MLA Shivaram Hebbar: ವಿಮಾ ಕಂಪನಿಯ ಡೊಂಬರಾಟಕ್ಕೆ ಕೇಂದ್ರ ಕಡಿವಾಣ ಹಾಕಲಿ: ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ
ವಿಮೆ ಹೆಚ್ಚಿಗೆ ತುಂಬುವುದು ಬರುತ್ತದೆಂದು ವಿಮಾ ಕಂಪನಿಯವರು ಹೀಗೆ ಮಾಡುತ್ತಿದೆ. ಈಗಾ ಗಲೇ ಸಾಕಷ್ಟು ಸಭೆಗಳನ್ನು ಮಾಡಲಾಗಿದೆ. ಎಲ್ಲಿ ತೋಟದ ಬೆಳೆ ಇಲಗಲ ಅಲ್ಲಿ ಎಲ್ಲವೂ ಸರಿಯಾಗಿದೆ. ತೋಟದ ಬೆಳೆ ಇರುವಲ್ಲಿ ಮಾತ್ರ ಮಳೆ ಮಾಪನ ಸರಿ ಇಲ್ಲ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು

ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ

ಶಿರಸಿ: ಬೆಳೆ ವಿಮೆಗೆ ಸಂಬಂಧಿಸಿದಂತೆ ಯಾವ ಸರಕಾರ ಕಾರಣ ಎನ್ನುವ ದ್ವಂದ್ವ ಬೇಡ. 30 ಜಿಲ್ಲೆಯಲ್ಲಿ ವಿಮೆ ಆಗದೆ ಉತ್ತರ ಕನ್ನಡ ಮಾತ್ರ ಹೀಗಿರುವುದು. ಹೆಚ್ಚು ಮಳೆಯಾಗುವ ದಕ್ಷಿಣ ಕನ್ನಡದಲ್ಲಿ ಎಲ್ಲ ಸರಿಯಾಗಿದೆ. ವಿಮೆಯನ್ನು ಈಗಾಗಲೇ ತುಂಬಿಸಿಕೊಂಡಿದೆ. ವಿಮೆ ಹೆಚ್ಚಿಗೆ ತುಂಬುವುದು ಬರುತ್ತದೆಂದು ವಿಮಾ ಕಂಪನಿಯವರು ಹೀಗೆ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಸಭೆಗಳನ್ನು ಮಾಡಲಾಗಿದೆ. ಎಲ್ಲಿ ತೋಟದ ಬೆಳೆ ಇಲ್ಲ, ಅಲ್ಲಿ ಎಲ್ಲವೂ ಸರಿಯಾಗಿದೆ. ತೋಟದ ಬೆಳೆ ಇರುವಲ್ಲಿ ಮಾತ್ರ ಮಳೆಮಾಪನ ಸರಿ ಅಲ್ಲ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಇದನ್ನೂ ಓದಿ: Sirsi Breaking: ಎರಡನೇ ದಿನದ ಸಾಹಿತ್ಯ ಸಮ್ಮೇಳನ: ಶಾಸಕ ಭೀಮಣ್ಣ ನಾಯ್ಕ ಭಾಗಿ
ವಿಮಾ ಕಂಪನಿಯ ಡೊಂಬರಾಟಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕಬೇಕು. ವಿಮಾ ಕಂಪನಿಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸುವ ಹಕ್ಕು ಕೇಂದ್ರಕ್ಕಿದೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸಬೇಕಾದ್ದು ಜನಪ್ರತಿನಿಧಿಗಳ ಜವಾಬ್ದಾರಿ. ಇಲ್ಲಿ ರಾಜಕೀಯ ಸರಿಯಲ್ಲ. ರೈತರಿಗೆ ವಿಮೆ ಸಿಗುವಂತಾಗಬೇಕು. ಸಂಸದರೂ ಇದಕ್ಕೆ ಸಹಕರಿಸ ಬೇಕು. ಇದರಲ್ಲಿ ರೈತರಿಗೆ ನ್ಯಾಯ ಸಿಗಬೇಕಾದ್ದು ಅಂತಿಮ ಎಂದರು.
ಎರಡೂ ಸಣ್ಣ ಕಾರಣಗಳು. ಇದಕ್ಕೆ ಸಹಕರಿಸಿ ಒಟ್ಟಾರೆಯಾಗಿ ರೈತರಿಗೆ ನ್ಯಾಯ ಸಿಗುವುದೇ ಮುಖ್ಯ ಎಂದರು.