ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Champions Trophy: ಆಫ್ಘನ್‌ ಎದುರು ಗೆದ್ದು ಶುಭಾರಂಭ ಮಾಡಿದ ದಕ್ಷಿಣ ಆಫ್ರಿಕಾ!

SA vs AFG Match Highlight: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಬಿ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 107 ರನ್‌ಗಳಿಂದ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 315 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ 208 ರನ್‌ಗಳಿಗೆ ಆಲೌಟ್ ಆಯಿತು.

SA vs AFG: ರಯಾನ್‌ ರಿಕೆಲ್ಟನ್‌ ಶತಕದ ಬಲದಿಂದ ಗೆದ್ದ ದಕ್ಷಿಣ ಆಫ್ರಿಕಾ!

ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ರಯಾನ್‌ ರಿಕೆಲ್ಟನ್‌ ಶತಕ ಸಿಡಿಸಿ ಸಂಭ್ರಮಿಸಿದರು.

Profile Ramesh Kote Feb 22, 2025 12:15 AM

ಕರಾಚಿ: ರಯಾನ್‌ ರಿಕೆಲ್ಟನ್‌ (103 ರನ್‌) ಶತಕ ಹಾಗೂ ಕಗಿಸೊ ರಬಾಡ (36 ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 107 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 50 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಶತಕ ಸಿಡಿಸಿದ ರಯಾನ್‌ ರಿಕೆಲ್ಟನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾದರು.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 315 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ 43.3 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಸೋಲು ಅನುಭವಿಸಿತು.

IND vs BAN: 5 ವಿಕೆಟ್‌ ಕಿತ್ತು ಪ್ಲೈಯಿಂಗ್‌ ಕಿಸ್‌ ನೀಡಲು ಕಾರಣ ತಿಳಿಸಿದ ಶಮಿ!

ಶುಕ್ರವಾರ ಇಲ್ಲಿನ ನ್ಯಾಷನಲ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 316 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಕೇವಲ 10 ರನ್ ಗಳಿಸಿ ಔಟಾದರು. ಇಬ್ರಾಹಿಂ ಝರ್ಡಾನ್‌ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲಿಲ್ಲ ಮತ್ತು 17 ರನ್ ಗಳಿಸಿ ಔಟಾದರು, ಆದರೆ ಸೇದಿಕುಲ್ಲಾ ಅಟಲ್ 16 ರನ್ ಗಳಿಸಿ ಔಟಾದರು.



ಆದರೆ, ಅಫ್ಘಾನಿಸ್ತಾನದ ರಹಮತ್ ಶಾ ಸ್ವಲ್ಪ ಸಮಯದವರೆಗೆ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಎದುರಿಸಿ 90 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ, ಅನುಭವಿ ಆಟಗಾರರಾದ ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಕೂಡ ಆಟಕ್ಕೆ ಇಳಿದು ಅಫ್ಘಾನಿಸ್ತಾನದ ಭರವಸೆಯನ್ನು ಸ್ವಲ್ಪ ಸಮಯದವರೆಗೆ ಜೀವಂತವಾಗಿಡಲು ಪ್ರಯತ್ನಿಸಿದರು, ಆದರೆ ಅದು ಗೆಲುವಿಗೆ ಸಾಕಾಗಲಿಲ್ಲ.

ದಕ್ಷಿಣ ಆಫ್ರಿಕಾ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಕಗಿಸೊ ರಬಾಡ 3 ವಿಕೆಟ್‌ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ವಿಯಾನ್‌ ಮುಲ್ಡರ್‌ ತಲಾ ಎರಡು ವಿಕೆಟ್‌ ಪಡೆದರು.



ಭರ್ಜರಿ ಶತಕ ಸಿಡಿಸಿದ ರಯಾನ್‌ ರಿಕೆಲ್ಟನ್‌

ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ತಂಡದ ಪರ ರಯಾನ್ ರಿಕೆಲ್ಟನ್ 101 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ರಿಕೆಲ್ಟನ್ ಅವರ ಮೊದಲ ಶತಕವಾಗಿದೆ. ರಿಕೆಲ್ಟನ್ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವೂಮ 76 ಎಸೆತಗಳಲ್ಲಿ 58 ರನ್ ಗಳಿಸಿದರು. ರಾಸಿ ವ್ಯಾನ್ ಡೆರ್ ಡುಸೆನ್ ಮತ್ತು ಏಡೆನ್ ಮಾರ್ಕ್ರಮ್ 52-52 ರನ್‌ಗಳ ಇನಿಂಗ್ಸ್ ಆಡಿದರು. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡ 315 ರನ್‌ಗಳ ಸ್ಕೋರ್ ತಲುಪಲು ಸಾಧ್ಯವಾಯಿತು.

ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ಪರ ಮೊಹಮ್ಮದ್ ನಬಿ ಅತ್ಯಂತ ಯಶಸ್ವಿ ಬೌಲರ್‌ ಆದರು. ನಬಿ 10 ಓವರ್‌ಗಳಲ್ಲಿ 51 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಇದಲ್ಲದೆ, ಫಜಲ್ ಹಕ್ ಫಾರೂಕಿ, ಅಜ್ಮತ್‌ವುಲ್ಲಾ ಮತ್ತು ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರೆ, ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್ ಪಡೆಯಲಿಲ್ಲ.