Kolkata Horror: ಒಂದೆಡೆ ಅಪಘಾತ, ಇನ್ನೊಂದೆಡೆ ಆತ್ಮಹತ್ಯೆ! ಏನಿದು ಕೊಲ್ಕತ್ತಾವನ್ನೇ ಬಿಚ್ಚಿ ಬೀಳಿಸಿದ ಡೇ ಕುಟುಂಬದ ಮಿಸ್ಟರಿ ಕೇಸ್?
ಕೊಲ್ಕತ್ತಾದಲ್ಲಿ ಬೆಚ್ಚಿಬೀಳಿಸುವಂತ ಘಟನೆ ನಡೆದಿದ್ದು, ಒಂದೇ ಕುಟುಂಬದ ಮೂವರು ಮಹಿಳೆಯರು ಮೃತಪಟ್ಟಿದ್ದರೆ, ಅದೇ ಕುಟುಂಬದ ಮೂವರಿಗೆ ಭೀಕರ ಕಾರು ಅಪಘಾತವಾಗಿದೆ. ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದು, ಇದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಯೋಜನೆ ರೂಪಿಸಿತ್ತಾ? ಎಂದು ಪೊಲೀಸರು ಶಂಕಿಸಿದ್ದಾರೆ.

ಡೇ ಕುಟುಂಬ

ಕೊಲ್ಕತ್ತಾ: ನಗರದಲ್ಲಿ ಬೆಚ್ಚಿಬೀಳಿಸುವಂತ ಘಟನೆ ನಡೆದಿದ್ದು, ಒಂದೇ ಕುಟುಂಬದ ಮೂವರು ಮಹಿಳೆಯರು ಮೃತಪಟ್ಟಿದ್ದರೆ, ಅದೇ ಕುಟುಂಬದ ಮೂವರಿಗೆ ಭೀಕರ ಕಾರು ಅಪಘಾತವಾಗಿದೆ. ಸದ್ಯ ಈ ಘಟನೆಯ ಸತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೋಲ್ಕತ್ತಾದ ಮನೆಯೊಂದರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಮುಂಜಾನೆ ಇಎಂ ಬೈಪಾಸ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಅದೇ ಕುಟುಂಬದ ಮೂವರು ಪುರುಷರು ಗಾಯೊಂಡಿದ್ದಾರೆ. ಈ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದು, ಇದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಯೋಜನೆ ರೂಪಿಸಿತ್ತಾ? ಎಂದು ಪೊಲೀಸರು ಶಂಕಿಸಿದ್ದಾರೆ.
ಪೂರ್ವ ಕೋಲ್ಕತ್ತಾದ ಟ್ಯಾಂಗ್ರಾದಲ್ಲಿರುವ ಪ್ರಸುನ್ ಡೇ (48), ಪ್ರಣಯ್ ಡೇ (44) ಸಹೋದರರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಪ್ರಸುನ್ ಡೇ, ಪ್ರಣಯ್ ಡೇ ಪ್ರಣಯ್ ಅವರ ಮಗ ಪ್ರತಿಪ್ ಡೇ ಪ್ರಯಾಣಿಸುತ್ತಿದ್ದ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಪವಾಡ ಸದೃಶ್ಯವಾಗಿ ಅವರು ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿರುವ ಪ್ರಣಯ್ ಡೇ ತಾವು ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿಯೂ, ಉದ್ದೇಶಪೂರ್ವಕವಾಗಿ ಕಾರನ್ನು ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದಿರುವುದಾಗಿಯೂ, ತನ್ನ ಮನೆಯಲ್ಲಿ ಮನೆಯಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ಹೇಳಿದ್ದಾರೆ.
ನಂತರ ಅವರ ಮನೆಗೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿದಾಗ ಮೊದಲ ಮಹಡಿಯಲ್ಲಿ, ಶವಗಳು ಪತ್ತೆಯಾಗಿವೆ. ಇಬ್ಬರ ಗಂಟಲಿನ ಮೇಲೆ ಸೀಳು ಗಾಯಗಳಾಗಿದ್ದು, ಭಾರೀ ರಕ್ತಸ್ರಾವದ ನಂತರ ಮೃತಪಟ್ಟಿದ್ದಾರೆ. 14 ವರ್ಷದ ಬಾಲಕಿಯ ಎದೆ, ಕಾಲುಗಳು, ತುಟಿ ಮತ್ತು ತಲೆಯ ಮೇಲೆ ಗಾಯಗಳಾಗಿವೆ. ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಡಿಯೋಗ್ರಾಫರ್ ಮತ್ತು ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಸುದ್ದಿಯನ್ನೂ ಓದಿ: KIIT Student Death: ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ತೀವ್ರಗೊಂಡ ಉದ್ವಿಗ್ನತೆ; ವಿಡಿಯೋ ವೈರಲ್ ಬಳಿಕ ಕ್ಷಮೆ ಕೇಳಿದ KIIT
ಆಸ್ಪತ್ರೆಗೆ ದಾಖಲಾದ ಮೂವರು ಜನರ ವೀಡಿಯೊ ಮತ್ತು ಲಿಖಿತ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ವ್ಯಾಪಾರ ನಡೆಸುತ್ತಿದ್ದ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿತ್ತು ಇದು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಡೇ ಸಹೋದರರು ಎರಡು ವರ್ಷಗಳಿಂದ ತಮ್ಮ ವ್ಯಾಪಾರ ಪರವಾನಗಿಯನ್ನು ನವೀಕರಿಸಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.