Bhagya Lakshmi Serial: ನೀವು ಅಮ್ಮನ್ನ ಈ ಮನೆ ಬಿಟ್ಟು ಓಡಿಸಬೇಕು ಎಂದು ಮಕ್ಕಳಿಗೆ ಹೇಳಿದ ತಾಂಡವ್
ತಾಂಡವ್ ಮಕ್ಕಳ ಬಳಿ ಬಂದು ತಬ್ಬಿಕೊಳ್ಳುತ್ತಾನೆ. ನಮಗೆ ನೀವು ಬಂದಿದ್ದು ತುಂಬಾ ಖುಷಿ ಆಯಿತು.. ಥ್ಯಾಂಕ್ಯು ಪಪ್ಪಾ ಎಂದು ಮಕ್ಕಳು ಹೇಳುತ್ತಾರೆ. ಆಗ ತಾಂಡವ್, ನಿಮಗೆ ಖುಷಿ ತರುವ ಕೆಲಸ ನಾನು ಮಾಡಿದೆ ತಾನೆ.. ಈಗ ನನ್ಗೆ ಸಿಕ್ಕಾಪಟ್ಟೆ ಖುಷಿ ಕೊಡು ಹೆಲ್ಪ್ ನೀವು ಮಾಡಬೇಕು ಎನ್ನುತ್ತಾನೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಸದ್ಯ ಮನೆಬಿಟ್ಟು ಹೋಗಿದ್ದ ತಾಂಡವ್ ಮತ್ತೆ ಮನೆಗೆ ಬಂದಿದ್ದಾನೆ. ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದ ಎರಡೇ ದಿನಕ್ಕೆ ತಾಂಡವ್ ಮತ್ತೆ ಮನೆಯ ಗೂಡು ಸೇರಿದ್ದಾನೆ. ತಂದೆ ಕಾಲು ಹಿಡಿದು ಕ್ಷಮೆ ಕೇಳಿದ್ದಾನೆ ತಾಂಡವ್. ಆದರೆ, ಇದು ಹೊಸ ನಾಟಕ ಎಂಬುದು ಮನೆಯೊವರಿಗೆ ಇನ್ನೂ ತಿಳಿದಿಲ್ಲ. ಭಾಗ್ಯಾಳನ್ನು ಮನೆಬಿಟ್ಟು ಓಡಲು ಹೊಸ ಪ್ಲ್ಯಾನ್ ಮೂಲಕ ತಾಂಡವ್ ಮತ್ತೆ ಮನೆಗೆ ಬಂದಿದ್ದಾರೆ.
ಮನೆಬಿಟ್ಟು ಹೋದ ಬಳಿಕ ಮೊದಲ ದಿನ ತಾಂಡವ್-ಶ್ರೇಷ್ಠಾ ಖುಷಿ ಆಗೇ ಇದ್ದರು. ಭಾಗ್ಯಾಗೆ ಬುದ್ದಿ ಕಲಿಸಬೇಕು ಎಂದು ಪ್ಲ್ಯಾನ್ ಮಾಡಿದರು. ಅವ್ಳ ನೆಮ್ಮದಿ ಹಾಳಮಾಡಬೇಕು ಎಂದರು. ಅತ್ತ ನನ್ನ ಮಗ ಈ ಮನೆಗೆ ವಾಪಸ್ ಬಂದೇ ಬರುತ್ತಾನೆ, ಅದರಲ್ಲಿ ಎರಡು ಮಾತಿಲ್ಲ, ಆದಷ್ಟು ಬೇಗ ಅವನಿಗೆ ಆ ಶ್ರೇಷ್ಠಾ ಬುದ್ಧಿ ಅರ್ಥವಾಗುತ್ತದೆ ಹೇಳುತ್ತಿದ್ದಂತೆ ಮನೆ ಬಾಗಿಲಿನ ಬಳಿ ತಾಂಡವ್, ಲಗ್ಗೇಜ್ ಸಹಿತ ಪ್ರತ್ಯಕ್ಷನಾಗುತ್ತಾನೆ. ಇದನ್ನು ಕಂಡು ಕುಸುಮಾಗೆ ತುಂಬಾ ಸಂತೋಷವಾಗುತ್ತದೆ.
ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಆದ್ರೆ ತಂದೆ, ಹೇ.. ತಾಂಡವ್ ಯಾಕೆ ಹೀಗೆ ಮಾಡ್ತಾ ಇದ್ದೀಯಾ?, ನನ್ ಕಾಲು ಮುಟ್ಟಬೇಡ ನೀನು.. ನನ್ನ ಅಪ್ಪ ಅಂತ ಕರಿಬೇಡ.. ಎಂದು ದೂರ ಹೋಗುತ್ತಾರೆ. ಅತ್ತ ಭಾಗ್ಯಾಗೆ ಇದು ಯಾವುದೊ ಪ್ಲ್ಯಾನ್ ಎಂಬಂತೆ ಅನುಮಾನ ಮೂಡುತ್ತದೆ. ನಾವೆಲ್ಲರು ಈ ನಾಟಕಕ್ಕೆ ಮೋಸ ಹೋದವರೆ.. ಹಾಗಾಗಿ ಈ ಸಲ ಅಂತು ನಾನು ಇದನ್ನೆಲ್ಲ ನಂಬೋದೆ ಇಲ್ಲ ಎಂದು ಹೇಳುತ್ತಾಳೆ. ಆದ್ರೆ ಕುಸುಮಾ ಹಾಗೂ ಭಾಗ್ಯಾಳ ಅಮ್ಮ ಬಿಟ್ಟು ಉಳಿದವರು ಯಾರೂ ನಂಬುವುದಿಲ್ಲ. ಆಗ ತಾಂಡವ್, ಇಲ್ಲಿ ನನ್ಗೆ ಆದಂತಹ ಒಂದಿಷ್ಟು ಜವಾಬ್ದಾರಿಗಳಿವೆ. ಅವ್ರ ಮಗನಾಗಿ ಅದನ್ನೆಲ್ಲ ಪೂರೈಸಬೇಕು ಅಂತಾ ಬಂದಿದ್ದೀನಿ ಎಂದು ಹೇಳುತ್ತಾನೆ.
ಇದಾದ ಬಳಿಕ ತನ್ನ ನೈಜ್ಯ ರೂಪ ತೋರಿಸಿದ್ದಾನೆ ತಾಂಡವ್. ಮಕ್ಕಳ ಬಳಿ ಬಂದು ತಬ್ಬಿಕೊಳ್ಳುತ್ತಾನೆ. ನಮಗೆ ನೀವು ಬಂದಿದ್ದು ತುಂಬಾ ಖುಷಿ ಆಯಿತು.. ಥ್ಯಾಂಕ್ಯು ಪಪ್ಪಾ ಎಂದು ಮಕ್ಕಳು ಹೇಳುತ್ತಾರೆ. ಆಗ ತಾಂಡವ್, ನಿಮಗೆ ಖುಷಿ ತರುವ ಕೆಲಸ ನಾನು ಮಾಡಿದೆ ತಾನೆ.. ಈಗ ನನ್ಗೆ ಸಿಕ್ಕಾಪಟ್ಟೆ ಖುಷಿ ಕೊಡು ಹೆಲ್ಪ್ ನೀವು ಮಾಡಬೇಕು ಎನ್ನುತ್ತಾನೆ. ಇದಕ್ಕೆ ಮಕ್ಕಳು ಅದೇನು ಅಂತ ಹೇಳಿ.. ನೀವು ನಮಿಗೋಸ್ಕರ ಶಾಪಿಂಗ್ ಕರ್ಕೊಂಡು ಹೋದ್ರೆ ಅದೇನು ಬೇಕಿದ್ರೂ ಮಾಡ್ತೀವಿ ಎನ್ನುತ್ತಾರೆ.
ಆಗ ತಾಂಡವ್, ನೀವು ಇನ್ಮುಂದೆ ಅಮ್ಮನ ಜೊತೆ ಇರಲ್ಲ ನನ್ನ ಜೊತೆ ಇರ್ತೀನಿ ಅಂತ ಹೇಳ್ಬೇಕು ಅಥವಾ ನೀವು ಅಮ್ಮನ್ನ ಈ ಮನೆ ಬಿಟ್ಟು ಓಡಿಸಬೇಕು ಎಂದು ಹೇಳಿದ್ದಾನೆ. ಇದನ್ನು ಕೇಳಿ ಮಕ್ಕಳಿಗೆ ಹಾಗೂ ಕುಸುಮಾಳಿಗೆ ಆಘಾತ ಉಂಟಾಗಿದೆ. ಮಕ್ಕಳು ಸೀದಾ ಅಮ್ಮನ ಬಳಿ ಓಡಿ ಬಂದು, ಅಮ್ಮನ ಬಿಟ್ಟು ನಾವು ಯಾರ ಜೊತೆನೂ ಇರಲ್ಲ.. ನಮ್ಮನ್ನ ನೀವು ಹೊರಗಡೆ ಕರ್ಕೊಂಡು ಹೋಗೋದು ಬೇಡ.. ನನ್ಗೆ ನೀವು ಬೇಡ.. ನಿಮ್ ಶಾಪಿಂಗ್ ಬೇಡ.. ನಮ್ಗೆ ಅಮ್ಮ ಇದ್ರೆ ಸಾಕು.. ಅಮ್ಮನ ಮುಂದೆ ನಮ್ಗೆ ಯಾವುದೀ ಇಂಪಾರ್ಟೆಂಟ್ ಅಲ್ಲ ಎಂದು ತಾಂಡವ್ಗೆ ಮುಖಕ್ಕೆ ಹೊಡೆದಂಗೆ ಹೇಳುತ್ತಾರೆ.
BBK 11: ಅಭಿಮಾನಿಗಳ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್: ಉಳಿದಿರೋದು ಕೇವಲ ತೀರ್ಪು