ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kerala Ragging: ಟಾಯ್ಲೆಟ್‌ ನೆಕ್ಕುವಂತೆ ಕಿರುಕುಳ ಕೊಟ್ಟ ಸಹಪಾಠಿಗಳು; ವಿದ್ಯಾರ್ಥಿ ಆತ್ಮಹತ್ಯೆ!

ಕೇರಳದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳು ರ್‍ಯಾಂಗಿಂಗ್‌ ಮಾಡಿದ್ದು, ಅವಮಾನ ತಾಳಲಾರದೆ ಅವನು ಮನೆಯ ಮಹಡಿಯಿಂದ ಜಿಗಿದು ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಹೆಸರು ಅಹಮ್ಮದ್ ಎಂದು ತಿಳಿದು ಬಂದಿದೆ. ಎರ್ನಾಕುಲಂನ ತಿರುವಾನಿಯೂರಿನ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಸಹಪಾಠಿಗಳಿಂದ ರ‍್ಯಾಗಿಂಗ್;  ಮನೆ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!

Kerala Ragging

Profile Deekshith Nair Jan 31, 2025 5:36 PM

ತಿರುವನಂತಪುರಂ: ಕೇರಳದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳು(Kerala Ragging) ರ್‍ಯಾಗಿಂಗ್‌ ಮಾಡಿದ್ದು, ಅವಮಾನ ತಾಳಲಾರದೆ ಅವನು ಮನೆಯ ಮಹಡಿಯಿಂದ ಜಿಗಿದು ದಾರುಣವಾಗಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಹೆಸರು ಅಹಮ್ಮದ್(Ahammed) ಎಂದು ತಿಳಿದು ಬಂದಿದೆ. ಎರ್ನಾಕುಲಂನ ತಿರುವಾನಿಯೂರಿನ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಕೇರಳದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಮೈ ಬಣ್ಣವನ್ನು ಸಹಪಾಠಿಗಳು ಹಂಗಿಸಿದ್ದಾರೆ. ಅಷ್ಟೇ ಅಲ್ಲದೆ ಟಾಯ್ಲೆಟ್‌ ಸೀಟನ್ನು ನೆಕ್ಕುವಂತೆ ಕಿರುಕುಳ ಕೊಟ್ಟೊದ್ದಾರೆ. ವಿದ್ಯಾರ್ಥಿ ಅವಮಾನ ತಾಳಲಾರದೆ ನೋವಿನಿಂದ ತನ್ನ ಮನೆಯ ಮಹಡಿಯ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



ತ್ರಿಪುಣಿತುರಾದ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಶಾಲೆಯ ಉಪ ಪ್ರಾಂಶುಪಾಲ ಜೆಇಎಂಎಸ್ ಕೊಚ್ಚಿನ್‌ನಲ್ಲಿ ಕಿರುಕುಳ ನೀಡಿರುವ ಕುರಿತು ತನಿಖೆ ನಡೆಸುವಂತೆ ಕೋರಿ ಮಕ್ಕಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಗನ ಆತ್ಮಹತ್ಯೆಯಿಂದಾಗಿ ಆತನ ತಾಯಿ ತೀರಾ ನೊಂದಿದ್ದು,ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಮನವಿ ಮಾಡಿದ್ದಾರೆ.

ತ್ರಿಪುಣಿತುರಾದ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಶಾಲೆಯ ಉಪ ಪ್ರಾಂಶುಪಾಲ ಜೆಇಎಂಎಸ್ ಕೊಚ್ಚಿನ್‌ನಲ್ಲಿ ಕಿರುಕುಳ ನೀಡಿರುವ ಕುರಿತು ತನಿಖೆ ನಡೆಸುವಂತೆ ಕೋರಿ ಮಕ್ಕಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮಗನ ಆತ್ಮಹತ್ಯೆಯಿಂದಾಗಿ ಆತನ ತಾಯಿ ತೀರಾ ನೊಂದಿದ್ದು,ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!

"ಸಂತೋಷ ಮತ್ತು ಸದಾ ಕ್ರಿಯಾಶೀಲವಾಗಿದ್ದ ನನ್ನ ಮಗನ ಸಾವಿನ ನ್ಯಾಯಕ್ಕಾಗಿ ಹೋರಾಡುತ್ತಿರುವ ದುಃಖಿತ ತಾಯಿ ನಾನು. ಆ ದುರದೃಷ್ಟಕರ ದಿನದಂದು, ಮಿಹಿರ್ ಶಾಲೆಯಿಂದ ಮಧ್ಯಾಹ್ನ 2:45 ಕ್ಕೆ ಮನೆಗೆ ಬಂದನು. ಮಧ್ಯಾಹ್ನ 3:50 ರ ಹೊತ್ತಿಗೆ, ಕೊಚ್ಚಿಯ ತ್ರಿಪುಣಿತರಾದ ಚಾಯ್ಸ್ ಪ್ಯಾರಡೈಸ್‌ನಲ್ಲಿರುವ ನಮ್ಮ ಮನೆಯ 26 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಕುಸಿದು ಹೋಗಿದ್ದೇನೆ. ನನ್ನಲ್ಲಿ ಬದುಕುವ ಆಸೆಯೂ ಉಳಿದಿಲ್ಲ" ಎಂದು ಅಹಮ್ಮದ್ ಅವರ ತಾಯಿ ರಾಜನಾ ಪಿಎಂ ಹೇಳಿದ್ದಾರೆ.