IND vs BAN: 5 ವಿಕೆಟ್ ಕಿತ್ತು ಪ್ಲೈಯಿಂಗ್ ಕಿಸ್ ನೀಡಲು ಕಾರಣ ತಿಳಿಸಿದ ಶಮಿ!
Mohammed Shami on his 5 Wickets haul: ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಇದಾದ ಬಳಿಕ ಅವರು ಫ್ಲೈಯಿಂಗ್ ಕಿಸ್ ನೀಡಿ ಸಂಭ್ರಮಿಸಿದ್ದರು. ಈ ಬಗ್ಗೆ ಶಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮೊಹಮ್ಮದ್ ಶಮಿ

ದುಬೈ: ಬಾಂಗ್ಲಾದೇಶ ವಿರುದ್ಧ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಿದ ಬಳಿಕ ಫ್ಲೈಯಿಂಗ್ ಕಿಸ್ ನೀಡಲು ಕಾರಣವೇನೆಂದು ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಬಹಿರಂಗಪಡಿಸಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಕೊನೆಯ ಬಾರಿ ಭಾರತದ ಪರ 50 ಓವರ್‌ಗಳ ಪಂದ್ಯವನ್ನು ಆಡಿದ್ದರು. ಅಂದ ಹಾಗೆ ದೀರ್ಘಾವಧಿ ಬಳಿಕ ಅವರು ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ ಅವರು ಐದು ವಿಕೆಟ್ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಒಟ್ಟು 10 ಓವರ್‌ಗಳನ್ನು ಬೌಲ್ ಮಾಡಿದ್ದ ಶಮಿ 53 ರನ್‌ಗಳನ್ನು ನೀಡುವ ಮೂಲಕ 5 ವಿಕೆಟ್ ಸಾಧನೆ ಮಾಡಿದ್ದರು.
ಗುರುವಾರ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಶಮಿ, ತಮ್ಮ ಐದನೇ ವಿಕೆಟ್‌ಗೆ ಟಾಸ್ಕಿನ್ ಅಹ್ಮದ್ ಅವರನ್ನು ಔಟ್ ಮಾಡಿದ್ದರು. ಶಮಿ ಬೌಲಿಂಗ್‌ನಲ್ಲಿ ಮಿಡ್ ವಿಕೆಟ್ ತಲೆ ಮೇಲೆ ಚೆಂಡನ್ನು ಹೊಡೆಯಲು ಪ್ರಯತ್ನಿಸುವಲ್ಲಿ ಟಾಸ್ಕಿನ್ ಅಹ್ಮದ್ ವಿಫಲರಾದರು. ಆ ಮೂಲಕ ಶ್ರೇಯಸ್ ಅಯ್ಯರ್‌ಗೆ ಕ್ಯಾಚಿತ್ತರು. ಆ ಮೂಲಕ ಐದು ವಿಕೆಟ್ ಸಾಧನೆ ಮಾಡಿದ ಬಳಿಕ ಮೊಹಮ್ಮದ್ ಶಮಿ, ಆಕಾಶದತ್ತ ನೋಡಿಕೊಂಡು ಫ್ಲೈಯಿಂಗ್ ಕಿಸ್ ಕೊಟ್ಟರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮ್ಮ ತಂದೆಗೆ ಫ್ಲೈಯಿಂಗ್ ಕಿಸ್ ನೀಡಿದ್ದೇನೆಂದು ತಿಳಿಸಿದ್ದಾರೆ.
IND vs BAN: ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ್ದಕ್ಕೆ ಅಕ್ಷರ್ ಪಟೇಲ್ ಹೇಳಿದ್ದಿದು!
"ನಾನು ಫ್ಲೈಯಿಂಗ್ ಕಿಸ್ ನೀಡಿದ್ದು, ನನ್ನ ತಂದೆಗಾಗಿ...ಅವರೇ ನನ್ನ ರೋಲ್ ಮಾಡೆಲ್," ಎಂದು ಮೊಹಮ್ಮದ್ ಶಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2017ರ ಜನವರಿಯಲ್ಲಿ ಮೊಹಮ್ಮದ್ ಶಮಿ ಅವರ ತಂದೆ ತೌಸಿಪ್ ಅಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಭಾರತ ತಂಡ, ಎದುರಾಳಿ ಬಾಂಗ್ಲಾದೇಶ ತಂಡವನ್ನು 49.4 ಓವರ್‌ಗಳಿಗೆ 228 ರನ್‌ಗಳಿಗೆ ನಿಯಂತ್ರಿಸಿತ್ತು. ತಮ್ಮ ಬೌಲಿಂಗ್ ಮೊದಲ ಸ್ಪೆಲ್‌ನಲ್ಲಿ ಸೌಮ್ಯ ಸರ್ಕಾರ್ ಮತ್ತು ಮೆಹಡಿ ಹಸನ್ ಮಿರಾಜ್ ಅವರನ್ನು ಔಟ್ ಮಾಡಿದ್ದರೆ, ನಂತರ ಅವರು ಜಾಕಿರ್ ಅಲಿ, ತಂಝಿದ್ ಹಸನ್ ಸಕಿಬ್ ಹಾಗೂ ಟಾಸ್ಕಿನ್ ಅಹ್ಮದ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಾಶಸ್ವಿಯಾಗಿದ್ದರು.
Mohammed Shami now has 60 wickets*, the most by any Indian bowler in Champions Trophy and World Cups—achieved in just 19* innings, while others on the list have played 25+ innings.
— Vipin Tiwari (@Vipintiwari952) February 20, 2025
The man always delivers in ICC tournaments 🇮🇳
pic.twitter.com/xWaVnjCNLk
ಭಾರತ ತಂಡಕ್ಕೆ 6 ವಿಕೆಟ್ ಜಯ
ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಹಾಗೂ ಶುಭಮನ್ ಗಿಲ್ ಶತಕದ ಬಲದಿಂದ ಭಾರತ ತಂಡ, ಎದುರಾಳಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಕಂಡಿದೆ. ಶುಭಮನ್ ಅಜೇಯ 101 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs BAN: ಶುಭಮನ್ ಗಿಲ್ ಶತಕ, ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ!
ಭಾರತಕ್ಕೆ ಮುಂದಿನ ಎದುರಾಳಿ ಪಾಕಿಸ್ತಾನ
ಫೆಬ್ರವರಿ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧ ಗೆಲುವು ಪಡೆದ ಬಳಿಕ ಭಾರತ ತಂಡ ಟೂರ್ನಿಯ ಮೊದಲ ಗುಂಪಿನಲ್ಲಿ +0.408 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ 60 ರನ್‌ಗಳ ಗೆಲುವು ಪಡೆದಿದ್ದ ನ್ಯೂಜಿಲೆಂಡ್ ತಂಡ ಅತ್ಯುತ್ತಮ ರನ್‌ರೇಟ್‌ನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.