Viral News: ಪತಿಯ ಮುಖಕ್ಕೇ ಬೇಲಿ – ಸಿಗರೇಟ್ ಚಟ ಬಿಡಿಸೋಕೆ ಪತ್ನಿಯ ಮಾಸ್ಟರ್ ಪ್ಲ್ಯಾನ್! ಹೇಗಿದೆ ಈ ಐಡಿಯಾ? ನೀವೇ ಹೇಳಿ..!
ಯಾವುದಾದರೊಂದು ಚಟವನ್ನು ಮೈಗಂಟಿಸಿಕೊಳ್ಳುವುದು ಸುಲಭ.. ಆದರೆ ಅದರಿಂದ ಹೊರಬರುವುದು ತುಂಬಾನೇ ಕಷ್ಟ.. ಇದಕ್ಕೆ ಸಂಬಂಧಿಸಿದ ವಿಚಿತ್ರ ಸುದ್ದಿಯೊಂದು ಇಲ್ಲಿದೆ ಓದಿ. ಟರ್ಕಿ ದೇಶದ ಇಬ್ರಾಹಿಂ ಯೂಸೆಲ್ ಎಂಬಾತ ತನಗಿದ್ದ ವಿಪರೀತ ಧೂಮಪಾನ ಚಟದಿಂದ ಹೊರಬರಲು ಅದೆಷ್ಟೋ ಪರಿಹಾರ ವಿಧಾನಗಳನ್ನು ಅನುಸರಿಸಿದರೂ ಅವುಗಳು ಫಲ ಕೊಡದಿದ್ದಾಗ ಇಂತಹ ಒಂದು ವಿಚಿತ್ರ ವಿಧಾನದ ಮೊರೆ ಹೋಗಿದ್ದಾನೆ.


ನವದೆಹಲಿ: ಒಮ್ಮೆ ನಾವು ಯಾವುದಾದರೊಂದು ಚಟಕ್ಕೆ ದಾಸರಾದರೆ ಬಳಿಕ ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಪ್ರಾರಂಭದಲ್ಲಿ ನಾವು ಅಂಟಿಸಿಕೊಂಡ ಚಟ ಆ ಬಳಿಕ ನಮ್ಮನ್ನೇ ಅಂಟಿಕೊಂಡುಬಿಡುತ್ತದೆ ಎಂಬ ಮಾತಿದೆ. ಕೇವಲ ದೃಢ ಮನೋಬಲದಿಂದ ಮಾತ್ರವೇ ಚಟ ಮುಕ್ತರಾಗಲು ಸಾಧ್ಯ. ಈ ಜಗತ್ತಿನಲ್ಲಿ ಹಲವರು ಹೊರಬರಲಾರದೇ ಚಡಪಡಿಸುತ್ತಿರುವ ಪ್ರಮುಖ ಚಟವೆಂದರೆ ಅದು ಧೂಮಪಾನ.
ಒಮ್ಮೆ ಈ ಧೂಮಪಾನ (Smoking) ಚಟಕ್ಕೆ ಅಂಟಿಕೊಂಡರೆ ಆಮೇಲೆ ಅದರಿಂದ ಹೊರಬರುವುದು ತೀರಾ ಕಷ್ಟ. ಧೂಮಪಾನವನ್ನು ಬಿಡಿಸಲು ಔಷಧಿಯುಕ್ತ ಚ್ಯೂಯಿಮಗ್ ಗಮ್ (medicated chewing gums) ಜಗಿಯುವುದು, ಉಸಿರಾಟದ ವ್ಯಾಯಾಮವನ್ನು (breathing exercises) ಮಾಡುವುದು ಮತ್ತು ಧೂಮಪಾನ ಚಟದಿಂದ ಹಿಂದೆ ಬರುವ ಚಟುವಟಿಕೆಗಳನ್ನು ನಡೆಸುವುದು ಸೇರಿದಂತೆ ಹಲವಾರು ಪರಿಹಾರಗಳಿವೆಯಾದರೂ ಈ ಚಟದಿಂದ ಹೊರಬರುವುದು ಅಷ್ಟು ಸುಲಭದ ಮಾತಲ್ಲ.
ಈ ವಿಷಯ ಈಗ್ಯಾಕೆ ಬಂತೆಂದರೆ, ಇಲ್ಲೊಬ್ಬ ಭೂಪ ಧೂಮಪಾನ ಚಟದಿಂದ ಹೊರಬಾರಲಾರದೆ ಕೊನೆಗೆ ವಿಚಿತ್ರ ಉಪಾಯವೊಂದರ ಮೊರೆ ಹೋಗಿದ್ದಾನೆ. ಟರ್ಕಿ (Turkey) ದೇಶದ ಇಬ್ರಾಹಿಂ ಯೂಸೆಲ್ ಎಂಬಾತ ತನಗಿದ್ದ ವಿಪರೀತ ಧೂಮಪಾನ ಚಟದಿಂದ ಹೊರಬರಲು ಅದೆಷ್ಟೋ ಪರಿಹಾರ ವಿಧಾನಗಳನ್ನು ಅನುಸರಿಸಿದರೂ ಅವುಗಳು ಫಲ ಕೊಡದಿದ್ದಾಗ ಇಂತಹ ಒಂದು ವಿಚಿತ್ರ ವಿಧಾನದ ಮೊರೆ ಹೋಗಿದ್ದಾನೆ. ಇಬ್ರಾಹಿಂ ಅನುಸರಿಸುತ್ತಿರುವ ಈ ವಿಧಾನವನ್ನು ನೀವು ನೋಡಿದ್ರೆ ಆಶ್ಚರ್ಯಚಕಿತರಾಗೊದು ಗ್ಯಾರಂಟಿ!
