ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Taroor: 'ತುರ್ತು ಪರಿಸ್ಥಿತಿ' ಬಗ್ಗೆ ಲೇಖನ; ಗಾಂಧಿ- ನೆಹರು ಕುರಿತು ತರೂರ್ ನೇರ ಮಾತು; ಕೈ ಪಾಳಯದಲ್ಲಿ ಅಸಮಾಧಾನ

ಕಾಂಗ್ರೆಸ್ (Congress) ಹಾಗೂ ಸಂಸದ ಶಶಿ ತರೂರ್ (Shashi Taroor) ಮಧ್ಯೆ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ನೆಹರು-ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ತುರ್ತು ಪರಿಸ್ಥಿತಿಯ ಅವಧಿಯನ್ನು ಕಟುವಾಗಿ ಟೀಕಿಸುವ ಮೂಲಕ ಪಕ್ಷದ ಕೆಂಗಣ್ಣಿಗೆ ತರೂರ್ ಗುರಿಯಾಗಿದ್ದಾರೆ.

ಗಾಂಧಿ- ನೆಹರು ಕುರಿತು ತರೂರ್ ನೇರ ಮಾತು; ಕೈ ಪಾಳಯದಲ್ಲಿ ಅಸಮಾಧಾನ

Profile Vishakha Bhat Jul 11, 2025 1:22 PM

ತಿರುವನಂತಪುರಂ: ಕಾಂಗ್ರೆಸ್ (Congress) ಹಾಗೂ ಸಂಸದ ಶಶಿ ತರೂರ್ (Shashi Taroor) ಮಧ್ಯೆ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ನೆಹರು-ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ತುರ್ತು ಪರಿಸ್ಥಿತಿಯ ಅವಧಿಯನ್ನು ಕಟುವಾಗಿ ಟೀಕಿಸುವ ಮೂಲಕ ಪಕ್ಷದ ಕೆಂಗಣ್ಣಿಗೆ ತರೂರ್ ಗುರಿಯಾಗಿದ್ದಾರೆ. ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಇತ್ತೀಚೆಗೆ ಪ್ರಕಟವಾದ ಶಶಿ ತರೂರ್ ಅವರ ಲೇಖನವು ವೈರಲ್ ಆಗಿದೆ. ಇದರಲ್ಲಿ ಶಶಿ ತರೂರ್ ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ “ಕರಾಳ ಅಧ್ಯಾಯ” ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ "ಸಹಿಸಲಾಗದ ದೌರ್ಜನ್ಯಗಳು" ಎಂದು ಕರೆದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್‌ 21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕರಾಳ ಯುಗ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೈಗೊಂಡ ಪ್ರಯತ್ನಗಳು ಕ್ರೌರ್ಯದ ರೂಪ ತಾಳಿತು. ಹಾಗೆಂದು ಆ ಕ್ರಮವನ್ನು ಸಮರ್ಥಿಸಲಾಗದು ಎಂದು ಅವರು ಹೇಳಿದ್ದಾರೆ.

ಶಶಿ ತರೂರ್ ಬಿಜೆಪಿ ಆಡಳಿತವನ್ನು ಹೊಗಳಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕಠಿಣ ಕ್ರಮಗಳನ್ನು ಜಾರಿಗೆ ತಂದರು. ಅವರ ಮಗ ಸಂಜಯ್ ಗಾಂಧಿ ಗ್ರಾಮೀಣ ಪ್ರದೇಶಗಳಲ್ಲಿ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಹಿಂಸಾಚಾರ ಸೇರಿದಂತೆ ಭಯಾನಕ ದೌರ್ಜನ್ಯಗಳನ್ನು ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಶಶಿ ತರೂರ್ ವಿರುದ್ಧ ಕಾಂಗ್ರೆಸ್​​ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಹಿರಿಯ ನಾಯಕರೇ ಬೇರೆ ಪಕ್ಷದ ಪರವಾಗಿ ಹೇಳಿಕೆ ನೀಡಿದರೆ ಅದು ಕಾರ್ಯಕರ್ತರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ತರೂರ್ ವಿರುದ್ಧ ಕಿಡಿ ಕಾರಿದ್ದಾರೆ. ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ಮೊದಲು ನಿರ್ಧರಿಸಬೇಕು" . ಬೇರೆ ಯಾವುದೋ ಪಕ್ಷದ ವಕ್ತಾರರ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ; Shashi Taroor: ಉಗ್ರರ ವಿರುದ್ಧ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ; ಅಮೆರಿಕದಲ್ಲಿ ಪಾಕ್‌ ವಿರುದ್ಧ ಗುಡುಗಿದ ಶಶಿ ತರೂರ್‌

ಸಹೋದ್ಯೋಗಿಯೊಬ್ಬರು ಬಿಜೆಪಿಯ ಮಾತುಗಳನ್ನು ಪುನರಾವರ್ತಿಸಲು ಪ್ರಾರಂಭಿಸಿದಾಗ ಹಕ್ಕಿ ಗಿಳಿಯಾಗುತ್ತಿದೆಯೇ? ಎಂದು ನಿಮಗೆ ಆಶ್ಚರ್ಯವಾಗಿತ್ತು. ಹಕ್ಕಿಗಳಲ್ಲಿ ಮಿಮಿಕ್ರಿ ಕ್ಯೂಟ್ ಆಗಿರುತ್ತದೆ ಹೊರತು ರಾಜಕೀಯದಲ್ಲಿ ಅಲ್ಲ ಎಂದಿದ್ದಾರೆ. ಫೋಸ್ಟ್ ನಲ್ಲಿ ತರೂರ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರ ತುರ್ತುಪರಿಸ್ಥಿತಿ ಲೇಖನ ಪ್ರಕಟವಾಗುತ್ತಿದ್ದಂತೆಯೇ ಟ್ಯಾಗೋರ್ ಈ ರೀತಿಯ ಫೋಸ್ಟ್ ಮಾಡಿದ್ದಾರೆ.