Asia Cup 2025: ರಾಜತಾಂತ್ರಿಕ ಬಿಕ್ಕಟ್ಟು; ಹಾಲಿ ವರ್ಷದ ಏಷ್ಯಾಕಪ್ ರದ್ದು ಸಾಧ್ಯತೆ
diplomatic crisis: "ಎಲ್ಲಾ ಸದಸ್ಯ ರಾಷ್ಟ್ರಗಳು ತಮ್ಮ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಾವು 15 ದಿನಗಳ ಕಾಲಾವಕಾಶ ನೀಡಿದ್ದೇವೆ. ಯಾವುದೇ ಸದಸ್ಯರು ಢಾಕಾಗೆ ಬರಲು ಬಯಸದಿದ್ದರೆ, ಆನ್‌ಲೈನ್ ಹಾಜರಾತಿಗೆ ವ್ಯವಸ್ಥೆಗಳಿವೆ. ಆದರೆ ಸಭೆ ಢಾಕಾದಲ್ಲಿ ನಡೆಯಲಿದೆ" ಎಂದು ಎಸಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ನವದೆಹಲಿ: ಆತಿಥೇಯ ದೇಶದಲ್ಲಿನ ರಾಜಕೀಯ ಅಶಾಂತಿಯ ಕಾರಣದಿಂದ ಜುಲೈ 24 ರಂದು ಢಾಕಾದಲ್ಲಿ ನಿಗದಿಯಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯಲ್ಲಿ ಭಾಗವಹಿಸಲು ಭಾರತ ಮತ್ತು ಶ್ರೀಲಂಕಾ ನಿರಾಕರಿಸಿದ ನಂತರ ಏಷ್ಯಾ ಕಪ್ ಕ್ರಿಕೆಟ್(Asia Cup 2025) ಪಂದ್ಯಾವಳಿ ನಡೆಯುವುದು ಅನುಮಾನ(Asia Cup In Doubt) ಎಂಬ ಸುದ್ದಿಯೊಂದು ಹೊರಬಿದ್ದಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಪೂರ್ವಸಿದ್ಧತೆಯಾಗಿ ಹಾಲಿ ವರ್ಷದ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ನಲ್ಲಿ ಚುಟುಕು ಕ್ರಿಕೆಟ್ ಮಾದರಿಯಲ್ಲೇ ನಿಗದಿಯಾಗಿದೆ. ಆದರೆ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ(diplomatic crisis) ಟೂರ್ನಿ ರದ್ದುಗೊಳ್ಳುವ ಸಾಧ್ಯತೆ ಇದೆ.
ಪಾಕಿಸ್ತಾನ, ಬಾಂಗ್ಲಾದೇಶದ ಬಗ್ಗೆ ಕೇಂದ್ರ ಸರ್ಕಾರ ಸದ್ಯ ಕಠಿಣ ನಿಲುವು ತಳೆದಿದೆ. ಹೀಗಾಗಿ ಇವೆರಡು ದೇಶಗಳ ಜತೆಗೆ ಭಾರತ ಕ್ರಿಕೆಟ್ ಆಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವೆನಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇಲ್ಲವೆನಿಸಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಗದೇ ಇರುವ ಕಾರಣದಿಂದಲೇ ಭಾರತವು ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿತ್ತು.
"ಎಲ್ಲಾ ಸದಸ್ಯ ರಾಷ್ಟ್ರಗಳು ತಮ್ಮ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಾವು 15 ದಿನಗಳ ಕಾಲಾವಕಾಶ ನೀಡಿದ್ದೇವೆ. ಯಾವುದೇ ಸದಸ್ಯರು ಢಾಕಾಗೆ ಬರಲು ಬಯಸದಿದ್ದರೆ, ಆನ್‌ಲೈನ್ ಹಾಜರಾತಿಗೆ ವ್ಯವಸ್ಥೆಗಳಿವೆ. ಆದರೆ ಸಭೆ ಢಾಕಾದಲ್ಲಿ ನಡೆಯಲಿದೆ" ಎಂದು ಎಸಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೊಂದು ವರದಿಯ ಪ್ರಕಾರ, ಸೆಪ್ಟೆಂಬರ್ 5ರಿಂದ ಏಷ್ಯಾಕಪ್ ಟಿ20 ಪಂದ್ಯಾವಳಿ ಆರಂಭವಾಗಲಿದ್ದು, ಬುದ್ಧ ಎದುರಾಳಿ ಭಾರತ-ಪಾಕಿಸ್ತಾನ ತಂಡಗಳು ಸೆ. 17ರಂದು ಮುಖಾಮುಖೀ ಆಗಲಿವೆ. ಸೆ. 21ರಂದು ಫೈನಲ್ ನಡೆಯಲಿದೆ. ಟೂರ್ನಿ ಯುಎಇಯಲ್ಲಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಒಟ್ಟಾರೆ ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನ ಹಾಗೂ ಹಿಂದುಗಳ ಮೇಲಿನ ದೌರ್ಜನ್ಯದಿಂದ ಸಂಬಂಧ ಕೆಡಿಸಿಕೊಂಡಿರುವ ಬಾಂಗ್ಲಾ ವಿರುದ್ಧ ಭಾರತ ತಂಡ ಕ್ರಿಕೆಟ್ ಆಡುವ ಮನಸ್ಥಿತಿಯಲ್ಲಿ ಇಲ್ಲ.
ಇದನ್ನೂ ಓದಿ India tour of Bangladesh: ಟೀಮ್ ಇಂಡಿಯಾದ ಬಾಂಗ್ಲಾ ಪ್ರವಾಸ ರದ್ದು