This gentleman, Ibrahim Yucel, a Turkish man who was 42 years old at the time of the events, decided in 2013 to have his head locked in a cage with the intention of quitting smoking; his wife was the only one who had the keys and she only opened it during meals. pic.twitter.com/1LupljbfYp
— non aesthetic things (@PicturesFoIder) November 7, 2024
ಈತ ತನ್ನ ಮುಖಕ್ಕೆ ಬೇಲಿ ಹಾಕಿಕೊಂಡಿದ್ದಾನೆ! ಹೌದು ನಿಜವಾಗ್ಲೂ ಇಬ್ರಾಹಿಂ ಧೂಮಪಾನದ ಚಟದಿಂದ ಹೊರಬರಲು ತನ್ನ ಮುಖಕ್ಕೆ ಬೋನಿನ ರಚನೆಯನ್ನು ತಯಾರಿಸಿಕೊಂಡಿದ್ದು, ಹೊರಗೆ ಹೋಗುವ ಸಂದರ್ಭದಲ್ಲಿ ಅದನ್ನು ಹೆಲ್ಮೆಟ್ ನಂತೆ ಮುಖಕ್ಕೆ ಧರಿಸಿಕೊಂಡು ಹೊಗುತ್ತಾನೆ.
ಈ ಮೂಲಕ ಹೊರಗೆಲ್ಲೂ ಇಬ್ರಾಹಿಂಗೆ ಸಿಗರೇಟ್ ಸೇವಿಸಲೇ ಸಾಧ್ಯವಾಗುವುದಿಲ್ಲ ಯಾಕೆಂದರೆ ಈ ‘ಮುಖ ಬೋನಿನ’ ಕೀ ಆತನ ಪತ್ನಿಯ ಕೈಯಲ್ಲಿರುತ್ತೆ! ಹಾಗಾದ್ರೆ ಆತ ನೀರು ಹೇಗೆ ಕುಡಿಯುತ್ತಾನೆ ಎಂಬ ಪ್ರಶ್ನೆ ನಿಮ್ಮನ್ನು ಕಾಡದೇ ಇರದು, ಇದಕ್ಕೆ ಉತ್ತರ ಸಿಂಪಲ್ ಇದೆ, ಆತ ಸ್ಟ್ರಾ ಬಳಸಿ ನೀರು ಮತ್ತು ಲಿಕ್ವಿಡ್ ಸೇವಿಸುತ್ತಾನೆ. ಆದರೆ ಈ ವಿಧಾನದಿಂದ ಇಬ್ರಾಹಿಂ ಸಿಗರೇಟು ಸೇದುವ ಚಟದಿಂದ ಮುಕ್ತನಾಗಿದ್ದಾನೆಯೇ ಅಥವಾ ಇದು ಆತನ ಚಟವನ್ನು ದೂರ ಮಾಡುವಲ್ಲಿ ಸಹಕಾರಿಯಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: Viral Video: ಹಾಲಿ-ಮಾಜಿ ಶಾಸಕರ ನಡುವೆ ಮಾರಾಮಾರಿ- ಗುಂಡಿನ ದಾಳಿ; ವಿಡಿಯೊ ವೈರಲ್
ಇಬ್ರಾಹಿಂನ ಸಿಗರೇಟ್ ಚಟ ಬಿಡಿಸಲು ಆತನ ಪತ್ನಿ ಮಾಡಿದ ಈ ವಿಚಿತ್ರ ಉಪಾಯ 2013ರಿಂದಲೇ ಇಂಟರ್ನೆಟ್ ನಲ್ಲಿ ಹರಿದಾಡುತ್ತಿತ್ತು. ಇದೇ ಫೊಟೋಗಳು ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಟ್ರೆಂಡಿಂಗ್ ಆಗುತ್ತಿದೆ. ಈ ಮುಖ ಬೋನು ಒಂದು ಮೆಟಲ್ ಬಾಲ್ ನಂತೆ ತೋರುತ್ತಿದೆ. ಇಬ್ರಾಹಿಂ ತನ್ನ ಮುಖಕ್ಕೆ ಈ ಬೊನನ್ನು ಸಿಕ್ಕಿಸಿಕೊಂಡು ಲಾಕ್ ಮಾಡಿದ ಬಳಿಕ ಅದರ ಕೀಯನ್ನು ತನ್ನ ಪತ್ನಿಯ ಕೈಗೆ ಒಪ್ಪಿಸುತ್ತಾನೆ. ಈ ಮೂಲಕ ಆತನ ಪತ್ನಿಯ ಬಳಿ ಮಾತ್ರವೇ ಈ ಮುಖ ಬೋನಿನ ಕೀ ಇರುವ ಕಾರಣ ಇಬ್ರಾಹಿಂ ಬೇರೆಲ್ಲೂ ಇದನ್ನು ಓಪನ್ ಮಾಡುವಂತಿಲ್ಲ! ಊಟ-ತಿಂಡಿಯ ಸಂದರ್ಭದಲ್ಲಿ ಮಾತ್ರವೇ ಇದನ್ನು ತೆರೆಯಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ನಡೆದ ಸಂದರ್ಭದಲ್ಲ 42 ವರ್ಷ ಪ್ರಾಯದವನಾಗಿದ್ದ ಇಬ್ರಾಹಿಂನ ಸಿಗರೇಟ್ ಚಟ ಬಿಡಿಸಲು ಅನುಸರಿಸಿರುವ ಈ ಅಸಹಜ ಮತ್ತು ವಿಚಿತ್ರ ಉಪಾಯ ಫಲ ನಿಡಿದೆಯೇ ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ.