ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thalapathy Vijay: ನಟ,ರಾಜಕಾರಣಿ ದಳಪತಿ ವಿಜಯ್‌ಗೆ ವೈ ಸ್ಕೇಲ್‌ ಭದ್ರತೆ: ಈ ಹೈ ಸೆಕ್ಯೂರಿಟಿ ಏಕೆ?

'ಜನ ನಾಯಗನ್' ಚಿತ್ರದ ಮೂಲಕ ತಮಿಳು ಚಿತ್ರರಂಗದ ಪ್ರಸಿದ್ಧ ನಟ ದಳಪತಿ ವಿಜಯ್ ತಮ್ಮ ಸಿನಿ ಜರ್ನಿಗೆ ಗುಡ್‌ ಬೈ ಹೇಳುತ್ತಿದ್ದು, ಸಿನಿಮಾ ಸದ್ಯದಲ್ಲೇ ಪರದೆ ಮೇಲೆ ಬರಲಿದೆ. ವಿಜಯ್‌ ಅವರ ಫಸ್ಟ್ ಲುಕ್ ಈಗಾಗಲೇ ಸಂಚಲನ ಸೃಷ್ಟಿಸುತ್ತಿದ್ದು,ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ಸ್ಕ್ರೀನ್‌ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ನಟ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ದಳಪತಿ ವಿಜಯ್‌ಗೆ ವೈ ಕೆಟಗರಿ ಭದ್ರತೆ! ಈ ಹೈ ಸೆಕ್ಯೂರಿಟಿ ಏಕೆ?

ನಟ ದಳಪತಿ ವಿಜಯ್

Profile Deekshith Nair Feb 15, 2025 1:13 PM

ಚೆನ್ನೈ: ಹೆಚ್. ವಿನೋದ್ ನಿರ್ದೇಶನದ 'ಜನ ನಾಯಗನ್'(Jana Nayagan) ಚಿತ್ರದ ಮೂಲಕ ತಮಿಳು ಚಿತ್ರರಂಗದ ಪ್ರಸಿದ್ಧ ನಟ ದಳಪತಿ ವಿಜಯ್(Thalapathy Vijay) ತಮ್ಮ ಸಿನಿ ಜರ್ನಿಗೆ ಗುಡ್‌ ಬೈ ಹೇಳುತ್ತಿದ್ದು, ಸಿನಿಮಾ ಸದ್ಯದಲ್ಲೇ ಪರದೆ ಮೇಲೆ ಬರಲಿದೆ. ವಿಜಯ್‌ ಅವರ ಫಸ್ಟ್ ಲುಕ್ ಈಗಾಗಲೇ ಸಂಚಲನ ಸೃಷ್ಟಿಸುತ್ತಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ಸ್ಕ್ರೀನ್‌ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ನಟ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ನಟ ಮತ್ತು ರಾಜಕಾರಣಿಯಾದ ದಳಪತಿ ವಿಜಯ್‌ಗೆ 'ವೈ' ಕೆಟಗರಿ ಭದ್ರತೆಯನ್ನು ಒದಗಿಸಲಾಗಿದ್ದು, ಇದರಲ್ಲಿ 8 ಜನರ ತಂಡವಿರುತ್ತದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಭದ್ರತೆ ದೃಷ್ಟಿಯಿಂದ 'ವೈ' ಸ್ಕೇಲ್ ಭದ್ರತೆಯನ್ನು ಒದಗಿಸಲಾಗಿದ್ದು, ಇದರಲ್ಲಿ 8 ಜನರ ತಂಡವಿರುತ್ತದೆ. ಅವರಲ್ಲಿ ಇಬ್ಬರು ಕಮಾಂಡೋಗಳು ಮತ್ತು ಆರು ಮಂದು ಪೊಲೀಸರಿರುತ್ತಾರೆ. ಈ ಸೆಕ್ಯುರಿಟಿ ವ್ಯವಸ್ಥೆ ತಮಿಳುನಾಡಿನಲ್ಲಿ ಮಾತ್ರ ಕಂಡುಬರುತ್ತದೆ ಎನ್ನಲಾಗಿದೆ. ಗೃಹ ಸಚಿವಾಲಯವು ದಳಪತಿ ವಿಜಯ್ ಅವರಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ನೇಮಿಸಲಾಗಿದೆ. ನಟನಿಗೆ 24/7 ರಕ್ಷಣೆ ಒದಗಿಸಿದ್ದು, ತಮಿಳುನಾಡಿನಲ್ಲಿರುವ ಅವರ ನಿವಾಸಕ್ಕೆ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.



ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಇದರೊಂದಿಗೆ ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 234 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Modi Trump Meeting: 'ನಾವು ನಿಮ್ಮನ್ನು ಮಿಸ್ ಮಾಡಿಕೊಂಡೆವು....ʼ ಮೋದಿಯನ್ನು ಕಂಡೊಡನೆ ಅಪ್ಪಿಕೊಂಡ ಟ್ರಂಪ್‌

ಫೆಬ್ರುವರಿಯಲ್ಲಿ ತಮಿಳಗ ವೆಟ್ರಿ ಕಳಗಮ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದ ದಳಪತಿ ವಿಜಯ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬೆಂಬಲಿಸಿರಲಿಲ್ಲ. ಆದರೆ ಮುಂಬರುವ 2026 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡು ರಾಜಕೀಯಕ್ಕೆ ಹೊಸ ಆಯಾಮವನ್ನು ಸೇರಿಸುವ ನಿರೀಕ್ಷೆಯೊಂದಿಗೆ ರಾಜ್ಯದ ಎಲ್ಲಾ 234 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ.