ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala Airport: ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ಮರಳಿ ತವರಿಗೆ ಕೊಂಡೊಯ್ಯಲು ಆಗಮಿಸಿದ ವಿಶೇಷ ತಂಡ

ಕಳೆದ ಮೂರು ವಾರಗಳಿಂದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ (British F-35 Fighter Jet) ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ( Kerala Airport) ಸಿಲುಕಿಕೊಂಡಿದ್ದು, ಇದನ್ನು ಮರಳಿ ಬ್ರಿಟನ್ ಗೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ. ಬ್ರಿಟಿಷ್ ತಂತ್ರಜ್ಞರು ಇದರಲ್ಲಿರುವ ದೋಷಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇದರ ದುರಸ್ತಿಗೆ ಎಂಜಿನಿಯರ್‌ಗಳ ತಂಡವು ಏರ್‌ಬಸ್ ಎ400ಎಂ ಅಟ್ಲಾಸ್ ವಿಮಾನದಲ್ಲಿ ಕೇರಳಕ್ಕೆ ಆಗಮಿಸಿದೆ.

ಶೀಘ್ರದಲ್ಲೇ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ಮರಳಿ ತವರಿಗೆ!

ತಿರುವನಂತಪುರಂ: ಕಳೆದ ಮೂರು ವಾರಗಳಿಂದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ (British F-35 Fighter Jet) ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ (Kerala Airport) ಸಿಲುಕಿಕೊಂಡಿದ್ದು, ಇದನ್ನು ಮರಳಿ ಬ್ರಿಟನ್ ಗೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ. ಬ್ರಿಟಿಷ್ ತಂತ್ರಜ್ಞರು ಇದರಲ್ಲಿರುವ ದೋಷಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇದರ ದುರಸ್ತಿಗೆ ಎಂಜಿನಿಯರ್‌ಗಳ ತಂಡವು ಏರ್‌ಬಸ್ ಎ400ಎಂ ಅಟ್ಲಾಸ್ ವಿಮಾನದಲ್ಲಿ (Airbus A400M Atlas aircraft) ಕೇರಳಕ್ಕೆ ಆಗಮಿಸಿದೆ. ಆದರೆ ದುರಸ್ತಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಸಿ-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸಾರಿಗೆ ವಿಮಾನದ ಸಹಾಯದಿಂದ ಅದನ್ನು ಮರಳಿ ತವರಿಗೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಗುತ್ತಿದೆ.

ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಮೂರು ವಾರಗಳಿಂದ ಸಿಲುಕಿಕೊಂಡಿರುವ ಬ್ರಿಟನ್ ನ ರಾಯಲ್ ನೇವಿಯ ಎಫ್ -35ಬಿ ಸ್ಟೆಲ್ತ್ ಫೈಟರ್ ಜೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಬ್ರಿಟಿಷ್ ತಂತ್ರಜ್ಞರು ಪ್ರಯತ್ನಿಸುತ್ತಿದ್ದಾರೆ. ಅವರು ಈ ಜೆಟ್ ಅನ್ನು ಸಿ-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸಾರಿಗೆ ವಿಮಾನದಲ್ಲಿ ಬ್ರಿಟನ್ ಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಹೊಸ ಎಂಜಿನಿಯರ್‌ಗಳ ತಂಡವು ಏರ್‌ಬಸ್ ಎ400ಎಂ ಅಟ್ಲಾಸ್ ವಿಮಾನದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದೆ.

ಈ ಎಂಜಿನಿಯರ್ ಗಳ ತಂಡವು ಅದನ್ನು ಇಲ್ಲೇ ದುರಸ್ತಿ ಮಾಡಬಹುದೇ ಅಥವಾ ಬ್ರಿಟನ್ ಗೆ ಕೊಂಡೊಯ್ಯಲು ಸರಕು ವಿಮಾನದೊಳಗೆ ಅಳವಡಿಸಬೇಕಾಗಬಹುದೇ ಎಂಬುದನ್ನು ಪರಿಗಣಿಸುತ್ತಿದ್ದಾರೆ.



ಎಫ್-35ಬಿ ಫೈಟರ್ ಜೆಟ್ ಸುಮಾರು 110 ಕೋಟಿ ರೂ. ಗಳಿಗಿಂತಲೂ ಹೆಚ್ಚು ದುಬಾರಿಯದ್ದಾಗಿದೆ. ಇದು ಅತ್ಯಂತ ದುಬಾರಿ ಫೈಟರ್ ಜೆಟ್ ಆಗಿದೆ. ಹೆಚ್ ಎಂಎಸ್ ಪ್ರಿನ್ಸ್ ಆಫ್ ವೇಲ್ಸ್‌ನ ಎಂಜಿನಿಯರ್‌ಗಳು ಇದರ ಪರಿಸ್ಥಿತಿಯನ್ನು ನೋಡಿ ಯುಕೆಯಿಂದ ಹೆಚ್ಚುವರಿ ತಾಂತ್ರಿಕ ಪರಿಣತಿ ಮತ್ತು ಉಪಕರಣಗಳು ಅಗತ್ಯವಿದೆ ಎಂದು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Murder Case: ಸಲಿಂಗ ಪ್ರೇಮ; ಹದಿಹರೆಯದ ಬಾಲಕನಿಗೆ ಪಾನೀಯದಲ್ಲಿ ವಿಷ ಬೆರೆಸಿ ಕೊಂದ ಯುವಕ!

ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಸ್ಟೆಲ್ತ್ ಫೈಟರ್ ಜೆಟ್ ನ ಸ್ಥಿತಿಗತಿಯ ಬಗ್ಗೆ ಬ್ರಿಟಿಷ್ ಮಿಲಿಟರಿ ಸೂಕ್ಷ್ಮವಾಗಿ ಗಮನಿಸಲಿದೆ. ಯಾಕೆಂದರೆ ಅವರು ಇದರ ಪ್ರತಿಯೊಂದು ನಡೆಯನ್ನೂ ಲಾಗ್ ಮಾಡಬೇಕು ಮತ್ತು ಪರಿಶೀಲಿಸಬೇಕು. ಇದರ ಡೇಟಾ ಉಲ್ಲಂಘನೆಯಾಗದಂತೆ ತಡೆಯಬೇಕಿದೆ. ಸ್ಟೆಲ್ತ್ ತಂತ್ರಜ್ಞಾನಗಳ ಕಳ್ಳತನವು ಯುದ್ಧ ರಹಸ್ಯಗಳನ್ನು ಬಹಿರಂಗಪಡಿಸಬಹುದು ಮತ್ತು ರಾಷ್ಟ್ರಕ್ಕೆ ಬೆದರಿಕೆ ಒಡ್ಡುವ ಸಾಧ್ಯತೆ ಇದೆ.