ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wimbledon 2025: ವಿಂಬಲ್ಡನ್‌ನಲ್ಲಿ ಶತಕದ ಗೆಲುವು ದಾಖಲಿಸಿದ ನೊವಾಕ್ ಜೊಕೊವಿಕ್

Novak Djokovic: ಸೋಮವಾರ ನಡೆಯುವ 16 ರ ಸುತ್ತಿನ ಪಂದ್ಯದಲ್ಲಿ ಅಲೆಕ್ಸ್‌ಡಿ ಮಿನೌರ್ ಅವರ ಸವಾಲು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಐಗಾ ಸ್ವಿಯಾಟೆಕ್‌ ಕೂಡ ಮೂರನೇ ಸುತ್ತಿನಲ್ಲಿ ಗೆಲುವು ಸಾಧಿಸಿ 16 ರ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೆಜ್ಸಿಕೋವಾ ಮೂರನೇ ಸುತ್ತಿನಲ್ಲಿ ಸೋತು ವಿಂಬಲ್ಡನ್‌ನಿಂದ ಹೊರಬಿದ್ದರು.

ವಿಂಬಲ್ಡನ್‌ನಲ್ಲಿ ಶತಕದ ಗೆಲುವು ದಾಖಲಿಸಿದ ನೊವಾಕ್ ಜೊಕೊವಿಕ್

Profile Abhilash BC Jul 6, 2025 7:29 PM

ಲಂಡನ್‌: ನೊವಾಕ್ ಜೊಕೊವಿಕ್(Novak Djokovic) ವಿಂಬಲ್ಡನ್(Wimbledon 2025) ಇತಿಹಾಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಸಹ ಆಟಗಾರ ಮಿಯೋಮಿರ್ ಕೆಕ್ಮಾನೋವಿಕ್ ವಿರುದ್ಧ 6-3, 6-0, 6-4 ಸೆಟ್‌ಗಳಿಂದ ಸೋಲಿಸಿ 16 ರ ಸುತ್ತಿಗೆ ಮುನ್ನಡೆದರು. ಈ ಗೆಲುವಿನೊಂದಿಗೆ ಜೊಕೊವಿಕ್ ವಿಂಬಲ್ಡನ್‌ನಲ್ಲಿ 100 ಗೆಲುವುಗಳನ್ನು ದಾಖಲಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಮಾರ್ಟಿನಾ ನವ್ರಾಟಿಲೋವಾ ಮತ್ತು ರೋಜರ್ ಫೆಡರರ್ ಮೊದಲಿಗರು. ಒಂಬತ್ತು ಬಾರಿ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಆಗಿರುವ ನವ್ರಾಟಿಲೋವಾ 120 ಸಿಂಗಲ್ಸ್ ಪಂದ್ಯಗಳನ್ನು ಗೆದ್ದರೆ, ಫೆಡರರ್ 105 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಅನುಭವಿ ಆಟಗಾರ ಜೊಕೊವಿಕ್ ಅವರು ದ್ವಿತೀಯ ಸೆಟ್‌ನಲ್ಲಿ ಎದುರಾಳಿಗೆ ಒಂದೇ ಒಂದು ಅಂಕ ಬಿಟ್ಟುಕೊಡದೆ ಈ ಸೆಟ್‌ ಗೆಲ್ಲುವ ಮೂಲಕ ಅಪರೂಪದ ಸಾಧನೆಯೊಂದನ್ನು ಮಾಡಿದರು. ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ 51 ಬ್ಯಾಗಲ್‌ಗಳನ್ನು ಸರ್ವ್ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜೊಕೊವಿಕ್ ಪಾತ್ರರಾದರು. ಈ ಮೂಲಕ 50 ಬ್ಯಾಗಲ್‌ಗಳನ್ನು ಹೊಂದಿದ್ದ ಆಂಡ್ರೆ ಅಗಾಸ್ಸಿ ಅವರ ದಾಖಲೆಯನ್ನು ಮುರಿದರು.

ಸೋಮವಾರ ನಡೆಯುವ 16 ರ ಸುತ್ತಿನ ಪಂದ್ಯದಲ್ಲಿ ಅಲೆಕ್ಸ್‌ಡಿ ಮಿನೌರ್ ಅವರ ಸವಾಲು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಐಗಾ ಸ್ವಿಯಾಟೆಕ್‌ ಕೂಡ ಮೂರನೇ ಸುತ್ತಿನಲ್ಲಿ ಗೆಲುವು ಸಾಧಿಸಿ 16 ರ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೆಜ್ಸಿಕೋವಾ ಮೂರನೇ ಸುತ್ತಿನಲ್ಲಿ ಸೋತು ವಿಂಬಲ್ಡನ್‌ನಿಂದ ಹೊರಬಿದ್ದರು.

ಇದನ್ನೂ ಓದಿ Wimbledon: ಮೂರನೇ ಸುತ್ತು ಪ್ರವೇಶಿಸಿದ ಜೊಕೊ, ಅಲ್ಕರಾಜ್‌

ಅಮೆರಿಕದ 10ನೇ ಶ್ರೇಯಾಂಕದ ಆಟಗಾರ್ತಿ ಎಮ್ಮಾ ನವರೊ ವಿರುದ್ಧ 2-6, 6-3, 6-4 ಸೆಟ್‌ಗಳಿಂದ ಸೋತರು. ಸ್ವಿಯಾಟೆಕ್‌ ಅವರು ಡೇನಿಯಲ್ ಕಾಲಿನ್ಸ್ ಎದುರು 6-2, 6-3 ನೇರ ಸೆಟ್‌ಗಳಿಂದ ಗೆದ್ದು ಬೀಗಿದರು.