಗರಿಷ್ಠ ಕೊಡುಗೆ ನೀಡಿದರು. ವಿವರಂತ್ ಶರ್ಮಾ 38 ರನ್ ಮತ್ತು ಅಬಿದ್ ಮುಷ್ತಾಕ್ 32 ರನ್ ಗಳಿಸಿದರು. ಮುಂಬೈ ಪರ ಶ್ಯಾಮ್ಸ್ ಮುಲಾನಿ 4 ವಿಕೆಟ್ ಪಡೆದರು.

Ranji Trophy: ಶುಭಮನ್‌ ಗಿಲ್‌ ಶತಕ ವ್ಯರ್ಥ, ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಜಯ!

ಶಾರ್ದೂಲ್ ಮತ್ತು ಕೋಟಿಯನ್‌ 184 ರನ್ ಜೊತೆಯಾಟ

ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್‌ಗಳು ಅದ್ಭುತ ಪ್ರದರ್ಶನ ತೋರಿದರು. ಜಮ್ಮು-ಕಾಶ್ಮೀರ ತಂಡದ ಬೌಲರ್‌ಗಳು ಪ್ರಥಮ ಇನಿಂಗ್ಸ್‌ನಲ್ಲಿ ಮುಂಬೈ ತಂಡವನ್ನು ಕೇವಲ 120 ರನ್‌ಗಳಿಗೆ ಆಲ್‌ಔಟ್‌ ಮಾಡಿದ್ದರು. ಇದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ತಂಡ 206 ರನ್ ಗಳಿಸಿ 86 ರನ್‌ಗಳ ಮುನ್ನಡೆಯನ್ನು ಪಡೆದಿತ್ತು.



ನಂತರ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಮುಂಬೈ ತಂಡ ಒಂದು ಹಂತದಲ್ಲಿ 101 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆ ಮೂಲಕ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಶಾರ್ದುಲ್‌ ಠಾಕೂರ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದರು. ಇವರಿಗೆ ತನುಷ್ ಕೋಟಿಯನ್‌ ಅದ್ಭುತ ಸಾಥ್‌ ನೀಡಿದ್ದರು. ಇವರಿಬ್ಬರೂ 8ನೇ ವಿಕೆಟ್‌ಗೆ 184 ರನ್‌ಗಳ ಜೊತೆಯಾಟವಾಡುದ್ದರು. ಆ ಮೂಲಕ ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಮುಂಬೈ ತಂಡವನ್ನು ಮೇಲೆತ್ತಿದ್ದರು.



ಭರ್ಜರಿ ಶತಕ ಸಿಡಿಸಿದ್ದ ಶಾರ್ದುಲ್‌ ಠಾಕೂರ್‌

ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಶಾರ್ದುಲ್‌ ಠಾಕೂರ್‌ 135 ಎಸೆತಗಳಲ್ಲಿ 119 ರನ್ ಗಳಿಸಿ ತಮ್ಮ ಪ್ರಥಮ ದರ್ಜೆ ವೃತ್ತಿ ಜೀವನದಲ್ಲಿ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ತನುಷ್‌ ಕೋಟಿಯನ್‌ ತಂಡಕ್ಕೆ 62 ರನ್‌ಗಳ ಕೊಡುಗೆಯನ್ನು ನೀಡಿದರು. ಆದರೆ, ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಮುಂಬೈನ ಉಳಿದ ಮೂರು ವಿಕೆಟ್‌ಗಳು 5 ರನ್‌ಗಳ ಅಂತರದಲ್ಲಿ ಪತನಗೊಂಡವು. ಈ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಗೆಲುವಿಗೆ 205 ರನ್‌ಗಳ ಗುರಿ ಪಡೆದಿತ್ತು. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದ ಯುಧ್ವೀರ್‌ ಸಿಂಗ್ ಚರಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌ ವಿವರ

ಮುಂಬೈ

ಪ್ರಥಮ ಇನಿಂಗ್ಸ್‌: 120-10

ದ್ವಿತೀಯ ಇನಿಂಗ್ಸ್‌: 290-10 (ಶಾರ್ದುಲ್‌ ಠಾಕೂರ್‌ 119, ತನುಷ್‌ ಕೋಟಿಯನ್‌ 62; ಆಕಿಬ್‌ ನಬಿ 80ಕ್ಕೆ 4, ಯುಧ್ವೀರ್‌ ಸಿಂಗ್‌ ಚರಕ್‌ 64ಕ್ಕೆ 3)

ಜಮ್ಮು ಮತ್ತು ಕಾಶ್ಮೀರ

ಪ್ರಥಮ ಇನಿಂಗ್ಸ್‌: 206-10

ದ್ವಿತೀಯ ಇನಿಂಗ್ಸ್‌: 207-5 (ಶುಭಮ್‌ ಖಜೂರಿಯಾ 45, ವಿವ್ರಂತ್‌ ಶರ್ಮಾ 38; ಶ್ಯಾಮ್ಸ್‌ ಮುಲಾನಿ 54ಕ್ಕೆ 4)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಯುಧ್ವೀರ್‌ ಸಿಂಗ್‌ ಮುಲಾನಿ