ಕೊಹ್ಲಿ,ರೋಹಿತ್ ಅಲ್ಲ; ಈ ಕ್ರಿಕೆಟಿಗನೊಂದಿಗೆ ಟೆನಿಸ್ ಆಡಲು ಬಯಸಿದ ಸೂರ್ಯಕುಮಾರ್
Suryakumar Yadav: "ಭಾರತದ ಹಲವು ಉನ್ನತ ಕ್ರಿಕೆಟಿಗರು ಈ ಹಿಂದೆ ವಿಂಬಲ್ಡನ್‌ಗೆ ಬಂದಿದ್ದಾರೆ. ನಾನು ಇಲ್ಲಿಗೆ ಬಂದಿರುವುದು ಇದೇ ಮೊದಲು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಸ್ಟೈಲಿಶ್ ಆಗಿ ಕಾಣಲು ನನ್ನ ಹೆಂಡತಿ ನಿಜವಾದ ಕಾರಣ. ಯಾವ ರೀತಿಯ ಡ್ರೆಸ್ ಧರಿಸಬೇಕು, ಹೇಗೆ ಸಿದ್ಧವಾಗಬೇಕು ಎಂಬ ತಯಾರಿ ಆಕೆಯದ್ದು" ಎಂದು ತನ್ನ ಲುಕ್ ಹಿಂದಿರುವ ಪತ್ನಿ ಶ್ರಮವನ್ನು ಸೂರ್ಯ ನೆನಪಿಸಿಕೊಂಡರು.


ಲಂಡನ್: ಈ ಬಾರಿಯ ವಿಂಬಲ್ಡನ್‌ನಲ್ಲಿ(Wimbledon 2025) ವಿರಾಟ್ ಕೊಹ್ಲಿ, ರಿಷಭ್ ಪಂತ್ ಸೇರಿ ಅನೇಕ ಭಾರತೀಯ ಸಿನೆಮಾ ನಟ ಮತ್ತು ನಟಿಯರು ಕಾಣಿಸಿಕೊಂಡಿದ್ದರು. ಇದೀಗ ಈ ಪಟ್ಟಿಗೆ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಕೂಡ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಅವರು ತಾನು ಟೆನಿಸ್ ಆಡುವುದಾದರೆ ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಜತೆಗಾರನಾಗಿ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಜರ್ಮನಿಯಲ್ಲಿ 'ಸ್ಪೋರ್ಟ್ಸ್ ಹರ್ನಿಯಾ ಸಂಬಂಧಿತ ನೋವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯಕುಮಾರ್ ಚೇತರಿಸಿಕೊಂಡಿದ್ದು ಅತ್ಯಂತ ಸ್ಟೈಲಿಶ್ ಆಗಿ ವಿಂಬಲ್ಡನ್ ರಾಯಲ್ ಬಾಕ್ಸ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಜಿಯೋಸ್ಟಾರ್ ನಡೆಸಿದ ಚುಟುಕು ಸಂದರ್ಶನದಲ್ಲಿ ಸೂರ್ಯಕುಮಾರ್‌ಗೆ ವಿಂಬಲ್ಡನ್‌ನಲ್ಲಿ ನೀವು ಆಡಿದರೆ ನಿಮ್ಮ ಜತೆಗಾರನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ? ಎಂಬ ಪ್ರಶ್ನೆಯೊಂದನ್ನು ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, ನಿಸ್ಸಂಶಯವಾಗಿ ಧೋನಿ ಎಂದರು. "ಖಂಡಿತ, ಎಂಎಸ್ ಧೋನಿ. ಅವರಿಗೆ ವೇಗವಿದೆ, ಸಾಕಷ್ಟು ಸಹಿಷ್ಣುತೆ ಇದೆ. ಅವರು ಮಾನಸಿಕವಾಗಿ ತುಂಬಾ ಕಠಿಣರು. ಮತ್ತು ಇತ್ತೀಚೆಗೆ, ಅವರು ಕ್ರಿಕೆಟ್ ಆಡದಿದ್ದಾಗಲೆಲ್ಲಾ, ಅವರು ಬಹಳಷ್ಟು ಟೆನಿಸ್ ಆಡುವುದನ್ನು ನಾನು ನೋಡಿದ್ದೇನೆ. ಆದ್ದರಿಂದ, ಹೌದು, ನಿಸ್ಸಂದೇಹವಾಗಿ, ಅದು ಎಂಎಸ್ ಧೋನಿ ಆಗಿರುತ್ತದೆ" ಎಂದು ಸೂರ್ಯಕುಮಾರ್ ಹೇಳಿದರು.
Nothing beats the excitement of #Wimbledon! 🎾💖 Here’s #SuryakumarYadav and his wife soaking in the vibes at #Wimbledon2025 pic.twitter.com/40wJ0VUSZo
— Chennai Times (@ChennaiTimesTOI) July 10, 2025
ಇದನ್ನೂ ಓದಿ IND vs ENG: ಜೋ ರೂಟ್ ವಿಕೆಟ್ ಕಿತ್ತು ಅಪರೂಪದ ದಾಖಲೆ ಜಸ್‌ಪ್ರೀತ್ ಬುಮ್ರಾ!
"ಭಾರತದ ಹಲವು ಉನ್ನತ ಕ್ರಿಕೆಟಿಗರು ಈ ಹಿಂದೆ ವಿಂಬಲ್ಡನ್‌ಗೆ ಬಂದಿದ್ದಾರೆ. ನಾನು ಇಲ್ಲಿಗೆ ಬಂದಿರುವುದು ಇದೇ ಮೊದಲು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಸ್ಟೈಲಿಶ್ ಆಗಿ ಕಾಣಲು ನನ್ನ ಹೆಂಡತಿ ನಿಜವಾದ ಕಾರಣ. ಯಾವ ರೀತಿಯ ಡ್ರೆಸ್ ಧರಿಸಬೇಕು, ಹೇಗೆ ಸಿದ್ಧವಾಗಬೇಕು ಎಂಬ ತಯಾರಿ ಆಕೆಯದ್ದು" ಎಂದು ತನ್ನ ಲುಕ್ ಹಿಂದಿರುವ ಪತ್ನಿ ಶ್ರಮವನ್ನು ಸೂರ್ಯ ನೆನಪಿಸಿಕೊಂಡರು.